Published On: Sat, Jan 12th, 2019

ಕುಪ್ಪೆಪದವು 109ನೇ ವರ್ಷದ ವಾರ್ಷಿಕೋತ್ಸವ

ಕುಪ್ಪೆಪದವು: ಅವನತಿಯ ಹಾದಿಯಲ್ಲಿರುವ ಸರಕಾರಿ ಶಾಲೆಗಳನ್ನು ಉಳಿಸುವ ಕೆಲಸಗಳು ಪೋಷಕರಿಂದ ಆಗಬೇಕಾಗಿದೆ. ಸರಕಾರಿ ನೌಕರಿಯನ್ನು ಬಯಸುವ ಜನರಿಗೆ ಸರಕಾರಿ ಶಾಲೆಗಳು ಬೇಡವಾಗಿದೆ. ಸೂಟ್ ಬೂಟ್ ಟೈ ಆಕರ್ಷಣೆಯಿಂದ ಖಾಸಾಗಿ ಶಾಲೆಗಳಿಗೆ ತನ್ನ ಮಕ್ಕಳನ್ನು ಸೇರಿಸುವ ಪೋಷಕರು ಸೂಟ್ ಬೂಟ್ ಗಳಿಲ್ಲದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಪ್ರತಿಭಾ ಪುರಸ್ಕಾರಗಳನ್ನು ಪಡೆಯುವಲ್ಲಿ ಮೊದಲಿಗರಾಗಿದ್ದಾರೆ ಎಂದುಜಿ.ಪಂ ಸದಸ್ಯ ಜನಾರ್ದನ ಗೌಡ ಹೇಳಿದರು.

IMG-20190112-WA0001
ಅವರು ಶನಿವಾರ ದಕ್ಷಿಣಕನ್ನಡ ಜಿಲ್ಲಾ ಪಂಚಾಯತಿ ಉನ್ನತಿಕರಿಸಿದ ಕುಪ್ಪೆಪದವು ಹಿರಿಯ ಪ್ರಾಥಮಿಕ ಶಾಲೆ ಕೆಲೆಂಜರ್ ಇದರ 109ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕುಪ್ಪೆಪದವು ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಆನಂದ ಅವರು ವಹಿಸಿದ್ದರು. ಜಿಲ್ಲಾಮಟ್ಟದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.IMG-20190112-WA0000

ವೇದಿಕೆಯಲ್ಲಿ ತಾ.ಪಂ ಸದಸ್ಯ ನಾಗೇಶ್ ಶೆಟ್ಟಿ, ಪಂ. ಉಪಾಧ್ಯಕ್ಷ ಡಿ.ಪಿ. ಹಮ್ಮಬ್ಬ ಗ್ರಾಮ ಪಂಚಾಯತ್ ಸದಸ್ಯರಾದ ಹಿರಣ್ಯಾಕ್ಷ ಕೋಟ್ಯಾನ್, ಮಹಮ್ಮದ್ ಷರೀಪ್ ಕಜೆ, ಭವಾನಿ, ರಝೀಯಾ, ವಸಂತಿ, ಡಿ.ಎ ಅಬ್ಬುಬಕ್ಕರ್, ವಿಮಲ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಎಮ್ ಉಮಾರಬ್ಬ ಕನ್ನೋರಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪುಷ್ಪಾವತಿ, ಶಾಲೆಯ ನಿವೃತ ಮುಖ್ಯೋಪಧ್ಯಾಯ ಅಣ್ಣಯ್ಯ ಎಂ, ಮಾ.ಜಿ.ಪಂ. ಸದಸ್ಯ ಕೃಷ್ಣ ಅಮೀನ್, ಗ್ರೀಸಸ್ ಡಿ”ಸೋಜ ಹಿರಿಯ ಹಳೆ ವಿದ್ಯಾರ್ಥಿ ಕೃಷ್ಣ ರಾವ್ ಬರಿಮಾರ್, ಎಸ್ ಡಿ ಎಂ ಸಿ ಮಹಮ್ಮದ್ ಷರೀಪ್ , ಚಂದ್ರಶೇಖರ್ ತುಂಬೆಮಜಲು, ಮುಖ್ಯೋಪಧ್ಯಾಯ ಯತಿರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳೇ ರಚಿಸಿದ ಕವನ ಸಂಕಲನ “ಚಿಗುರು” ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.
ಷರೀಪ್ ಕಜೆ ಸ್ವಾಗತಿಸಿ ಶಿಕ್ಷಕಿ ರಾಧಮ್ಮ ವಂದಿಸಿದರು ಶಿಕ್ಷಕಿ ಕಸ್ತೂರಿ ನಿರೂಪಿಸಿದರು

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter