Published On: Mon, Apr 15th, 2019

ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡ್ ನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜರಗಿತು. ಪಿಂಚಣಿದಾರರ ಸಂಘದ ಅಧ್ಯಕ್ಷ ಬಿ.ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ನಿವೃತ್ತ ಉಪಪ್ರಾಂಶುಪಾಲ ಮತ್ತು ರಾಣಿ ಅಬ್ಬಕ್ಕ ತು ಳು ಅಧ್ಯಯನ ಕೇಂದ್ರ ದ ಅಧ್ಯಕ್ಷ ತುಕಾರಾಮ ಪೂಜಾರಿ , ನಿವೃತ್ತ ಉಪನ್ಯಾಸಕ ಮತ್ತು ಪ್ರಸಿಧ್ದ ಯಕ್ಷಗಾನ ಕಲಾವಿದ ಮಧುಕರ ಮಲ್ಯ , ಬಂ.ತಾಲೂಕು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ನೇರಾವು ಮತ್ತು ಪಿಂಚಣಿದಾರ ರ ದ.ಕ.ಜಿಲ್ಲಾ ಪ್ರತಿನಿಧಿ ಮೋಹನ್ ನಂಬಿಯಾರ್, ಉಪಾಧ್ಯಕ್ಷರು ಗಳಾದ ಎ.ಲಿಂಗಪ್ಪ ಕೈಕುಂಜೆ , ವಿ.ಸೋಮಪ್ಪ, ಎನ್.ಕೃಷ್ಣರಾಜ ಶೆಟ್ಟಿ , ಸಂಘಡನಾ ಕಾರ್ಯದರ್ಶಿಗ ಳಾದ ರಮೇಶ್ ಭಟ್, ಚಂದ್ರಶೇಖರ ಗಟ್ಟಿ ಉಪಸ್ಥಿತರಿದ್ದರು.

KAR_9935
ಲಯನ್ ಲೋಕನಾಥ ಶೆಟ್ಟಿ, ಕೆ.ಚಂದು ನಾಯಕ್, ಎಂ.ರಾಘವನ್ ನಾಯರ್ ಮತ್ತು ದಿನಕರ್ ಸನ್ಮಾನಿತರ ನ್ನು ಪರಿಚಯಿಸಿದರು.
ಹಿರಿಯ ಪಿಂಚಣಿದಾರ ಸದಸ್ಯರುಗಳಾದ ಎ.ರಾಮಚಂದ್ರ ಭಟ್ ಮೊಡಂಕಾಪು, ಎನ್.ರಾಮಚಂದ್ರ ನರಿಕೊಂಬು, ದೇಜಪ್ಪ ಕೋಡಿ ನರಿಕೊಂಬು, ಬಿ.ರಾಮಚಂದ್ರ ರಾವ್ ಅಲೆತ್ತೂರು, ಕೆ.ಪರಮೇಶ್ವರ ಕರಿಂಗಾಣ, ಕೆ.ರಾಘವಾಚಾರ್ ಸಂಚಯಗಿರಿ, ಕೆ.ನಾರಾಯಣ ನಾಯಕ್ ಕರ್ಪೆ, ತುಕ್ರ ಗಟ್ಟಿ ಯಾನಿ ಶಿವಪ್ಪ ಗಟ್ಟಿ ಸಜಿಪ-ಮುನ್ನೂರು, ನಾಯಾಯಣ ಶೆಟ್ಟಿ ಪೂಂಜೆರೆಕೋಡಿ, ಕೆ.ನೇಮು ಮೊಡಂಕಾಪು, ಬಿ.ಕೃಷ್ಣ ಮಂಜೇಶ್ವರ ಮತ್ತು ರ ವೀಂದ್ರ ನಾಯಕ್ ಮೊಗರ್ನಾಡು ಇವರುಗಳನ್ನು ಸನ್ಮಾನಿಸಲಾಯಿತು.

KAR_9946
ಪ್ರಧಾನ ಕಾರ್ಯದರ್ಶಿ ನೀಲೋಜಿರಾವ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ಲೆಕ್ಕಪತ್ರ ಮಂಡಿಸಿದರು. ಎನ್.ಶಿವಶಂಕರ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ದಾಮೋದರ್ ವಂದಿಸಿ ಸೇಸಪ್ಪ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter