Published On: Thu, Jun 6th, 2019

ಜೇಸಿಐ ಜೋಡುಮಾರ್ಗ ನೇತ್ರಾವತಿಯಿಂದ ಪರಿಸರ ದಿನಾಚರಣೆ

ಜನರಲ್ಲಿ ಮರ ಗಿಡಗಳನ್ನು ಬೆಳೆಸುವದರ ಬಗ್ಗೆ ಜಾಗೃತಿ ಮತ್ತು ಜಾಗತಿಕ ತಾಪಮಾನ, ಮಾಲಿನ್ಯ ತಡೆಗಟ್ಟಲು ಪರಿಸರ ದಿನಾಚರಣೆಯನ್ನು ಆಚರಿಸುವುದು ಒಂದು ಉತ್ತಮ ಮಾರ್ಗ, ಹಸಿರು ಉಳಿಸಿ ಬೆಳೆಸುವುದರ ಮೂಲಕ ನಾವು ನಮ್ಮ ಮುಂದಿನ ಪೀಳಿಗೆಯವರು ಒಂದು ಉತ್ತಮ ವಾತಾವರಣದಲ್ಲಿ ಬದುಕಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಎಸ್. ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪಾಂಡುರಂಗ ನಾಯಕ್ ರವರು ಜೇಸಿಐ ಜೋಡುಮಾರ್ಗ ನೇತ್ರಾವತಿಯ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

IMG-20190605-WA0055
ಬಿ.ಸಿ.ರೋಡಿನ ಚಂಡಿಕಾ ಪರಮೇಶ್ವರೀ ದೇವಸ್ಥಾನದ ಆವರಣದಲ್ಲಿ ಮಾವು, ಚಿಕ್ಕು, ಬಿಲ್ವಪತ್ರೆ ಗಿಡಗಳನ್ನು ನೆಟ್ಟು ಅದಕ್ಕೆ ನೀರೆರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾಟಾಚಾರಕ್ಕೆ ಗಿಡನೆಡುವುದರ ಬದಲು ಅವುಗಳನ್ನು ಪೋಷಿಸಿ ಬೆಳೆಸಿ ಅವುಗಳಿಗೆ ಪ್ರತೀ ವರ್ಷ ಹುಟ್ಟು ಹಬ್ಬ ಆಚರಿಸುವುದರ ಮೂಲಕ ಪರಿಸರ ಕಾಳಜಿ ತೋರಿಸಿ ಇತರರಿಗೆ ಮಾದರಿಯಾಗಬೇಕೆಂದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜೇಸಿ ಘಟಕದ ಪೂರ್ವಾಧ್ಯಕ್ಷರೂ ಶಿಕ್ಷಕರೂ ಆಗಿರುವಂತಹ ಶ್ರೀ ರಾಮಚಂದ್ರ ರಾವ್ ರವರು ತಿಳಿಸಿದರು.

IMG-20190605-WA0058
ಪತ್ರಕರ್ತರಾದ ಶ್ರೀ ಹರೀಶ್ ಮಾಂಬಾಡಿ, ಜೇಸಿ ಅಧ್ಯಕ್ಷ ಹರ್ಷರಾಜ್ ಸಿ, ಜೇಸಿರೆಟ್ ಅಧ್ಯಕ್ಷೆ ಅಮಿತಾ ಹರ್ಷರಾಜ್, ಉಪಾಧ್ಯಕ್ಷರಾದ ಜಯರಾಜ್ ಬಂಗೇರ, ಧೀರಜ್ ಹೆಚ್, ನಿರ್ದೇಶಕರಾದ ಸುಧಾಕರ್ ವೈ, ಖಜಾಂಚಿ ಹರಿಶ್ಚಂದ್ರ ಆಳ್ವ, ಸದಸ್ಯರುಗಳಾದ ಶ್ರೀನಿಧಿ ಭಟ್, ಕೃಷ್ಣರಾಜ್ ರಾವ್, ಸುಬ್ರಹ್ಮಣ್ಯ ರಾವ್, ಜೇಜೇಸಿಗಳಾದ ವರುಣ್ ರಾಜ್, ಆದಿತ್ಯ, ತನಿಷ್ಕಾ ಉಪಸ್ಥಿತರಿದ್ದು ಪರಿಸರ ಉಳಿಸುವ ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡರು.

IMG-20190605-WA0060 IMG-20190605-WA0062 IMG-20190605-WA0063

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter