Published On: Fri, May 24th, 2019

ಮೇ.28 ಕ್ಕೆ ರೋಟರಿ ಗವರ್ನರ್ ಲೊರೆಟ್ಟೋ ಹಿಲ್ಸ್ ಗೆ ಅಧಿಕೃತ ಭೇಟಿ

ಬಂಟ್ವಾಳ ; ರೋಟರಿ ಕ್ಲಬ್ ಬಂಟ್ವಾಳ ಮುಂದಾಳತ್ವದಲ್ಲಿ ಕಳೆದ ಒಂದೂವರೆ ವರ್ಷಗಳ ಹಿಂದೆ ನೂತನವಾಗಿ ಅಸ್ತಿತ್ವಕ್ಕೆ ಬಂದ ಲೋರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಲೊರೆಟ್ಟೋ ಹಿಲ್ಸ್‍ನಲ್ಲಿ ನಿರ್ಮಿತವಾದ ಸ್ವಂತ ಕಟ್ಟಡದಲ್ಲಿ ರೋಟರಿ ಸಭಾಭವನ ಮೇ.28 ರ ಮಂಗಳವಾರ ಸಂಜೆ 6ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಕ್ಲಬ್ ಅಧ್ಯಕ್ಷ ರೋ ಪಿಎಚೆಫ್ ಅವಿಲ್ ಮಿನೇಜಸ್ ತಿಳಿಸಿದ್ದಾರೆ.IMG_20190524_180610

ಬಿ.ಸಿ.ರೋಡಿನ ಪ್ರೆಸ್‍ಕ್ಲಬ್ ನಲ್ಲಿ ಶುಕ್ರವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಾಭವನವನ್ನು ರೋಟರಿ ಜಿಲ್ಲಾ ಗವರ್ನರ್ ರೋ ಪಿಎಚ್ ಎಫ್ ರೋಹಿನಾಥ್ ಪಾದೆ ಅವರು ಉದ್ಘಾಟಿಸಲಿದ್ದು, ಲೋರೆಟ್ಟೋ ಚರ್ಚ್ ಧರ್ಮಗುರು ವಂ.ಫಾ. ಎಲಿಯಾಸ್ ಡಿಸೋಜ ಅವರು ಆಶೀರ್ವಚನ ನೀಡಲಿರುವರು. ರೋ ಪಿಎಚ್ ಎಫ್ ಪ್ರಕಾಶ್ ಕಾರಂತ,ರೋ ಪಿಎಚ್ ಎಫ್ ಸಂಜೀವ ಪೂಜಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು ಎಂದು ವಿವರಿಸಿದರು.

ಕ್ಲಬ್‍ನ ಎಲ್ಲಾ ಸದಸ್ಯರ ಸಹಕಾರ, ಮಾತೃ ಸಂಸ್ಥೆ ರೋಟರಿ ಕ್ಲಬ್ ಬಂಟ್ವಾಳ ಮಾರ್ಗದರ್ಶನದಿಂದ ಸ್ವಂತ ನಿವೇಶನದೊಂದಿಗೆ ಸ್ವಂತ ಕಟ್ಟಡ ನಿರ್ಮಾಣದ ಪ್ರಗತಿಗೆ ಸಹಕಾರವಾಯಿತು ಎಂದ ಅವರು, ರೋಟರಿ ಕ್ಲಬ್‍ನ ಇತಿಹಾಸದಲ್ಲಿಯೇ ಕ್ಲಬ್ ಪ್ರಾರಂಭಗೊಂಡು ಒಂದೂವರೆ ವರ್ಷದಲ್ಲಿಯೇ ಸ್ವಂತ ನಿವೇಶನ ಹೊಂದಿ ರೋಟರಿ ಕ್ಲಬ್‍ಗೆ ಸ್ವಂತ ಕಟ್ಟಡದೊಂದಿಗೆ ಸುಸಜ್ಜಿತ ರೋಟರಿ ಸಭಾಭವನ ನಿರ್ಮಾಣ, ಮಡಂತ್ಯಾರ್‍ನಲ್ಲಿ ಹೊಸ ಕ್ಲಬ್ ಸ್ಥಾಪನೆ ಹಾಗೂ ಸಿದ್ಧಕಟ್ಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರ್ಯಾಕ್ಟ್ ಕ್ಲಬ್ ಉದ್ಘಾಟನೆ ನಮ್ಮ ಸಾಧನೆ ಎಂದ ಅವರು, ನಮ್ಮ ಕ್ಲಬ್‍ನಲ್ಲಿ 6 ಜನ ಸದಸ್ಯರು ಪಿಎಚ್ ಎಫ್ ಸದಸ್ಯತನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯದರ್ಶಿ ರಾಮಚಂದ್ರ ಶೆಟ್ಟಿಗಾರ್, ನಿಯೋಜಿತ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್, ಪ್ರಭಾಕರ ಪ್ರಭು, ನಾರಾಯಣ ಹೆಗ್ಡೆ , ಹರಿಪ್ರಸಾದ್ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter