ಕೆಟ್ಟಗುಣಗಳಿಂದ ಮುಕ್ತಿ-ಸಮಾಜದಲ್ಲಿ ಅಶಾಂತಿ ದೂರ: ಇರುವೈಲು ಬ್ರಹ್ಮಕಲಶ ಧಾರ್ಮಿಕ ಸಭೆಯಲ್ಲಿ ಪೇಜಾವರ ಕಿರಿಯ ಸ್ವಾಮೀಜಿ
ಮೂಡುಬಿದಿರೆ: ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯು ನಡೆಯಿತು.
ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗುಡಿಯಲ್ಲಿ ಮಾತ್ರ ದೇವರನ್ನು ಪೂಜಿಸಿದರೆ ಸಾಲದು. ಇನ್ನೊಬ್ಬರಿಗೆ ದೈಹಿಕವಾಗಿ ಮಾನಸಿಕವಾಗಿ ಹಿಂಸೆ ಮಾಡದಿರುವುದೇ ದೊಡ್ಡ ಪೂಜೆ. ಒಳ್ಳೆಯ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕೆಟ್ಟ ಗುಣಗಳನ್ನು ದೂರೀಕರಿಸಬೇಕು. ಹೀಗಾದಾಗ ಸಮಾಜದಲ್ಲಿನ ಅಶಾಂತಿ ನಿವಾರಣೆಯಾಗುತ್ತದೆ. ದೇವಾಲಯಗಳು ಇದಕ್ಕೆ ಸ್ಫೂರ್ತಿಯ ತಾಣಗಳಾಗಿವೆ ಎಂದು ಹೇಳಿದರು.
ಹಿರಿಯ ಧಾರ್ಮಿಕ ಮುಖಂಡ ಮಿಜಾರುಗುತ್ತು ಆನಂದ ಆಳ್ವ ಅಧ್ಯಕ್ಷತೆ ವಹಿಸಿದರು. ಪಂಜ ಭಾಸ್ಕರ ಭಟ್ ಬ್ರಹ್ಮಕಲಶೋತ್ಸವದ ಮಹತ್ವವನ್ನು ವಿವರಿಸಿದರು.ಶಿಬರೂರು ಗೋಪಾಲಕೃಷ್ಣ ತಂತ್ರಿ ಧಾರ್ಮಿಕ ಮಹತ್ವದ ಕುರಿತು ಮಾತನಾಡಿದರು.
ಸ್ಥಳೀಯರಾದ ಬಾಡ ಪೂಜಾರಿ ಪಾಣಿಲ, ಮಾರ್ಕ್ ಪಿಂಟೋ ಬೋಲ್ಕೆ, ಸುಂದರಿ ಪೂಜಾರಿ ತ್ಯಾಂಪೆಟ್ಟು, ಸಂತೋಷ್ ಶೆಟ್ಟಿ ಜಾರ್ಕಳ ಅವರನ್ನು ಸನ್ಮಾನಿಸಿಲಾಯಿತು.
ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಕೆಲ್ಲಪುತ್ತಿಗೆ ಭೂತರಾಜ ಗುಡ್ಡೆಯ ಆಡಳಿತ ಮೊಕ್ತೇಸರ ಕೆ.ಪಿ ಜಗದೀಶ ಅಧಿಕಾರಿ, ಮಿಜಾರು ವಿಷ್ಣುಮೂರ್ತಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಮಿಜಾರು, ಉದ್ಯಮಿ ಭಾಸ್ಕರ ಸುಬ್ಬಯ್ಯ ಕೋಟ್ಯಾನ್, ಮುಂಬೈ ಉದ್ಯಮಿ ಉಮೇಶ್ ಕರ್ಕೇರ ಭಾಗವಹಿಸಿದರು.
ಉದ್ಯಮಿ ಶ್ರೀಪತಿ ಭಟ್, ಹೇಮಲತಾ ಐ ವಿ ಅಸ್ರಣ್ಣ, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪೂವಪ್ಪ ಸಾಲ್ಯಾನ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಗೌರವಾಧ್ಯಕ್ಷ ದೊಡ್ಡಗುತ್ತು ಭುಜಂಗ ಆರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೂವಪ್ಪ ಸಾಲ್ಯಾನ್ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು. ದೊಡ್ಡಗುತ್ತು ಪ್ರಸಾದ್ ಶೆಟ್ಟಿ ವಂದಿಸಿದರು.