Published On: Mon, May 13th, 2019

ಶಂಭೂರು ಧೂಮಾವತಿ ಬಂಟ ಸಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವ

ಬಂಟ್ವಾಳ:  ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಕೊಪ್ಪಳ, ಕೊದಂಟಿಯಡ್ಕ ಶಂಭೂರು ಧೂಮಾವತಿ ಬಂಟ ಸಪರಿವಾರ ದೈವಗಳ ದೈವಸ್ಥಾನದ ದೈವಗಳ ಪ್ರತಿಷ್ಠಾ ಮಹೋತ್ಸವ  ಕಾರ್ಯಕ್ರಮ ಪಳನೀರು ಅನಂತ ಭಟ್ ತಂತ್ರಿಯವರ ನೇತ್ರತ್ವದಲ್ಲಿ ಬೆಳಿಗ್ಗೆ 7.10 ರ ವೃಷಭ ಲಗ್ನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು , ಆರ್.ಎಸ್.ಎಸ್.ಪ್ರಮುಖ ಕಲ್ಲಡ್ಕ ಡಾ!ಪ್ರಭಾಕರ ಭಟ್ ಹಾಗೂ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
 ಬಳಿಕ ನಡೆದಸಭಾ ಕಾರ್ಯಕ್ರಮ ದಲ್ಲಿ ಆಶೀರ್ವಚನ ನೀಡಿದ ಒಡಿಯೂರು ಕ್ಷೇತ್ರದ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ , ಬದುಕಿಗೆ ಆತ್ಮವಿಶ್ವಾಸ ಸಿಗುವುದು ಇಂತಹ ಧಾರ್ಮಿಕ ಕೇಂದ್ರಗಳ ಮೂಲಕ.ಧಾರ್ಮಿಕ ಕೇಂದ್ರ ಗಳು ಉಳಿದಿರುವುದು ಬೆಳೆದಿರುವುದು ತುಳು ಬಾ಼ಷೆಯ ಮೂಲಕ .ತುಳು ಸಂಸ್ಕೃತಿಗೆ ಜಾನಪದ ಬಹಳ ಪ್ರಾಮುಖ್ಯತೆ ಪಡೆದಿದೆ.
ಜಾನಪದಗಳ ಮೂಲಕ ಜಿಲ್ಲೆಯ ಜೀವನ ಶೈಲಿ ಅಡಗಿದೆ.ಹಾಗಾಗಿ ತುಳು ಭಾಷೆಗೂ ಜಾನಪದ ಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ಅವರು ಹೇಳಿದರು. ‌
IMG_3521
ತುಳು ಭಾಷೆಯ ಮೂಲಕ ಜಿಲ್ಲೆಯ ಧರ್ಮ  ಉಳಿದಿದೆ.ತುಳು ಭಾಷೆಗಳನ್ನು ಮಕ್ಕಳಿಗೆ ತಿಳಿಸುವ ಕೆಲಸ ಪ್ರತಿ ತಾಯಂದಿರು ಮಾಡಬೇಕಾಗಿದೆ.ಅಮೂಲಕ ಶೃದ್ದಾ ಭಕ್ತಿಯ ಗೌರವ ಉಳಿಸುವ ಕೆಲಸ ಮಾಡಬೇಕು ಎಂದರು.
 ಧಾರ್ಮಿಕ ಕಾರ್ಯಕ್ರಮಳು ತುಳು ಭಾಷೆಗಳ ಮೂಲಕ  ಮತ್ತು ದೈವ  ದೇವರುಗಳ ಆರಾಧನೆ ನಡೆಯಲಿ, ಇತ್ತೀಚಿನ ದಿನಗಳಲ್ಲಿ ಬಾರೀ ಬದಲಾವಣೆಯಿಂದ ಶೃದ್ದಾಕೇಂದ್ರಗಳ , ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದರು.
ಧಾರ್ಮಿಕ ಕೇಂದ್ರಗಳ ಬೆಳವಣಿಗೆ ಗೆ ಒಗ್ಗಟ್ಟಿನ ಕೆಲಸ ಮಾಡೋಣ ಎಂದರು. ಮೂಲನಂಬಿಕೆ ಗಟ್ಟಿಯಾಗಲು ತಿಳಿವಳಿಕೆಯ ಜ್ಞಾನ ವನ್ನು ವೃದ್ದಿಸಬೇಕು . ನಾಲಿಗೆಯ ಲ್ಲಿ ಸಂಪತ್ತ ಆಪತ್ತು ಗಳೆರಡು ಉಂಟು . ಹಾಗಾಗಿ ಮಾತು ಮುತ್ತಿನಂತೆ ಇರಲಿ ಎಂದರು. ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ಮಾಜಿ ಮುಖ್ಯ ಮಂತ್ರಿಯವರ ಆಪ್ತ ಕಾರ್ಯದರ್ಶಿ ಜಗನ್ನಾಥ ಬಂಗೇರ ವಹಿಸಿದ್ದರು.
ಕರ್ನಾಟಕ ರಾಜ್ಯ ಸಂಸ್ಕಾರ ಭಾರತಿ ಲೋಕ ಕಲಾ ವಿಭಾಗ ಪ್ರಮುಖ್ ತುಳುವ ಬೊಳ್ಳಿ ದಯಾನಂದ ಜಿ.ಕತ್ತಲಸಾರ್ ಧಾರ್ಮಿಕ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಗೌರವ ಸಲಹೆಗಾರರಾದ ಗುತ್ತಿನ ಮನೆಯವರು , ದಕ್ಷಿಣದ ಶಿರ್ಡಿ ಸಾಯಿಬಾಬಾ ಮಂದಿರದ ಅಧ್ಯಕ್ಷ ಸೂರಜ್ ಕುಮಾರ್ ಶಂಭೂರು, ಬೊಂಡಾಲ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ, ಉದ್ಯಮಿಗಳಾದ ರಘು ಸಪಲ್ಯ, ಪ್ರವೀಣ್ ಕುಮಾರ್, ಪದ್ಮನಾಭ ಮಯ್ಯ, ಶರತ್ ಶೆಟ್ಟಿ ಕಕ್ಕೆಮಜಲು, ನವೀನ್ ಶೆಟ್ಟಿ, ಜಗನ್ನಾಥ್ ಶೆಟ್ಟಿ, ಪ್ರಶಾಂತ್ ಕೊಪ್ಪಳ, ರಾಜೇಶ್ ಜೀವಿತ ಕುಲಾಲ್ ಮುಂಬಾಯಿ ಹಾಗೂ ಸಮಿತಿ ಕಾರ್ಯದರ್ಶಿ ಕೇಶವ ಬರ್ಕೆ, ಉಪಾಧ್ಯಕ್ಷ ರುಗಳಾದ ಪ್ರಶಾಂತ್ ಕೊಪ್ಪಳ, ರಾಜೇಶ್ ಶೇಡಿಗುರಿ, ನೋಣಯ್ಯ ರೆಂಜಮಾರು, ಗಣೇಶ್ ಪ್ರಸಾದ್  ಭಂಡಾರದ ಮನೆ, ನಿರಂಜನ ಕೊಲ್ಲೂರು, ಕೋಶಾಧಿಕಾರಿ ಬೋಜರಾಜ್ ಕೊಪ್ಪಳ, ಜೊತೆ ಕಾರ್ಯದರ್ಶಿ ಗಳಾದ ರಾಮಚಂದ್ರ ಪದೆಂಜಿಮಾರ್, ದಿನೇಶ್ ರವುಲುಮಜಲ್, ತೇಜಸ್ ಬರ್ಕೆ, ದಯಾನಂದ ಅಡೆಪಿಲ, ಸತೀಶ್ ಕೊಪ್ಪಳ ಹಾಗೂ ಊರಿನ ಭಕ್ತರು
 ಮತ್ತಿತರರು ಉಪಸ್ಥಿತರಿದ್ದರು.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಆನಂದ ಎ. ಶಂಭೂರು ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿ ಗಳನ್ನು ಸ್ವಾಗತಿಸಿದರು.
ಕೇಶವ ಬರ್ಕೆ ಧನ್ಯವಾದ ನೀಡಿದರು.
ಜಿನ್ನಪ್ಪ ಕುದ್ರೆಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ದೇವಸ್ಥಾನ ದ ಜೀರ್ಣೋದ್ಧಾರ ಕ್ಕೆ ಶ್ರಮಿಸಿದ ದಾನಿಗಳನ್ನು, ಕಟ್ಟಡ ನಿರ್ಮಾಣ ಮಾಡಿದವರನ್ಬು  ವೇದಿಕೆಯಲ್ಲಿ ಸನ್ಮಾನಿಸಲಾಯಿತು.-

Attachments area

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter