Published On: Mon, Apr 22nd, 2019

ಶ್ರೀ ಅಮೃತೇಶ್ವರ ದೇವಸ್ಥಾನದ ರಥೋತ್ಸವ

ಕೈಕಂಬ : ವಾಮಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರಾ ಮಹೋತ್ಸವದಂಗವಾಗಿ ಭಾನುವಾರ ಸಂಜೆ ಬ್ರಹ್ಮ ರಥೋತ್ಸವ ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನ ಮತ್ತು ರಥ ಎಳೆಯುವ ವಿಶಾಲ ಗದ್ದೆ ಪ್ರದೇಶದಲ್ಲಿ ಸಾವಿರಾರು ಭಕ್ತರು ನೆರೆದಿದ್ದರು.22vp rathosthava

22vprathosthavaಮಧ್ಯಾಹ್ನ ದೇವರು ರಥದಲ್ಲಿ ಆದ ಬಳಿಕ ಪೂಜಾ ವಿಧಿವಿಧಾನಗಳು ನೆರವೇರಿತು ಸಂಜೆ 8 ಗಂಟೆಗೆ ರಥದಲ್ಲಿ ಪೂಜೆ ನೆರವೇರಿಸಿತು. ಬಳಿಕ ನೂರಾರು ಮಂದಿ ಚೆಂಡಿನ ಗದ್ದೆಯವರೆಗೆ ರಥ ಎಳೆದರು. ಈ ಸಂದರ್ಭದಲ್ಲಿ ಭಕ್ತರಿಂದ ದೇವರ ಭಾರೀ ಉದ್ಘೋಷ ಕೇಳಿ ಬಂತು. ಜೊತೆಗೆ ನಿರಂತರ ಸಿಡಿದ ಸುಡ್ಡುಮದ್ದು ಆಕಾಶದೆತ್ತರಕ್ಕೆ ಚಿಮ್ಮಿ, ಎಲ್ಲೆಡೆ ಬೆಳಕು ಪಸರಿಸಿತು. ಇದಕ್ಕಿಂತ ಮುಂಚೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ `ಗಾನ ವೈಭವ’ ಜರುಗಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter