Published On: Fri, May 24th, 2019

ಸಿದ್ದಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಬಂಟ್ವಾಳ;    ದೇಶದಲ್ಲಿ ಬಿಜೆಪಿ ಭರ್ಜರಿಗೆಲುವು ದಾಖಲಿಸಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಿರುವ ಮತ್ತು ದ.ಕ.ಜಿಲ್ಲೆಯಲ್ಲೂ ಸಂಸದ ನಳಿನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ತಾಪಂ ಸದಸ್ಯ ಪ್ರಭಾಕರ ಪ್ರಭು ನೇತೃತ್ವದಲ್ಲಿ ಸಿದ್ದಕಟ್ಟೆ ಪೇಟೆಯಲ್ಲಿ ಮೆರವಣಿಗೆ ನಡೆಸಿ,ಸಿಹಿಹಂಚಿ,ಪಟಾಕಿ ಸಿಡಿಸಿ ಸಂಭ್ರಮಾಚರಣೆಗೈದರು.    ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರಾದ ರತ್ನಕುಮಾರ್ ಚೌಟ,ಸತೀಶ್ ಪೂಜಾರಿ,ಉಮೇಶ್ ಗೌಡ,ಮಾಧವ ಶೆಟ್ಟಿಗಾರ್,ರಾಮಕೃಷ್ಣ ನಾಯಕ್ ಕರ್ಪೆ,ಸುರೇಶ್ ಕುಲಾಲ್,ಸಂಜೀವ ಕರ್ಕೇರಾ,ಸಂದೇಶ್ ಆಚಾರ್ಯ, ನವೀನಕರ್ಪೆ,ಪ್ರಭಾಕರ ನಾಯಕ್ ಮುಗೇರು ಮೊದಲಾದವರಿದ್ದರು.
IMG-20190523-WA0099                                 ಐತಿಹಾಸಿಕ ತೀರ್ಮಾನವೇ ಗೆಲುವಿಗೆ ಕಾರಣ :ಪ್ರಭು        ಪ್ರಧಾನಿ ನರೇಂದ್ರ ಮೋದಿಯವರು  ಕಳೆದ 5 ವರ್ಷಗಳ ಅವಧಿಯಲ್ಲಿ” ನವ ಭಾರತದ ನಿರ್ಮಾಣ ಕ್ಕೆ ಘೋಷಿಸಿದ ಜಾಗತಿಕವಾದ ಐತಿಹಾಸಿಕ ತೀರ್ಮಾನಗಳೇ ಬಿ.ಜೆ.ಪಿ.ಯ ಭರ್ಜರಿ ಗೆಲುವಿಗೆ ಕಾರಣ ಎಂದು ಬಂಟ್ವಾಳ ತಾಪಂ ಸದಸ್ಯ,ಬಿಜೆಪಿ ಮುಖಂಡ ಪ್ರಭಾಕರ ಪ್ರಭು ಅಭಿಪ್ರಾಯಪಟ್ಟಿದ್ದಾರೆ. ತ್ರತೀಯ ರಂಗ ಸಹಿತ ವಿರೋಧ   ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಪ್ರರ್ಜಾವಂತ ಸಮಾಜಕ್ಕೆ  ಅವಮಾನಿಸ್ಸುವ ರೀತಿಯಲ್ಲಿ ನೀಡಿದ  ತಪ್ಪು  ಸಂದೇಶಗಳೆ ಆ ಪಕ್ಷಗಳಿಗೆ ಮುಳುವಾಗಿ ಬಿ.ಜೆ.ಪಿ. ಹೆಮ್ಮರವಾಗಿ ಬೆಳೆಯಲು ಕಾರಣವಾಯಿತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                ಕರ್ನಾಟಕ ದಲ್ಲೂ ಅಪವಿತ್ರ ಮೈತ್ರಿಯ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಜನವಿರೋಧಿ ಧೋರಣೆಗೆ ಜನತೆ ತಕ್ಕ ಶಾಸ್ತಿ ನೀಡಿದ್ದಾರೆಎಂದು ಅವರು ತಿಳಿಸಿದ್ದಾರೆ.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter