Published On: Sun, Feb 10th, 2019

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಸಿರುವಾಣಿ ಹೊರೆಕಾಣಿಕೆ ಸಭೆ

ಪೊಳಲಿ: ಇತಿಹಾಶ ಪ್ರಸಿದ್ಧ   ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವವು  ಮಾ.4 ರಿಂದ  ಮಾ.13 ರವರೆಗೆ ನಡೆಯುವ  ಬ್ರಹ್ಮಕಲಶೋತ್ಸವಕ್ಕೆ  ಹಸಿರುವಾಣಿ ಹೊರೆಕಾಣಿಕೆ  ಸಲ್ಲಿಸುವ  ಆಂಗವಾಗಿ    ಮಂಗಳೂರು ಉತ್ತರ ವಲಯದ  ಸಭೆಯನ್ನು ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಲ್ಯಾಣಮಂಟಪದಲ್ಲಿ ಮಾಜಿ ಮುಜರಾಯಿ ಸಚಿವ ಬಿ. ನಾಗರಾಜ ಶೆಟ್ಟಿ ಅವರ ಮುಂದಾಳ್‍ತ್ವದಲ್ಲಿ ಭಾನುವಾರ ಸಭೆ ನಡೆಸಲಾಯಿತು.IMG-20190210-WA0012

IMG-20190210-WA0069

ಪೊಳಲಿ  ಜೀರ್ಣೋದ್ಧಾರಗೊಂಡ ದೇವಸ್ಥಾನದ  ಬ್ರಹ್ಮಕಲಶೋತ್ಸವಕ್ಕೆ ಹಸಿರುವಾಣಿ ಹೊರೆಕಾಣಿಕೆಯನ್ನು ನೀಡುವ ಕುರಿತು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಧ್ಯಕ್ಷ ಬಿ. ನಾಗರಾಜ ಶೆಟ್ಟಿ  ಮಾಹಿತಿ ನೀಡಿದರು.   ಮಂಗಳೂರು ಉತ್ತರ  ಹಾಗೂ ಕಾವೂರು ಬೋಂದೆಲ್ , ಪದವಿನಂಗಡಿ, ಕೂಳೂರು, ಸುರತ್ಕಲ್  ಇನ್ನಿತರ ಎಲ್ಲಾ ಭಾಗದ ಭಕ್ತಾಧಿಗಳು ಮಾ. 8. ರಂದು ಶುಕ್ರವಾರ 3 ಗಂಟೆಯ ಒಳಗೆ ಹೊರೆಕಾಣಿಕೆ ನೀಡಲು ವಿನಂತಿಸಿ ಭಕ್ತಾಭಿಮಾನಿಗಳಿಂದ ಸಲ್ಲಿಸಬಹುದಾದ ಹಸಿರುವಾಣಿ ಹೊರೆಕಾ ಣಿಕೆಯ ವಿವರ ನೀಡಿದರು. ಶ್ರೀ ಮಹಲಿಂಗೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗಗೆ ಮೂಡುಶೆಡ್ಡೆ ವಾಮಂಜೂರು ಗುರುಪುರ ಭಾಗದ ಭಕ್ತಾಧಿಗಳು ಹಸಿರುವಾಣಿಹೊರೆಕಾಣಿಕೆಯನ್ನು ಶ್ರೀ ಕ್ಷೇತ್ರ ಪೊಳಲಿಗೆ ಒಪ್ಪಿಸುವುದೆಂದು ತೀರ್ಮಾಣಿಸಲಾಯಿತು.IMG-20190204-WA0047

IMG-20190210-WA0072ಸಂದೀಪ್ ಶೆಟ್ಟಿ ಮರವೂರು,ದೀಪಕ್ ಪೂಜಾರಿ ಕಾ ರ್ಪರೇಟರ್ ,ರಂದೀಪ್ ಕಾಂಚನ್,ಮಹಲಿಂಗೇಶ್ವರ ದೇವಸ್ಥಾನದ ಮೊಕ್ತೆಸರ ತುಕರಾಮ್ ಸನಿಲ್‍ಮತ್ತು ಸುಮಂತ್ ರಾವ್ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಸುಧಾಕರ ಆಳ್ವ , ಸದಾಶಿವ ಶೆಟ್ಟಿ ಬೊಲ್ಪುಗುಡ್ಡೆ,ಚಂದ್ರಾಹಾಶ ಶೆಟ್ಟಿ, ರಾಮಸೇನೆಯ ರಾಜ್ಯ ಸಂಚಾಲಕ ಪ್ರಸಾದ್ ಅತ್ತಾವರ, ಧರ್ಮಸ್ಥಳ ಗ್ರಾಮೀಣ ಯೋಜನಾಧಿಕಾರಿ ಉಮರಬ್ಬ ,ಎ. ಲೋಕೇಶ್ ಭಂಡಾರಿ, ಅವಿನಾಶ್ ನಾಯಕ್ ಗೂ ಊರಿನ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter