Published On: Tue, Feb 26th, 2019

ಎಸ್.ಡಿ.ಎಮ್ ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ

ವಾಮಂಜೂರು:ತಾಂತ್ರಿಕ ಶಿಕ್ಷಣಕ್ಕೆ ಇತ್ತೀಚಿನ ದಿನಗಳಲ್ಲಿ ತುಂಬಾ ಮಹತ್ವವಿದೆ. ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಲು ತಾಂತ್ರಿಕ ಶಿಕ್ಷಣವು ತುಂಬಾ ಪ್ರಾಮುಖ್ಯತೆ ಪಡೆದಿರುತ್ತದೆ. ಐ.ಟಿ.ಐ ಎಂಬುದು ಬಡವರ ಎಂಜಿನಿಯರಿಂಗ್ ಕಾಲೇಜು ಇದ್ದಂತೆ, ಇದನ್ನು ಯುವಜನತೆ ಸದುಪಯೋಗ ಪಡಿಸಿಕೊಳ್ಳಬೇಕು, ದೇಶದ ಪ್ರಗತಿಗೆ ಕೈಗಾರಿಕಾ ಅಭಿವೃದ್ಧಿ ಬಹಳ ಪ್ರಮುಖವಾದುದು ಎಂದು ಸಂತ ಎಲೋಶಿಯಸ್ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ವಿನ್ಸೆಂಟ್ ಮೆಂಡೋನ್ಸಾರವರು ಎಸ್.ಡಿ.ಎಮ್. ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆ ಇದರ ವಾರ್ಷಿಕೋತ್ಸವ ಸಮಾರಂಭದಲ್ಲಿ ಉದ್ಘಾಟಕರಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.IMG_2536

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಅಗಮಿಸಿದ ಶ್ರೀ ನಿರಂಜನ್ ಅಲಿಯೂರು ಉಪನ್ಯಾಸಕರು, ಸರಕಾರಿ ಪದವಿಪೂರ್ವ ಕಾಲೇಜು ಮುತ್ತೂರು ಇವರು ವಿದ್ಯಾರ್ಥಿಗಳಿಗೆ ಕಥೆ ಮತ್ತು ದೃಷ್ಟಾಂತಗಳ ಮೂಲಕ ಕಲಿಕೆಯ ಮಹತ್ವ ಮತ್ತು ಬದುಕಿನ ಸಾರ್ಥಕತೆ ಬಗ್ಗೆ ತಿಳಿ ಹೇಳಿದರು.

26-0
ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೊ.ಎ.ರಾಜೇಂದ್ರ ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿಕೊಡಿದ್ದರು. ಸಭೆಯಲ್ಲಿ, ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಗಣೇಶ್ ಭಟ್, ಪ್ರೌಢಶಾಲಾ ಮುಖ್ಯೋಪಾಧ್ಯಾರಾದ ರಮೇಶ್ ಆಚಾರ್ಯ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾರಾದ ಶ್ರೀಮತಿ ಮಾರ್ಯೆಟ್ ಮಸ್ಕರೇನಸ್ ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ನರೇಂದ್ರ ಇವರು ಆಗಮಿಸಿದ ಎಲ್ಲಾ ಗಣ್ಯ ವ್ಯಕ್ತಿಗಳನ್ನು ಸ್ವಾಗತಿಸಿದರು. ತರಬೇತಿ ಅಧಿಕಾರಿಯಾದ ಶ್ರೀಮತಿ ಫ್ಲಾವಿಯಾ ಜೆ.ಎಸ್ ಡಿಸೋಜ ಇವರು ಸಂಸ್ಥೆಯ ವಾರ್ಷಿಕ ವರದಿಯನ್ನು ಮಂಡಿಸಿದರು.ವಿವಿಧ ಸಂಸ್ಥೆಗಳಿಂದ ವಾರ್ಷಿಕೋತ್ಸವಕ್ಕೆ ಬಂದ ಶುಭಾಶಯಗಳನ್ನು ಶ್ರೀಮತೀ ರಾಜೇಶ್ವರಿ ,ಕಿರಿಯ ತರಬೇತಿ ಅಧಿಕಾರಿ ವಾಚಿಸಿದರು.

ಸಮಾರಂಭವನ್ನು ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳಾದ ಕುಮಾರಿ ಪ್ರಿಯಾ ಹಾಗೂ ಶ್ರೀಮತಿ ಪ್ರಸನ್ನ ಶೆಟ್ಟಿ ಇವರು ನಿರೂಪಿಸಿದರು. ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಶ್ರೀ ಸುಜಿತಾ ಇವರು ವಂದಿಸಿದರು. ಸಂಸ್ಥೆಯ ತರಬೇತುದಾರರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter