Published On: Mon, Jan 14th, 2019

ಶ್ರೀಕೃಷ್ಣ ಮಂದಿರಅಮ್ಟೂರುಇದರ19ನೇ ವಾರ್ಷಿಕೋತ್ಸವ

ಶ್ರೀಕೃಷ್ಣ ಮಂದಿರಅಮ್ಟೂರುಇದರ19ನೇ ವಾರ್ಷಿಕೋತ್ಸವು 29.12.2018ರಂದು ಬೆಳಿಗ್ಗೆ ಗಣಹೋಮ ಸತ್ಯನಾರಾಯಣ ಪೂಜೆಯೊಂದಿಗೆ ಪ್ರಾರಂಭಗೊಂಡು ಮಧ್ಯಾಹ್ನ ಸಭಾಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಅಧ್ಯಕ್ಷತೆಯನ್ನುಬೂಬ ಪೂಜಾರಿ ಕೂಳೂರು ಇವರು ವಹಿಸಿದ್ದರು.
ಮಾತನಾಡುವುದು ಸುಲಭಅದೇರೀತಿ ನಡೆದುಕೊಳ್ಳುವುದು ಕಷ್ಟ.ಅದಕ್ಕಾಗಿ ಮಂದಿರದಂತಹಧಾರ್ಮಿಕ ಕೇಂದ್ರಗಳ ಮೂಲಕ ಸಾಮಾಜಿಕಚಟುವಟಿಕೆ ಮಾಡುವುದುಒಂದುಉತ್ತಮವಾದ ಕೆಲಸ ಎಂದು ಶ್ಲಾಘಿಸಿದರು.ಮಾತನಾಡಿದಂತೆ ನಡೆದುಕೊಳ್ಳಲುಪ್ರಯತ್ನಿಸಬೇಕೇಂದುಶ್ರೀ ಶ್ರೀ ಪರಮಪೂಜ್ಯಜಗದ್ಗುರುಅನಂತ ಶ್ರೀ ವಿಭೂಷಿತ ಕಾಳ ಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಗಳು ಶ್ರೀಮದ್‍ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿಇವರುಆಶೀರ್ವಚನ ಮಾಡಿದರು.
ಹರಿಕೃಷ್ಣ ಬಂಟ್ವಾಳ್ ಜಿಲ್ಲಾ ಬಿಜೆಪಿ ವಕ್ತಾರರು ಮಾತನಾಡುತ್ತಾ ನಮ್ಮ ಹಿಂದುಧರ್ಮಯಾವಾಗ ಪ್ರಾರಂಭವಾದುದುಎಂಬುದು ನಮಗೆ ತಿಳಿಯದು.ಉಳಿದೆಲ್ಲ ಮತಗಳ ಸ್ಥಾಪನೆಯಾದ ದಿನಾಂಕ ನಿಶ್ಚಿತವಾಗಿಯೇ ಇದೆ.ಆದ್ದರಿಂದ ಹುಟ್ಟುಇಲ್ಲದಧರ್ಮಕ್ಕೆಅಂತ್ಯವೂಇಲ್ಲಎಂದರು. ಈ ಹಿಂದೂಧರ್ಮಕ್ಕೆ ಅನೇಕ ಸನ್ಯಾಸಿಗಳು, ಋಷಿಮುನಿಗಳು, ಮಹಾಪುರುಷರು, ಅಲ್ಲದೇಇತ್ತಿಚೆಗೆ ನೋಡುವುದಾದರೆ ಸ್ವಾಮಿ ವಿವೇಕಾನಂದ, ಡಾ.ಬಿ.ಆರ್‍ಅಂಬೇಡ್ಕರ್, ಮಾತ್ರವಲ್ಲದೇಡಾ ಹೆಡಗೇವಾರರಕೊಡುಗೆಯೂಅಪಾರವಾದುದುಎಂದುಅವರು ಹೇಳಿದರು.

krishna mandira
ವೇದಿಕೆಯಲ್ಲಿಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರದೀಪ್ ಆಳ್ವ, ಬಿಜೆಪಿ ಜಿಲ್ಲಾ ಪಂಚಾಯತ್ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಭಿಷೇಕ್‍ರೈ, ಶ್ರೀಕೃಷ್ಣ ಮಂದಿರದಅಧ್ಯಕ್ಷರುರಮೇಶ್ ಶೆಟ್ಟಿಗಾರ್‍ಕರಿಂಗಾಣ, ಗೌರವಾಧ್ಯಕ್ಷರು ಶಂಕರನಾರಾಯಣ ಐತಾಳ್, ಮಹಾಬಲ ಶೆಟ್ಟಿ ನಂದಗೋಕುಲ, ಜ್ಯೋತಿ ಮಹಿಳಾ ಮಂಡಲದಅಧ್ಯಕ್ಷೆ ಲಕ್ಷ್ಮೀ ವಿ. ಪ್ರಭು ಉಪಸ್ಥಿತರಿದ್ದರು.
ಮಂದಿರದಅಧ್ಯಕ್ಷರು ಸ್ವಾಗತಿಸಿ, ನಂದನ್‍ರೈ ವರದಿ ವಾಚಿಸಿ, ಸುರೇಶ್‍ಅಮ್ಟೂರು ವಂದಿಸಿದರು.ಕುಶಾಲಪ್ಪಅಮ್ಟೂರು ಮತ್ತುರಾಜೇಶ್‍ಕೊಟ್ಟಾರಿಕಾರ್ಯಕ್ರಮವನ್ನು ನಿರ್ವಹಿಸಿದರು.
ಸಂಜೆ ವಿವಿಧ ಸಾಂಸ್ಕøತಿಕಕಾರ್ಯಕ್ರಮ ಹಾಗೂ ಕಾಸರಗೋಡುಕೊಲ್ಲಂಗಾಣ ಶ್ರೀ ದುರ್ಗಾಪರಮೇಶ್ವರಿಯಕ್ಷಗಾನ ಮಂಡಳಿ ಇವರಿಂದ ಶ್ರೀ ಹರಿದರ್ಶನ ಎಂಬ ಯಕ್ಷಗಾನ ಬಯಲಾಟ ನಡೆಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter