Published On: Sat, Jan 12th, 2019

ಗಿಳಿಗಳ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

ಬಂಟ್ವಾಳ: ಗಿಳಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಬೆಂಗಳೂರು ಸಿ.ಐ.ಡಿ.ಪೋಲೀಸರು ಬಂಟ್ವಾಳ ದಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಅಬ್ದುಲ್ ಲತೀಪ್ ಎಂಬವರು ಬಂಧಿತ ಆರೋಪಿ . ಬಂಟ್ವಾಳ ತಾಲೂಕಿನ ಮೆಲ್ಕಾರ್  ಎಂಬಲ್ಲಿ ಎರಡು ಪಂಜರದಲ್ಲಿ ಸುಮಾರು 26 ಜೀವಂತ ಗಿಳಿಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಬೆಂಗಳೂರು ಸಿ.ಐ.ಡಿ.ಎಸ್.ಐ.ಹೆಚ್.ಕೆ.ರವಿಕುಮಾರ್ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.5
ಅಬ್ದುಲ್ ಲತೀಪ್ ಅವರು ತಮಿಳುನಾಡಿನಿಂದ ಗಿಳಿಗಳನ್ನು ತರಿಸಿ ಈ ಹಿಂದೆ ಅನೇಕ ಗಿಳಿಗಳ ಮಾರಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಯ ಮೇರೆಗೆ ದಾಳಿ ನಡೆಸಿದ್ದಾರೆ. ‌ನಿನ್ನೆ ರಾತ್ರಿ ಖಚಿತ ಮಾಹಿತಿ ಯ ಮೇಲೆ ಬಂಟ್ವಾಳ ಕ್ಕೆ ಅಗಮಿಸಿದ ಬೆಂಗಳೂರು ಸಿ.ಐ.ಡಿ.ಪೋಲೀಸರು  ಮೆಲ್ಕಾರ್ ಎಂಬಲ್ಲಿ ಗಿಳಿಗಳನ್ನು ಮಾರಾಟ ಮಾಡಲು ಪ್ರಯತ್ನಿಸುರುವ ವೇಳೆ ರೆಡ್ ಹ್ಯಾಂಡ್ ಅಗಿ ಬಂಧಿಸಿದ್ದಾರೆ.
ಬಳಿಕ ಅವರು ಬಂಟ್ವಾಳ ವಲಯ ಅರಣ್ಯಾ ಧಿಕಾರಿಯವರಿಗೆ ಪ್ರಕರಣವನ್ನು ಹಸ್ತಾಂತರ ಮಾಡಿದ್ದಾರೆ.
DSC_2569
ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1072 ರಡಿಯಲ್ಲಿ ಕೇಸು ದಾಖಲಿಸಿ ಬಂಟ್ವಾಳ ವಲಯ ಅರಣ್ಯ ಅಧಿಕಾರಿಗಳು 26 ಜೀವಂತ ಗಿಳಿಗಳನ್ನು ಹಾಗೂ ಆರೋಪಿ ಗಳನ್ನು ಬಂಟ್ವಾಳ ನ್ಯಾಯಾಧೀಶ ರ ಮುಂದೆ ಹಾಜರು ಪಡಿಸಿ ಮುಂದಿನ ತನಿಖೆ ಯನ್ನು ಮಂಗಳೂರು ಅರಣ್ಯ ಸಂರಕ್ಷಣಾ ಧಿಕಾರಿ ಶಂಕರೇ ಗೌಡ ಅವರು ನಡೆಸುತ್ತಿದ್ದಾರೆ.ಈ ಕಾರ್ಯಚರಣೆ ಯಲ್ಲಿ ವಲಯ ಅರಣ್ಯಾಧಿಕಾರಿ ಬಿ.ಸುರೇಶ್, ಉಪವಲಯ ಅರಣ್ಯಾಧಿಕಾರಿ ಯಶೋಧರ, ಪ್ರೀತಂ, ಅರಣ್ಯ ರಕ್ಷಕರಾದ ವಿನಯ್, ಜಿತೇಶ್ ಬಿ. ದಯಾನಂದ, ಮತ್ತು ಸಿಬ್ಬಂದಿ ವರು ಹಾಜರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter