Published On: Mon, Feb 11th, 2019

ರಾಮ ನಾಮ ಜಪ ಮಾತ್ರ ದಿಂದ ಜೀವನ ಪಾವನ ವಾಗುವುದು : ತಾರಾನಾಥ ಕೊಟ್ಟಾರಿ 

ಫರಂಗಿಪೇಟೆ :    ರಾಮ ನಾಮ ಜಪ ಮಾತ್ರ ದಿಂದ ಜೀವನ ಪಾವನ ವಾಗುವುದು , ದುರಿತ ಗಳೆಲ್ಲವೂ  ದೂರವಾಗುವುದು ರಾಮ ನಾಮ ದ  ಶಕ್ತಿ ಅಪಾರವಾದುದು . ರಾಮಾವತಾರಕ್ಕಿಂತಲೂ ಮೊದಲೇ ರಾಮ ನಾಮ ತಾರಕ ಮಂತ್ರ ಪಠಣ ವಾಗುತ್ತಿತ್ತೆಂದು ಪುರಾಣಗಳಲ್ಲಿ ಉಲ್ಲೇಖವಿದೆ ಎಂದು ಧಾರ್ಮಿಕ ಮುಖಂಡ ಶ್ರೀ ರಾಮ ನಾಮ ತಾರಕ ಜಪ ಯಜ್ಞ ದ ಅಧ್ಯಕ್ಷ ತಾರಾನಾಥ್ ಕೊಟ್ಟಾರಿಯವರು ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮಾ ಭಜನಾ ಮಂದಿರ ಬ್ರಹ್ಮರಕೂಟ್ಲು ಇಲ್ಲಿ ನಡೆದ ಶ್ರೀ ರಾಮ ನಾಮ ತಾರಕ ಜಪ ಯಜ್ಞ ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು .IMG_3579
 ತುಂಬೆ ,ಪುದು, ಕಳ್ಳಿಗೆ ,ಕೊಡ್ಮಣ್ ,ಮೇರಮಜಲು,  ಗ್ರಾಮ ಗಳ ಸಮಾಜ ಭಾಂದವರು 21 ದಿನಗಳ ವೃತ ದೀಕ್ಷೆ ಯೊಂದಿಗೆ 1 ಕೋಟಿ ರಾಮ ನಾಮ ಜಪ ಮಾಡಲಿದ್ದಾರೆ .  ಏಪ್ರಿಲ್ 7 ರಂದು ಕಳ್ಳಿಗೆ ಗ್ರಾಮ ದ ಪೆರಿಯೊಡು ಬೀಡು ಬಳಿ ನಡೆಯುವ  ಯಜ್ಞ ದಲ್ಲಿ ಸ್ವತಃ ಆಹುತಿ ನೀಡುವ ಮೂಲಕ  ಭಾಗವಹಿಸುತ್ತಾರೆ  ಎಂದು   ಶ್ರೀ ರಾಮ ನಾಮ ತಾರಕ ಜಪ ಯಜ್ಞ ದ ಮಾಹಿತಿ ನೀಡಿದರು ಶ್ರೀ ರಾಮ ನಾಮ ತಾರಕ ಜಪ ಯಜ್ಞ ದ ಸಂಚಾಲಕರಾದ  ದಾಮೋದರ್ ನೆತ್ತರಕೆರೆ ಯವರು ಮಾತನಾಡಿ ಪಾಶ್ಚತ್ಯ ಸಂಸ್ಕೃತಿ ಗೆ ಒಗ್ಗಿ ಕೊಂಡ ಸಮಾಜ ದ ಜಾಡ್ಯ ವನ್ನು ತೊಲಗಿಸಿ ನಮ್ಮಯುವಕರಿಗೆ  ಸಂಸ್ಕಾರ ಸಂಸ್ಕೃತಿ ಯನ್ನು ಪುನರಪಿ ಮೂಡಿಸುವ ಕಾರ್ಯ ವಾಗಬೇಕು.  ಸಮಸ್ತರಿಗೂ ಯಜ್ಞ ದಿಂದ  ಮಂಗಳ ವಾಗಲಿದೆ ಎಂದರು .
ಈ ಸಂದರ್ಭ ದಲ್ಲಿ  ಕನಪಾಡಿತ್ತಾಯ ದೈವಸ್ಥಾನದ ಮೊಕ್ತೇಸರರಾದ ಬಿ ರಾಜಶೇಖರ್ ರೈ  ,ಕನಪಾಡಿತ್ತಾಯ ದೈವ ಪಾತ್ರಿ  ದೂಮ ಮೂಲ್ಯ , ರಾಷ್ಟ್ರಿಯ ಸ್ವಯಂ ಸೇವಕ ಸಂಘ ಪುತ್ತೂರು ಜಿಲ್ಲಾ ಸಂಘ ಚಾಲಕರಾದ ಕೊಡಮಣ್ಣು ಕಾಂತಪ್ಪ ಶೆಟ್ಟಿ , ಶಶಿಧರ ಬ್ರಹ್ಮರಕೊಟ್ಲು , ಭಾಸ್ಕರ ಚೌಟ ಕುಮುದೇಲು , ಸೋಮಪ್ಪ ಕೋಟ್ಯಾನ್ , ಗಣೇಶ್ ಸುವರ್ಣ ತುಂಬೆ ,  ಚಂದ್ರಹಾಸ್ ಶೆಟ್ಟಿ ರಂಗೋಲಿ , ಪ್ರವೀಣ್ ಬಿ ತುಂಬೆ , ಸೋಮಪ್ಪ ಸುವರ್ಣ ದರಿಬಾಗಿಲು , ಸುರೇಶ ಬೆಂಜನ ಪದವು , ವಿಠ್ಠಲ ಸಾಲ್ಯಾನ್ , ಜ್ಯೋತಿಂದ್ರ ಶೆಟ್ಟಿ ಮುಂಡಾಜೆ , ನವೀನಚಂದ್ರ ಶೆಟ್ಟಿ ಮುಂಡಾಜೆ , ಪದ್ಮನಾಭ ಶೆಟ್ಟಿ ಪುಂಚಮೆ , ಗಿರೀಶ್ ಶೆಟ್ಟಿ ಕುಂಪನಮಜಲು , ಪ್ರವೀಣ್ ಜ್ಯೋತಿಗುಡ್ಡೆ ,ಉಮೇಶ್ ರೆಂಜೋಡಿ ,  ಸದಾಶಿವ ಡಿ ತುಂಬೆ , ಎಂ ಆರ್ ನಾಯರ್ , ಶಾಂತ ಡಿ ಚೌಟ , ದಿವಾಕರ ಶೆಟ್ಟಿ ಕುಪ್ಪಿಲ , ಉದಯ ಕುಮಾರ್ ಜ್ಯೋತಿಗುಡ್ಡೆ , ನವೀನ್ ಕಲ್ಲಗುಡ್ಡೆ , ರಮೇಶ್ ಉಪಾದ್ಯಾಯ ವಕೀಲರು ಮತ್ತಿತರರು ಉಪಸ್ಥಿತರಿದ್ದರು  , ಮನೋಹರ ಕಂಜತ್ತೂರ್ ಸ್ವಾಗತಿಸಿದರು , ಜಗದೀಶ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter