Published On: Wed, May 15th, 2019

ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕಲಶೋತ್ಸವ

ಕೈಕಂಬ:ಮಲ್ಲೂರು ಶ್ರೀ ಮಹಾಲಿಂಗೇರ್ಶವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ದೇರೆಬೈಲು ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡ ಬ್ರಹ್ಮಕಲಶಾಭಿಷೇಕವು 8.5ಕ್ಕೆ ವಿಜ್ರಂಭಣೆಯಿಂದ ನಡೆಯಿತು. ಶ್ರೀ ಮಹಾಗಣಪತಿ ದೇವರಿಗೆ 25 ಕಲಶ, ಶ್ರೀ ದುರ್ಗಾಪರಮೇಶ್ವರೀ ದೇವಿಗೆ 25 ಕಲಶ ಹಾಗೂ ಶ್ರೀ ಮಹಾಲಿಂಗೇಶ್ವರನಿಗೆ 108 ಕಲಶಾಭಿಷೇಕ ನಡೆಯಿತು.IMG-20190514-WA0164

maloor 3ಮಧ್ಯಾಹ್ನ ಮಹಾಪೂಜೆ , ಪಲ್ಲಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಬೆಳಗ್ಗೆನಿಂದಲೇ ಸಾವಿರಾರು ಜನರು ದೇವಸ್ಥಾನಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಪ್ರಯುಕ್ತ ಭಕ್ತಿಸಂಗೀತ, ಗೀತಾ ಸಾಹಿತ್ಯ ಸಂಭ್ರಮ, ರಾತ್ರಿ ರಂಗಪೂಜೆ , ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಚಾ ಪರ್ಕ ಖ್ಯಾತಿಯ ದೇವದಾಸ್ ಕಾಪಿಕಾಡ್ ತಂಡದಿಂದ ಹಾಸ್ಯಮಯ ನಾಟಕ “ಪನಿಯೆರೆ ಆವಂದಿನ” ತುಳು ನಾಟಕ ಪ್ರರ್ಶನಗೊಂಡಿತು.maloor1

maloor 2ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಧ್ಯಕ್ಷ ಪುರುಷೋತ್ತಮ ಕೊಟ್ಟಾರಿ,ಅಧ್ಯಕ್ ರಮೇಶ್ ಆಳ್ವ, , ಡಾಮಂಜಯ್ಯ ಶೆಟ್ಟಿ ಗುಂಡಿಲಗುತ್ತು,ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಆಳ್ವ, ಕೋಶಾಧಿಕಾರಿ ಪ್ರದೀಪ್ ನಾಯ್ಕ್ ದೆಮ್ಮಲೆ,ರಾಜೇಶ್ ಆಚಾರ್ಯ ಮಲ್ಲೂರು,ಪವಿತ್ರ ಕುಕ್ಯಾನ್, ಜೀಣೋದ್ಧಾರ ಸಮಿತಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಭಾಷ್ ಶೆಟ್ಟಿ ದೆಮ್ಮಲೆ, ದೇವಳದ ಅರ್ಚಕ ರಮೇಶ್ ಕಾರಂತ ,ಕಾರ್ಯದರ್ಶಿ ಶ್ರೀನಿವಾಸ ಸುವರ್ಣಹಾಗೂ ಸಾವಿರಾರು ಭಕ್ತರು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter