ಜೇಸಿಐ ಪರ್ಕಳ ಘಟಕದ ವತಿಯಿಂದ ಗಣರಾಜ್ಯೋತ್ಸವ ಆಚರಣೆ
ಕಾಸರಗೋಡು: ಎಪ್ಪತ್ತನೇ ವರ್ಷದ ಗಣರಾಜ್ಯೋತ್ಸವವನ್ನು ಜೇಸಿಐ ಪರ್ಕಳ ಘಟಕದ ವತಿಯಿಂದ ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ಆಚರಿಸಲಾಯಿತು. ಭಾರತೀಯ ಸೈನ್ಯದ ಯೋಧರಾದ ಶ್ರೀ ಕೃಷ್ಣಪ್ಪರವರು, ಜೇಸಿಐ ವಲಯ 15ರ ಪ್ರಾಂತ್ಯ ‘ಸಿ ‘ ವಲಯ ಉಪಾಧ್ಯಕ್ಷ ಜೇಎಫ್ಎಂ.ದೇವೇಂದ್ರ ಎಸ್. ನಾಯಕ್ ಮತ್ತು ವಲಯ ಸಂಯೋಜಕಿ ಜೇಸಿ ಎಚ್.ಜಿ.ಎಫ್ ಆಶಾ ಬಾಬು ರವರ ಗೌರವ ಉಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ಘಟಕಾಧ್ಯಕ್ಷೆ ಜೇಎಫ್ಎಂ. ವಿನುತಾ ಸ್ವಾಗತಿಸಿದರು. ಯೋಜನಾಧಿಕಾರಿ ಜೇಸಿ ಅನಿಲ್ ರಾವ್ ಮತ್ತು ಜೇಜೆಸಿ ಸಂಯುಕ್ತ ಮತ್ತು ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪಲ್ಲವಿ ಶೆಣೈ ವಂದಿಸಿದರು. ಕಾರ್ಯಕ್ರಮದ ಬಳಿಕ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಲಾಯಿತು.