Published On: Mon, Apr 15th, 2019

ಪ್ರಧಾನಿ ಮೋದಿಯಿಂದಾಗಿ ಹೆಮ್ಮೆ ಯಿಂದ ಮತ ಕೇಳುವಂತಾಗಿದೆ : ಗಣೇಶ್ ಕಾರ್ಣಿಕ್

ಪ್ರಧಾನಿ ಮೋದಿ ಯವರ ಯೋಜನೆಗಳು ,ಉತ್ತಮ ಆಡಳಿತ ವೈಖರಿಯಿಂದಾಗಿ ಇಂದು ಭಾರತೀಯ ಜನತಾ ಪಾರ್ಟಿ ಯ ಕಾರ್ಯಕರ್ತರಿಗೆ ಮತದಾರರಲ್ಲಿ ಹೆಮ್ಮೆಯಿಂದ ಮತ ಕೇಳುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ . ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆ ಯಂತೆ ದೇಶ ದ ೧೩೦ ಕೋಟಿ ಜನರ ವಿಕಾಸ ವಾಗಿದೆ ಸ್ವಾವಲಂಬಿಗಳಾಗಿ ಬದುಕುವ ವ್ಯವಸ್ಥೆ ನಿರ್ಮಾಣವಾಗುತ್ತಿದೆ , ಪ್ರಪಂಚ ಭಾರತ ವನ್ನು ನೋಡುವ ದೃಷ್ಟಿ ಕೋನ ಬದಲಾಗುತ್ತಿದೆ , ಮೋದಿಯವರು ವಿಶ್ವ ನಾಯಕ ನಾಗುವ ಎಲ್ಲ ಲಕ್ಷಣ ಗಳು ಗೋಚರಿಸುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಪುದು ಮಹಾ ಶಕ್ತಿ ಕೇಂದ್ರ ವ್ಯಾಪ್ತಿಯ ಫರಂಗಿಪೇಟೆ ಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

IMG_3925 news
ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ , ಮಂಗಳೂರು ವಿಧಾನ ಸಭಾ ಕ್ಷೇತ್ರ ದ ಬಿ ಜೆ ಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ರವರು , ಸಂಸದ ನಳಿನ್ ಕುಮಾರ್ ಕಟೀಲ್ ಪರ ಮತ ಕೋರಿ ಭಾಷಣ ಮಾಡಿದರು
ವೇದಿಕೆಯಲ್ಲಿ ವಿಕಾಸ್ ಪುತ್ತೂರು , ಚುನಾವಣಾ ಉಸ್ತುವಾರಿ ರಾಧಾ ಕೃಷ್ಣ ಬುಡಿಯಾರ್ , ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ , ತಾಲೂಕ ಪಂಚಾಯತ್ ಸದಸ್ಯ ಗಣೇಶ್ ಸುವರ್ಣ ತುಂಬೆ , ಎ ಪಿ ಮ್ ಸಿ ಸದಸ್ಯ ವಿಠ್ಠಲ್ ಸಾಲ್ಯಾನ್ , ಬಿ ಜೆ ಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು , ಶಶಿರಾಜ್ ಶೆಟ್ಟಿ ಕೊಳಂಬೆ , ಪ್ರವೀಣ್ ಶೆಟ್ಟಿ ಸುಜೀರು , ಮನೋಹರ್ ಕೊಟ್ಟಾರಿ , ಜಯಶ್ರೀ ಕರ್ಕೇರ , ಮತ್ತಿತರರು ಉಪಸ್ಥಿತರಿದ್ದರು
ಮಂಗಳೂರು ವಿಧಾನ ಸಭಾ ಕ್ಷೇತ್ರ ದ ಬಿ ಜೆ ಪಿ ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ ಸ್ವಾಗತಿಸಿದರು , ಪುದು ಮಹಾ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ ವಂದಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter