Published On: Fri, May 17th, 2019

ಮೇ ೧೮ ರಂದು ಉಡುಪಿ ರಾಜಾಂಗಣದಲ್ಲಿ ೮ ನೇ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ

ಉಡುಪಿ: ಬೆಂಗಳೂರಿನ ಜ್ಞಾನಮಂದಾರ ಅಕಾಡೆಮಿ, ಮುಂಬಯಿಯ ರಾಧಾಕೃಷ್ಣ ಅಕಾಡೆಮಿ ಮತ್ತು ಭ್ರಾಮರಿ ಯಕ್ಷನೃತ್ಯ ಕಲಾ ನಿಲಯ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ೮ ನೇ ಅಖಿಲ ಭಾರತ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನವು ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಮೇ ೧೮ ರಂದು ಬೆಳಗ್ಗೆ ೧೦.೩೦ ಸಂಜೆ ೫.೦೦ ರವರೆಗೆ ನಡೆಯಲಿದೆ ಪ್ರಕಟಣೆ ತಿಳಿಸಿದೆ.
ದೆಹಲಿ, ಚೆನ್ನೈ, ಹೈದರಬಾದ್, ಬೆಂಗಳೂರು(೨ ಸಾರಿ), ಮುಂಬಯಿ ಎರಡು ಸಾರಿ ಈ ಸಮ್ಮೇಳನಗಳು ನಡೆದಿವೆ. ಅಕಾಡೆಮಿ ವಿಶ್ವ ಕನ್ನಡ ವಚನ ಸಾಹಿತ್ಯ ಸಮ್ಮೇಳಗಳನ್ನು ಸಿಂಗಾಪುರ, ಮಲೇಶಿಯಾ, ದುಬಾಯಿ, ದೆಹಲಿಗಳಲ್ಲಿ ನಡೆಸಿದೆ.
ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿಧುಷಿ ಅಮಿತಾ ಜತಿನ್ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದ್ದು ಮುಂಬಯಿ, ಬೆಂಗಳೂರು ಮತ್ತು ಊರಿನ ಪ್ರತಿಭಾನ್ವಿತ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಕವಿಗೋಷ್ಢಿ, ವಿಚಾರ ಗೋಷ್ಠಿಗಳು ನಡೆಯಲಿವೆ.
20190516_134156
ವಚನ ಸಾಹಿತ್ಯ ಮತ್ತು ಕನ್ನಡ, ಭಾಷೆ, ಶಿಕ್ಷಣ, ಮಾಧ್ಯಮ, ಕೃಷಿ ಜಾನಪದ ವಿಷಯದ ಕುರಿತ ಗೋಷ್ಠಿಯು ಬೆಂಗಳೂರಿನ ಈಸ್ಟ್ ವೆಸ್ಟ್ ತಾಂತ್ರಿಕ ಕಾಲೇಜಿನ ಡಾ. ಎಸ್.ಜೆ ಹಿರೇಮಠ್ ಅಧ್ಯಕ್ಷತೆ ವಹಿಸಲಿರುವರು. ಮಡಿಪು ಸೂರಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮಂಜುನಾಥ್ ಎಸ್. ರೇವಣ್‌ಕರ್ ಮತ್ತು ಬೆಂಗಳೂರಿನ ಕಾವೇರಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಎನ್.ಎಸ್ ರಾಖೇಶ್ ಅತಿಥಿಗಳಾಗಿರುವರು. ಪೊಳಲಿ ಮಹೇಶ್ ಹೆಗ್ಡೆ, ಡಾ. ಪಡ್ಡಂಬೈಲ್ ಕೃಷ್ಣಪ್ಪ, ಡಾ. ಶೇಖರ ಅಜೆಕಾರು, ಪ್ರಭಾ ಸುವರ್ಣ, ಯಶ್ವಿತ್ ಕಾಳಮನೆ, ಮಾಧವ ರಾವ್, ಚಿತ್ತರಂಜನ್ ಬೋಳಾರ್, ಕೆ.ಎ.ರೋಹಿಣಿ, ದೇವಿಪ್ರಸಾದ್ ಕಾನೆತ್ತೂರು, ಕೆ.ಅನುಸೂಯ ಪೊನ್ನಪ್ಪ ಗೋಷ್ಠಿಯಲ್ಲಿ ಭಾಗವಸಹಿಲಿರುವರು.
ಧರ್ಮದರ್ಶಿ ಹರಿಕೃಷ್ಣ ಪುನರೂರು, ಮನೋಹರ್ ಎಂ.ಕೋರಿ ಮುಂಬಯಿ, ನ್ಯಾಯವಾದಿ ಗುಣಕರ್ ಶೆಟ್ಟಿ ಮುಂಬಯಿ, ಸಾಹಿತಿ ಎಸ್.ಎಸ್ ನಾಯಕ್ ಮುಂಬಯಿ ಉಪಸ್ಥಿತಿಯಲ್ಲಿ  ರಾಜ್ಯ- ಹೊರರಾಜ್ಯದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ನಡೆಯಲಿದೆ.
ಸಮಾರೋಪ: ಸಮಾರೋಪ ಸಮಾರಂಭವನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಉದ್ಘಾಟಿಸುವರು. ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮಿಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿ ಸಾಧಕರಿಗೆ ಸಮಾಜ ರತ್ನ ಪ್ರಶಸ್ತಿ ಪ್ರದಾನಿಸುವರು.
ವೇದಿಕೆಗೆ ನಡೆದಾಡುವ ದೇವರು ಖ್ಯಾತಿಯ ಡಾ. ಶಿವ ಕುಮಾರ ಸ್ವಾಮಿಗಳ ಹೆಸರನ್ನು ನೀಡಲಾಗಿದ್ದು ಸಿಧ್ಧ ಗಂಗಾ ಶ್ರೀ ಸ್ಮರಣ ಸಂಚಿಕೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ ಆಳ್ವ ಅವರು ಬಿಡುಗಡೆಗೊಳಿಸುವರು. ಬೆಂಗಳೂರು ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸುಧೀರ್ ಪೈ ಕೆ.ಎಲ್ ಸಿದ್ಧ ಗಂಗಾ ಶ್ರೀ ಕೈಲಾಸದೆಡೆಗೆ ಆಶಯ ನುಡಿ ಆಡಲಿರುವರು.
ಶಿಲೆಯ ಹೂ ಕೃತಿಯನ್ನು ಸಿಂಡಿಕೇಟ್ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಶ್ರೀಧರ ಹಂದೆ ಬಿಡುಗಡೆ ಮಾಡುವರು.
ಜ್ಞಾನಮಂದಾರ ಪೂರ್ವ ಪ್ರಾಥಮಿಕ ಕೈಪಿಡಿಯನ್ನು ಮಂಗಳೂರಿನ ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸದಾನಂದ ಶೆಟ್ಟಿ , ವಚನ ಜ್ಯೋತಿ ಕೃತಿಯನ್ನು ಮಂಗಳೂರಿನ ಶಾರದಾ ವಿದ್ಯಾಲಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಬಿ.ಪುರಾಣಿಕ್ ಲೋಕಾರ್ಪಣೆ ಮಾಡುವರು. ಮಹಾರಾಷ್ಟ್ರ ಉಚ್ಚ ನ್ಯಾಯಾಲಯ ನ್ಯಾಯವಾದಿ ಮೋರ್ಲಾ ರತ್ನಾಕರ ಶೆಟ್ಟಿ, ದಿವ್ಯಾ ಸಾಗರ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮುದ್ರಾಡಿ ದಿವಾಕರ್ ಶೆಟ್ಟಿ, ಗುರು ಕಟೀಲ್ ಸದಾನಂದ ಶೆಟ್ಟಿ, ಗುರು ಸುಕನ್ಯ ಸುಬ್ರಮಣ್ಯ ಭಟ್  ಮುಖ್ಯ  ಅತಿಥಿಗಳಾಗಿಸರುವರು ಎಂದು ಸಂಘಟಕ ಎಚ್.ಜಿ ಸೋಮಶೇಖರ್ ತಿಳಿಸಿದ್ದಾರೆ.
ರಾಧಾಕೃಷ್ಣ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳು ನೃತ್ಯ ವೈವಿಧ್ಯ, ಭ್ರಾಮರಿ ಯಕ್ಷ ನೃತ್ಯ ಕಲಾ ನಿಲಯ ವಿದ್ಯಾರ್ಥಿಗಳು ಯಕ್ಷಗಾನ, ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿಯ ವಿದ್ಯಾರ್ಥಿಗಳು ಜಾನಪದ ನೃತ್ಯ ರೂಪಕವನ್ನು ಮತ್ತು ಮುಂಬಯಿಯ ಅಮಿತ ಕಲಾಮಂದಿರ ವಿದ್ಯಾರ್ಥಿಗಳು ಸಾಂಸ್ಕೃತಿಕ ವೈಭವ ನೀಡಲಿರುವರು.
ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಸಾಹಿತ್ಯಾಸಕ್ತರು, ವಚನ ಸಾಹಿತ್ಯ ಅಭಿಮಾನಿಗಳು ಪಾಲ್ಗೊಳ್ಳ ಬಹುದು.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter