Published On: Mon, Apr 22nd, 2019

ಮುತ್ತುರು ಸತ್ಯಸಾರಮಾನಿ ದೈವದ ವರ್ಷಾವಧಿ ನೇಮೊತ್ಸವ ಧಾರ್ಮಿಕ ಸಭೆ

ಕೈಕಂಬ:ಸತ್ಯಸಾರಮಾನಿ ದೈವ ಕ್ಷೇತ್ರ ಮುತ್ತೂರು ಇದರ ವರ್ಷಾವಧಿ ನೇಮೊತ್ಸವದ ಪ್ರಯುಕ್ತ ಧಾರ್ಮಿಕ ಸಭೆ, ಸಾಧಕರಿಗೆ ಸನ್ಮಾ ಮತ್ತು ತುಳುನಾಡ ಸಿರಿ ಸತ್ಯೊಲು ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದ ದಲಿತ ಅಭಿವೃದ್ಧಿ ಸಮಿತಿ ದ.ಕ.ಮತ್ತು ಉಡುಪಿ ಇದರ ಸಂಚಾಲಕರಾದ ದಾಸಪ್ಪ ಎಡಪದವು ಮತನಾಡಿ ಸುಮಾರು 450-500ವರ್ಷಗಳ ಹಿಂದೆ ತುಳುನಾಡಿನ ವೀರ ಪುರುಷರಾಗಿದ್ದ ಕಾನದ ಕಟದರಿಗೆ ವೈಜ್ಞಾನಿ ಜ್ಞಾನವಿತ್ತು ಬಂಡೆಗಲ್ಲಿ ಅಡಿಯಲ್ಲಿದ್ದ ನೀರನ್ನು ಗುರುತಿಸಿ ಮೆಲಕ್ಕೆ ಹರಿಸಿದ ವೀರರು

22vp darmika sabeಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಇಂತಹ ವೀರ ಪುರುಷರಂತೆ ನಾವೂ ಕೂಡ ಜೀವನದಲ್ಲಿ ಸಾಧನೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಮುತ್ತೂರು ಕ್ಷೇತ್ರದ ಪ್ರಧಾನ ಅರ್ಚಕ ಹರಿಯಪ್ಪ ಮುತ್ತೂರು ಈ ಕ್ಷೇತ್ರಕ್ಕೆ ಮುಂದಿನ ವರ್ಷ ದಶಮಾನೋತ್ಸವ ವರ್ಷವಾಗಿದ್ದು ಉಚಿತ ಸಾಮೂಹಿಕ ವಿವಾಹ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಶ್ರೀನಿವಾಸ್ ಎಂ.ಎಸ್.ಮಿಜಾರು ಬರೆದಿರುವ ಕಾನದಕಟದ ವೀರಪುರುಷರ ಕುರಿತಾದ “ತುಳುನಾಡ ಸಿರಿಸತ್ಯೊಲು ಎಸಲ್ ಒಂಜಿ ಪುಸ್ತಕ ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯ್ತು.ಕಾನದಕಟದ ದೈವಗಳ ಕುರಿತ ಸಂಶೋಧನಾ ಪ್ರಬಂಧ ಮಂಡನೆಮಾಡಿರುವ ಡಾ//ಯಶ್ ಕುಮಾರ್,ಹಿನ್ನಲೆ ಸಂಗೀತ ಗಾಯಕ ಪ್ರಶಾಂತ್ ಕಂಕನಾಡಿ, ಶ್ರೀನಿವಾಸ್ ಎಂ.ಎಸ್.ತೋಡಾರು ಇವರುಗಳನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.

22vp darmika sabe-ಅಳದಂಗಡಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ ಕುಕ್ಕೇಡಿ, ರಾಜೀವ್ ಕಕ್ಕೆಪದವು, ಪರಮೇಶ್ವರ,ಕೃಷ್ಣನಡುಮನೆ, ಸಂಜೀವ ಚಿಕ್ಕಮಂಗಳೂರು, ಜನಾರ್ಧನ ಚೆಂತಿಮಾರು, ಗುರುವಪ್ಪ ಮುತ್ತೂರು, ಅಚ್ಯುತ ಸಂಪಿಗೆ, ಟಿ.ಹೊನ್ನಯ್ಯ ಸಾಣೂರು ಸತೀಶ್ ಸಾಲ್ಯಾನ್, ರಾಜಾಪಲ್ಲಮಜಲು, ಹೊನ್ನಯ್ಯ ಮುಚ್ಚೂರು, ಸತ್ಯಸಾರಮಾನಿ ಸೇವಾ ಸಮಿತಿಯ ಅದ್ಯಕ್ಷ ಗೋಪಾಲ್ ಮುತ್ತೂರು, ಗೌರವಾಧ್ಯಕ್ಷ ಸಂಜೀವ ಮುತ್ತೂರು, ಪ್ರದೀಕ್ ಪಿ ಮುಂತಾದವರು ಉಪಸ್ಥಿತರಿದ್ದರು.ಲೋಕೇಶ್ ಮುತ್ತೂರು ಸ್ವಾಗತಿಸಿ ವಿನೋದ ಅಭಿನಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter