Published On: Sat, Feb 9th, 2019

ಮಾಣಿಯಲ್ಲಿ ಸಂತೆ ಮಾರುಕಟ್ಟೆಗೆ ಶಿಲಾನ್ಯಾಸ

ಬಂಟ್ವಾಳ:    ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಂಟ್ವಾಳ ಇದರ ವತಿಯಿಂದ ತಾಲೂಕಿನ ಮಾಣಿಯಲ್ಲಿ ನಬಾರ್ಡ್  ಯೋಜನೆಯಡಿ ೫೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಸಂತೆ ಮಾರುಕಟ್ಟೆಗೆ ಶನಿವಾರ ಶಿಲಾನ್ಯಾಸ ನೆರವೇರಿತು.KAR_8624
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸುವ ಯೋಜನೆಗಳಿಗೆ ಪೂರಕವಾಗಿ, ಕೃಷಿಕರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವಲ್ಲಿ ಎಪಿಎಂಸಿಯ ಜವಬ್ದಾರಿ ಮಹತ್ತರವಾದುದು, ಈ ನಿಟ್ಟಿನಲ್ಲಿ ಪದ್ಮನಾಭ ರೈ ಮತ್ತು ಟೀಮ್ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.                           ಎರಡು ಹೆದ್ದಾರಿಗಳು ಸಂಗಮಿಸುವ ಸ್ಥಳವಾದ ಮಾಣಿ ಸಂತೆ ತನ್ನದೇ ಆದ ಇತಿಹಾಸ ಹೊಂದಿದ್ದು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಮಾಣಿಯ ಸಂತೆ ಮಾರುಕಟ್ಟೆಯ ಶುಚಿತ್ವಕ್ಕೆ ಪೂರಕವಾಗಿ ಶೌಚಾಲಯ ನಿರ್ಮಾಣಕ್ಕೆ ಶಾಸಕನ ನೆಲೆಯಲ್ಲಿ ಅನುದಾನ ಒದಗಿಸುವುದಾಗಿ ಅವರು ಭರವಸೆ ನೀಡಿದರು.KAR_8626
ಮಾಜಿಸಚಿವ ಬಿ.ರಮಾನಾಥ ರೈ ಮಾತನಾಡಿ ಬಂಟ್ವಾಳ ತಾಲೂಕಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಮುಖ್ಯ ಮಾರುಕಟ್ಟೆಯಾಗಿದೆ. ಕೃಷಿಕರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರ ಎಂದು ತಿಳಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಪಿಎಂಸಿ ಯಾರ್ಡ್ ನಿರ್ಮಾಣದ ಜೊತೆಗೆ ಮಾಣಿ ಹಾಗೂ ಮಣಿನಾಲ್ಕೂರು ಸಂತೆ ಮಾರುಕಟ್ಟೆ ನಿರ್ಮಾಣ ದ ಮೂಲಕ ಕೃಷಿಕರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದರು.KAR_8631
ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ, ಎಪಿಎಂಸಿ  ಸದಸ್ಯರಾದ ನೇಮಿರಾಜ ರೈ, ಚಂದ್ರಶೇಖರ ರೈ, ದಿವಾಕರ ಪಂಬದಬೆಟ್ಟು, ಬಾಲಕೃಷ್ಣ ಕಲ್ಲಡ್ಕ, ಮಾಣಿ ಗ್ರಾ.ಪಂ.ಅಧ್ಯಕ್ಷೆ ಮಮತಾ ಶೆಟ್ಟಿ, ಸಂಪಾವತಿ, ತಾ.ಪಂ.ಸದಸ್ಯ ಮಂಜುಳಾ, ಎಪಿಎಂಸಿ ಕಾರ್ಯದರ್ಶಿ ಭಾರತಿ, ಬಂಟ್ವಾಳ ತಾಲ್ಲೂಕು ಕೃಷಿಕ ಸಮಾಜದ ಸದಸ್ಯ ರಮಾನಾಥ ವಿಟ್ಲ  ಉಪಸ್ಥಿತರಿದ್ದರು.
ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
,

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter