Published On: Sat, May 11th, 2019

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಮನವಿ

ಕೋಲಾರ-ಮೇ.10: ಸಾವಿರಾರು ಕೋಟಿ ವ್ಯವಹಾರ ನಡೆಯುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಪೊಲೀಸ್ ವರಿಷ್ಠಾಧಿಕಾರಿಗಳಾದ ರೋಹಿಣಿ ಕಟೋಚ್ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.

Raitha sangha a.p.m.c s.p news 0-05-2019 (2)

ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾದ ಕೋಲಾರ ಎ.ಪಿ.ಎಂ.ಸಿ. ರೈತರ ಒಡನಾಡಿ ಹಾಗೂ ಸಾವಿರಾರು ಕೋಟಿ ವ್ಯವಹಾರ ನಡೆಯುವ ಜೊತೆಗೆ ಟೆಮೋಟೋ ಅವಕ ಪ್ರಾರಂಭವಾಗಿದ್ದು, ಇಲ್ಲಿನ ಮಾರುಕಟ್ಟೆ ದೇಶಕ್ಕೆ ಅಲ್ಲ ಹೊರದೇಶಕ್ಕೂ ಟೆಮೋಟೋ ರಪ್ತಾಗುತ್ತದೆ. ಈ ಸಮಯದಲ್ಲಿ ಸಾವಿರಾರು ಜನ ಕಾರ್ಮಿಕರು ಹಾಗೂ ದಲ್ಲಾಳಿದಾರರು ಟೆಮೋಟೋ ಕೊಳ್ಳಲು ಬರುತ್ತಾರೆ. ಪ್ರತಿ ದಿನ ಸಾವಿರಾರು ಕೋಟಿ ವ್ಯವಹಾರ ನಡೆಯುವ ಜೊತೆಗೆ ಮಾರುಕಟ್ಟೆ ಕಿರಿದಾಗಿರುವುದರಿಂದ ಲಾರಿ ಮಾಲೀಕರಿಗೆ ಮತ್ತು ತರಕಾರಿ ಮಂಡಿ ಮಾಲೀಕರಿಗೆ ಜಗಳಗಳು ಸಹ ಆಗುತ್ತದೆ. ಈ ಹಿಂದೆ ಇದ್ದ ಪೊಲೀಸ್‍ನ್ನು ಸುಮಾರು 4 ತಿಂಗಳಿಂದ ಬೇರೆ ಕಡೆ ಕೆಲಸದ ನಿಮಿತ್ತ ನಿಯೋಜನೆ ಮಾಡಿರುತ್ತಾರೆ. ಆದರೆ ಈಗಾಗಲೇ ಮಾರುಕಟ್ಟೆಯ ಅವ್ಯಸ್ಥೆಯ ಬಗ್ಗೆ ಅನೇಕಬಾರಿ ಹೋರಾಟಗಳ ಮುಖಾಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರೂ ಇದುವರೆವಿಗೂ ಜಾಗದ ಸಮಸ್ಯೆ ಬಗೆ ಹರಿಸುವಲ್ಲಿ. ವಿಫಲವಾಗಿದೆ. ಜೊತೆಗೆ ಹೊರ ರಾಜ್ಯದ ಕಾರ್ಮಿಕರು ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿನ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಕೂಡಲೇ ಒಬ್ಬ ಪೊಲೀಸ್ ಪೇದೆಯನ್ನು ನೇಮಕ ಮಾಡಿ ತಾವುಗಳು ಆದೇಶ ಹೊರಡಿಸಿ, ಮುಂದೆ ಆಗುವ ಕಾನೂನು ಅವ್ಯವಸ್ಥೆಯನ್ನು ಕಾಪಾಡಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಪೊಲೀಸ್ ವರಿಷ್ಠಾಧಿಕಾರಿಗಳಾದ ರೋಹಿಣಿ ಕಟೋಚ್ ರವರು ಮಾತನಾಡಿ ಚುನಾವಣೆಯ ಒತ್ತಡ ಇದ್ದ ಕಾರಣ ಸಿಬ್ಬಂದಿ ಕೊರತೆಯಿಂದ ಮಾರುಕಟ್ಟೆಯಲ್ಲಿದ್ದ ಪೊಲೀಸ್ ಪೇದೆಯನ್ನು ಬೇರೆ ಕಡೆ ನಿಯೋಜನೆ ಮಾಡಿದ್ದೆವು. ಟೆಮೋಟೋ ಅವಕ ಹೆಚ್ಚಾಗಿರುವ ಕಾರಣ ಕೂಡಲೇ ಪೊಲೀಸ್‍ನ್ನು ನಿಯೋಜನೆ ಮಾಡಿ ಶಾಂತಿ ಸುವ್ಯವಸ್ಥೆಯಾಗಿ ಕಾನೂನು ವ್ಯವಸ್ಥೆಯನ್ನು ಕಾಪಾಡುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಉದಯ್‍ಕುಮಾರ್, ಮು.ತಾ.ಅ ಪಾರುಕ್‍ಪಾಷ, ವಿಜಯಪಾಲ್, ಶಂಕರ್, ಪುತ್ತೇರಿ ರಾಜು, ಮುಂತಾದವರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter