Published On: Sat, Feb 9th, 2019

ಬೆಂಜನಪದವು: ಕೈನೆಟಿಕ್ ವಾಹನ ಕಳವು

ಬಂಟ್ವಾಳ: ತಾಲ್ಲೂಕಿನ ಬೆಂಜನಪದವು ಶಿವಾಜಿನಗರ ಸಮೀಪದ ರಾಜೇಶ್ವರಿ ಸ್ಟೀಲ್ ಕಂಪೆನಿ ಬಳಿ ನಿಲ್ಲಿಸಲಾಗಿದ್ದ ಕೈನೆಟಿಕ್ ದ್ವಿಚಕ್ರ ವಾಹನವನ್ನು ಶನಿವಾರ ರಾತ್ರಿ ಕಳ್ಳರು ಎಗರಿಸಿ ಪರಾರಿಯಾದ ಘಟನೆ ನಡೆದಿದೆ.
ತುಮಕೂರಿನ ನಿವಾಸಿ ಅಬ್ದುಲ್ ರಶೀದ್ ಎಂಬವರ ಪುತ್ರ ಅಬ್ದುಲ್ ಅಜೀಝ್ ಎಂಬವರು ಶನಿವಾರ ರಾತ್ರಿ ನಿಲ್ಲಿಸಿದ್ದ ಕೈನೆಟಿಕ್ ಭಾನುವಾರ ಬೆಳಿಗ್ಗೆ ನಾಪತ್ತೆಯಾಗಿದೆ ಎಂದು ಗ್ರಾಮಾಂತರ ಠಾಣೆ ಪೊಲಿಸರಿಗೆ ದೂರು ಸಲ್ಲಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter