Published On: Fri, Apr 19th, 2019

ನಕಲಿ ಮತದಾನ : ಮೂವರ ಬಂಧನ

ಬಂಟ್ವಾಳ: ಲೋಕಸಭೆ ಚುನಾವಣೆ ಸಂದರ್ಭ ಬಂಟ್ವಾಳ ಕ್ಷೇತ್ರದ ಮೂರು ಮತಗಟ್ಟೆಗಳಲ್ಲಿ ನಕಲಿ ಮತದಾನಕ್ಕೆ ಯತ್ನಿಸಿದ ಪ್ರಕರಣಗಳು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಕಲ್ಲಡ್ಕದ ಮಹಮ್ಮದ್ ಶಾಫಿ, ಕೊಡಂಗೆಯಲ್ಲಿ ಅನ್ವರ್ ಮತ್ತು ಮೊಹಮ್ಮದ್ ಶಫೀಕ್ ವಶಕ್ಕೊಳಗಾದವರು. ಇದರ ಜತೆಗೆ ಪ್ರಕರಣವೊಂದರಲ್ಲಿ ನಕಲಿ ಮತದಾನ ಮಾಡಿದವರ ವಿರುದ್ಧ ಮತಗಟ್ಟೆ ಅಧಿಕಾರಿ ಕ್ರಮ ಕೈಗೊಳ್ಳದೇ ಇರುವ ಬಗ್ಗೆಯೂ ದೂರು ನಗರ ಠಾಣೆಯಲ್ಲಿ ದಾಖಲಾಗಿದೆ.
ಪ್ರಕರಣಗಳ ವಿವರ: 
೧೭೭ನೇ ಮತಗಟ್ಟೆಯಾದ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕದಲ್ಲಿ ಮಜೀದ್ ರೆಹಮಾನ್ ಹೆಸರಲ್ಲಿ ಆಧಾರ್ ಕಾರ್ಡ್ ಹಾಜರುಪಡಿಸಿದ ಸಂದರ್ಭ, ಅಲ್ಲಿದ್ದ ಏಜಂಟ್ ಈತ ಮಹಮ್ಮದ್ ಶಾಫಿ ಎಂದು ತಿಳಿಸಿದ್ದು, ಮತ್ತೊಬ್ಬರ ಹೆಸರಲ್ಲಿ ಮತ ಚಲಾಯಿಸಲು ಆಗಮಿಸಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಕೊಡಂಗೆಯ ೧೨೨ನೇ ಮತಗಟ್ಟೆಯಲ್ಲಿ ಎರಡನೇ ಸಲ ಮತ ಚಲಾಯಿಸಲು ಆಗಮಿಸಿದ ಆರೋಪದಲ್ಲಿ ಅನ್ವರ್ (೩೦) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ನೀಡಿದ ದೂರಿನಂತೆ ಕ್ರಮ ಕೈಗೊಳ್ಳಲಾಗಿದ್ದು, ನಕಲಿ ಮತದಾನ ಮಾಡಿದವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವ ಬಗ್ಗೆಯೂ ದೂರು ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ೧೨೩ನೇ ಕೊಡಂಗೆ ಮತಗಟ್ಟೆಯಲ್ಲಿ ಮತದಾರರ ಪಟ್ಟಿಯಲ್ಲಿ ಇಲ್ಲದ ಮೊಹಮ್ಮದ್ ಶಫೀಕ್ (೧೯) ಎಂಬಾತನನ್ನೂ ದಸ್ತಗಿರಿ ಮಾಡಲಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter