Published On: Sun, Feb 10th, 2019

ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ 13 ಜೋಡಿಗೆ ಉಚಿತ ಸಾಮೂಹಿಕ ವಿವಾಹ, ಸಾಧಕರಿಗೆ ಪ್ರಶಸ್ತಿ ಪ್ರದಾನ

ಬಂಟ್ವಾಳ:ಸಮಾಜಮುಖಿ ಚಿಂತನೆ ಹೊಂದಿರುವ ಸಂಘ ಸಂಸ್ಥೆಗಳು ಕ್ರಿಯಾಶೀಲ ಚಟುವಟಿಕೆ ಮೂಲಕ ಬಡ ಜನರಿಗಾಗಿ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ದೇಶದಲ್ಲಿ ಎಲ್ಲರೂ ಸಮಾನವಾಗಿ ಬೆಳೆದು ಒಟ್ಟು ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.7

ಇಲ್ಲಿನ ಪುಂಜಾಲಕಟ್ಟೆಯಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಭಾನುವಾರ ಏರ್ಪಡಿಸಿದ್ದ 11ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಂಟ್ವಾಳ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ನೇತೃತ್ವದಲ್ಲಿ ಕಳೆದ 11 ವರ್ಷಗಳಿಂದ ನಡೆಯುತ್ತಿರುವ ಉಚಿತ ಸಾಮೂಹಿಕ ವಿವಾಹ ಸಾವಿರಾರು ಮಂದಿಗೆ ಅನುಕೂಲವಾಗಿದೆ ಎಂದರು. ಉದ್ಯಮಿ ವಸಂತ ಪೈ ಬದಿಯಡ್ಕ ಕಾರ್ಯಕ್ರಮ ಉದ್ಘಾಟಿಸಿದರು.

5
ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಉಚಿತ ಸಾಮೂಹಿಕ ವಿವಾಹಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತೀ ಜೋಡಿಗೆ ಸರ್ಕಾರದಿಂದ ವಿಶೇಷ ಸಹಾಯಧನ ಲಭಿಸುತ್ತದೆ ಎಂದರು. ಜಿಲ್ಲಾ ಬಿಜೆಪಿ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್, ವಕೀಲೆ ಸ್ವರ್ಣಲತಾ ಹೆಗ್ಡೆ ಬೆಂಗಳೂರು, ಉದ್ಯಮಿಗಳಾದ ನಿತ್ಯಾನಂದ ಪೂಜಾರಿ ಕೆಂತಲೆ, ವಸಂತ ಹೆಗ್ಡೆ ಬೆಂಗಳೂರು, ಮೋಹನ ಚೌದರಿ, ಓಂ ಪ್ರಸಾದ್, ಹರೀಂದ್ರ ಪೈ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಮೇಶ ಕುಡ್ಮೇರು, ಪ್ರಭಾಕರ ಪ್ರಭು, ಪ್ರಮುಖರಾದ ರವಿ ಕಕ್ಯಪದವು, ದಯಾನಮದ ಕತ್ತಲ್ಸಾರ್, ಲೋಕರಾಜ ವಿಟ್ಲ, ಉಮೇಶ ಪೂಜಾರಿ, ಮಂಜಪ್ಪ ಮೂಲ್ಯ, ಯೋಗೀಶ ಶೆಟ್ಟಿ ಜೆಪ್ಪು, ಯಶೋಧರ ಶೆಟ್ಟಿ ದಂಡೆ, ಸಮಿತಿ ಪದಾಧಿಕಾರಿಗಳಾದ ರಾಜೇಶ್ ಪಿ.ಬಂಗೇರ, ಅಬ್ದುಲ್ ಹಮೀದ್, ರತ್ನಾಕರ ಪಿ.ಎಂ., ಮಾಧವ ಬಂಗೇರ, ಗುರಿಕಾರ ಗಿರೀಶ ಸಾಲ್ಯಾನ್ ಮತ್ತಿತರರು ಇದ್ದರು.1

ಇದೇ ವೇಳೆ ಗುರುವಾಯನಕೆರೆ ಕೃಷ್ಣಭಟ್ ಪೌರೋಹಿತ್ಯದಲ್ಲಿ ಒಟ್ಟು 13 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.ಆರಂಭದಲ್ಲಿ ಸ್ಥಳೀಯ ಬಸವನಗುಡಿ ಶ್ರೀ ಬಸವೇಶ್ವರ ದೇವಾಲಯದಿಂದ ಹೊರಟ ಆಕರ್ಷಕ ದಿಬ್ಬಣ ಮೆರವಣಿಗೆಯಲ್ಲಿ ವಿವಿಧ ಸ್ಥಬ್ಧಚಿತ್ರ ಸಹಿತ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗ, ಬ್ಯಾಂಡು ವಾದ್ಯ, ಕೊಂಬು, ಚೆಂಡೆ, ಡೊಳ್ಳುಕುಣಿತ ಗಮನ ಸೆಳೆಯಿತು.3

6

8

ಪ್ರಶಸ್ತಿ ಪ್ರದಾನ:
ಮುಂಬೈ ಸಮಾಜ ಸೇವಕ ಶ್ರೀನಿವಾಸ ಪಿ.ಸಪಲ್ಯ (ಸಮಾಜ ಸೇವೆ), ಸುಂದರ ಹೆಗ್ಡೆ (ಚಲನಚಿತ್ರ), ಅಶೋಕ್ ಚೂಂತಾರು(ಕೃಷಿ), ಸದಾಶಿವ ಆಚಾರ್ಯ (ಉದ್ಯಮ), ಕುಳಾಯಿ ಕಲಾಕುಂಭ ಸಾಂಸ್ಕೃತಿಕ ವೇದಿಕೆ (ಸಂಘಟನೆ) ಇವರಿಗೆ ರಾಜ್ಯ ಮಟ್ಟದ ‘ಸ್ವಸ್ತಿಸಿರಿ’ ಮತ್ತು ರವಿ ರೈ ಕಳಸ (ಚಲನಚಿತ್ರ), ಹೊನ್ನಪ್ಪ ಪೂಜಾರಿ (ಸಂಘಟನೆ), ಡಾ.ರಾಮಕೃಷ್ಣ ಎಸ್.(ಸಮಾಜ ಸೇವೆ), ಎಸ್.ಪಿ.ಸರಪಾಡಿ (ಕಲೆ), ಅನ್ವಿಷಾ ವಾಮಂಜೂರು (ಸಾಂಸ್ಕೃತಿಕ), ಕಾವ್ಯಶ್ರೀ ಜೋಡುಕಲ್ಲು (ಯೋಗ), ಪುರಂದರ ಹೆಗ್ಡೆ (ಸರ್ಕಾರಿ ಸೇವೆ), ಸಚಿನ್ ಅತ್ತಾಜೆ (ಕಲೆ), ರಾಮ ಪಿ.ಸಾಲ್ಯಾನ್ (ಶಿಕ್ಷಣ) ಇವರಿಗೆ ಸ್ವಸ್ತಿಕ್ ಸಂಭ್ರಮ ಪುರ್ಕರ ನೀಡಿ ಗೌರವಿಸಲಾಯಿತು.

4
ಕ್ಲಬ್ಬಿನ ಮಾಜಿ ಅಧ್ಯಕ್ಷ ಪಿ.ಎಂ.ಪ್ರಭಾಕರ ಸ್ವಾಗತಿಸಿ, ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷ ಪ್ರಶಾಂತ ಪುಂಜಾಲಕಟ್ಟೆ ವಂದಿಸಿದರು. ದಿನೇಶ ಸುವರ್ಣ ಕುದ್ಕೋಳಿ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter