Published On: Fri, Jan 11th, 2019

21ನೇ ಶತಮಾನದ ಶೈಕ್ಷಣಿಕ ಕಲಿಕೆ ಕುರಿತು ಚರ್ಚಿಸಲು ವಿಶ್ವದಅತ್ಯುನ್ನತ ಶಿಕ್ಷಣ ತಜ್ಞರನ್ನು ಒಂದೇ ವೇದಿಕೆಗೆ ತಂದ ಕಿಡೋವೇಟರ್ಸ್

ಬೆಂಗಳೂರು : 21ನೇ ಶತಮಾನದ ಕೌಶಲ್ಯ ಹಾಗೂ ಸ್ಪರ್ಧಾತ್ಮಕ ಶೈಕ್ಷಣಿಕ ಸಂಸ್ಥೆ,ಕಿಡೋವೇಟರ್ಸ್‌, ಜ.11ರಂದು ಬೆಂಗಳೂರಿನಲ್ಲಿ ‘ಕಲಿಕೆಯ ಭವಿಷ್ಯ;ಅನ್ ಕಾನ್ಫರೆನ್ಸ್’ ಸಮಾವೇಶವನ್ನುಯಶಸ್ವಿಯಾಗಿ ಆಯೋಜಿಸಿತ್ತು.ಜೆ.ಡಬ್ಲ್ಯು ಮ್ಯಾರಿಯೆಟ್, ಬೆಂಗಳೂರು ಇಲ್ಲಿ ನಡೆದ ಸಮಾವೇಶದಲ್ಲಿ ವಿಶ್ವದ ಹಲವು ಶಿಕ್ಷಣ ತಜ್ಞರು, ಕೆ-12ಭವಿಷ್ಯದ ಶಿಕ್ಷಣ ಕ್ರಾಂತಿ ಹಾಗೂ 21ನೇ ಶತಮಾನದ ಶೈಕ್ಷಣಿಕ ರೂಪುರೇಷೆಗಳ ಕುರಿತು ಮಾಹಿತಿಹಂಚಿಕೊಂಡರು. ಈ ಸಂದರ್ಭದಲ್ಲಿ 100 ಶಿಕ್ಷಕರಿಗೆ ‘ಜಗತ್ತಿನ 100 21ನೇ ಶತಮಾನದ ಶಿಕ್ಷಕರ ಪ್ರಶಸ್ತಿ’ ನೀಡಿಗೌರವಿಸಲಾಯಿತು.

 L_R-Chandrasekaran (Chairman of Board, Kidovators)_Anil Swarup (Former Secretary – School Education and Literacy, Ministry of HRD, GoI)

‘ಅನ್ಕಾನ್ಫರೆನ್ಸ್- ಕಲಿಕೆಯ ಭವಿಷ್ಯ’21ನೇ ಶತಮಾನದ ಶಿಕ್ಷಣದ ಹಾಗೂ ವಿದ್ಯಾರ್ಥಿಗಳಿಗೆ ವಿಶ್ವ ಹಾಗೂಭಾರತಾದ್ಯಂತ ಕಲಿಕಾ ಅವಕಾಶಗಳ ನೀಲಿ ನಕ್ಷೆ ತಯಾರಿಸುವ ವೇದಿಕೆಯಾಗಿತ್ತು. ಸಮಾವೇಶ ಕಿಡೋವೇಟರ್ಸ್ ನಸಂಸ್ಥಾಪಕ  ಹಾಗೂ ಸಿಇಒ ಪ್ರಿಯದೀಪ್‍ ಸಿನ್ಹ ಅವರ ಪ್ರಾಸ್ತಾವಿಕ ನುಡಿಯೊಂದಿಗೆ ಆರಂಭಗೊಂಡಿತು. ಈವೇದಿಕೆಯಲ್ಲಿ ಅಪ್ರಸ್ತುತ ಕಲಿಕೆಯನ್ನು ಮರೆತು, ಭವಿಷ್ಯದ ಶಿಕ್ಷಣದ ಕಲಿಕೆಯ ಕುರಿತು ಚರ್ಚೆ  ನಡೆಯಿತು.L_R- Priyadeep Sinha, Founder and CEO, Kidovators_ Chandrasekaran (Chairman of Board, Kidovators)_ Kathleen Naglee (Head of School, International School of Helsinki, Finland)_ Allan Kjaer Andersen_ Cecilia Carn

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ  ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಮಾಜಿ ಕಾರ್ಯದರ್ಶಿಅನಿಲ್ ಸ್ವರೂಪ್,  ಸ್ವೀಡನ್ ನ ಕುನ್ಸ್ಕಾಪ್ಸ್ಕಲನ್ ಹಾಗೂ ಅನ್ಕಾನ್ಫರೆನ್ಸ್ ನ ವಾಗ್ಮಿಗಳಲ್ಲಿ ಒಬ್ಬರಾದಮಿಸ್ ಸೆಸಿಲಿಯಾ ಕಾರ್ನೆಫೆಲ್ಡ್ , ಫಿನ್‍ಲ್ಯಾಂಡ್ ನ ಹೆಲ್ಸಿಂಕಿ ಅಂತಾರಾಷ್ಟ್ರೀಯ ಶಾಲೆಯ ಮುಖ್ಯಸ್ಥರಾದಕಾತ್ಲೀನ್ ನಾಗ್ಲಿ ಮತ್ತಿತರರು ಶಿಕ್ಷಣ ಸ್ವರೂಪದಲ್ಲಿ ಅಗತ್ಯವಾದ ಬದಲಾವಣೆ ಹಾಗೂ ಮಕ್ಕಳ ಭವಿಷ್ಯಕ್ಕೆಅಗತ್ಯವಾದ ಕ್ರಮಗಳನ್ನು ಕುರಿತು ಮಾತನಾಡಿದರು.

 Unconference Event_Priyadeep Sinha,CEO of Kidovators_SchoolKids

ಉಳಿದಂತೆ ಅನುರಾಬ್ ಸಿಂಗ್, ಕಾತ್ಲೀನ್ ನಾಗ್ಲಿ, ಆ್ಯಲನ್ ಜಾರ್ ಆ್ಯಂಡರ್ ಸನ್, ಅಪರ್ಣಾ ಮ್ಯಾಗಿ, ಅವ್ನಿತಾಬಿರ್, ದಯಾಆಲ್ಡರ್ಫರ್, ಕ್ಯಾತ್ಲಿನ್‍ ಪೆಟಿರಿಯೋ, ಶರದ್‍ ಬನ್ಸಾಲ್, ಶ್ರೀಕಾಂತ್ ಐಯ್ಯರ್,  ರಾಗಿಣಿ ಚೌಧರಿ,ಸೆಸಿಲಿಯಾ ಕಾರ್ನೆಫೆಲ್ಡ್ , ಪೆರಿ ಮಹೇಶ್ವರಿ, ಕುಲಭೂಷಣ್ ಶರ್ಮಾ, ರಾಘವ್ ಪೋಡರ್ ಹಾಗೂ ವಿಪುಲ್‍ರೆಡಿಯಾಮೋಂಗ್ ಮತ್ತಿತರರ ವಾಗ್ಮಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಕಿಡೋವೇಟರ್ಸ್ ನ ವಾರ್ಷಿಕ ವರದಿಯನ್ನು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷಎಂ.ಚಂದ್ರಶೇಖರನ್‍ ಬಿಡುಗಡೆಗೊಳಿಸಿದರು. ಆಡಳಿತ ಮಂಡಳಿಯ ಸದಸ್ಯ ಪೂಲಕ್‍ ಕುಮಾರ್ ಸಿನ್ಹಾವಂದನಾರ್ಪಣೆ ಅರ್ಪಿಸಿದರು.

ಜಾಗತಿಕ ಸಮಾವೇಶದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿರುವ ಕಿಡೋವೇಟರ್ಸ್  ಸಂಸ್ಥಾಪಕ ಹಾಗೂ ಸಿಇಒಪ್ರಿಯದೀಪ್‍ ಸಿನ್ಹ,  ಭವಿಷ್ಯದ ಕಲಿಕೆ ಇಂದಿನ ಕಲಿಕೆಗಿಂತ ತುಂಬಾ ವಿಭಿನ್ನವಾಗಿರುತ್ತದೆ. ನಕಲಿ ಬುದ್ಧಿವಂತಿಕೆಹಾಗೂ ಆಟೋಮೇಷನ್‍ ಮೂಲಕ ಹಲವು ಕೆಲಸಗಳನ್ನು ಯಂತ್ರಗಳೇ ನಿರ್ವಹಿಸಲಿವೆ. ಭವಿಷ್ಯದಲ್ಲಿ ಮನುಷ್ಯನಅವಶ್ಯಕತೆ ಕೇವಲ ಕ್ರಿಯಾತ್ಮಕ ಆಲೋಚನೆ ಹಾಗೂ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸೀಮಿತವಾಗಿರುತ್ತದೆ. ಇದುಬದಲಾಗುತ್ತಿರುವ ಶಿಕ್ಷಣ ಮಾದರಿಗಳು ಹಾಗೂ ವಿದ್ಯಾರ್ಥಿಗಳನ್ನು ಭವಿಷ್ಯದ ಹೊಸ ಪದ್ಧತಿಗೆ ಸಿದ್ಧಪಡಿಸಿದಾಗಮಾತ್ರ ಸಾಧ್ಯ . ‘ಅನ್‍ಕಾನ್ಫರೆನ್ಸ್ ಜಾಗತಿಕ ಶಿಕ್ಷಣ ತಜ್ಞರಿಗೆ ತಮ್ಮ ಯೋಜನೆಗಳನ್ನು ಹಂಚಿಕೊಳ್ಳಲು ಹಾಗೂಹೊಸ ಶಿಕ್ಷಣ ಮಾದರಿಗಳ ಕುರಿತು ಚರ್ಚಿಸಲು ಅವಕಾಶ ಮಾಡಿಕೊಟ್ಟಿದೆ. ಇಂತಹ ಕಾರ್ಯಕ್ರಮಆಯೋಜಿಸಿರುವುದು ನಮಗೆ ಸಂತಸ ನೀಡಿದೆ. ಇದು ಹಲವು ವ್ಯಕ್ತಿಗಳಿಗೆ

ಸ್ಫೂರ್ತಿದಾಯಕವಾಗಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಹಾಗೂ ದೇಶದ ಮಟ್ಟದಲ್ಲಿ ಹೆಚ್ಚಿನಪಾಲುದಾರಿಕೆಯನ್ನು ನಿರೀಕ್ಷಿಸುತ್ತಿದ್ದೇವೆ ‘ ಎಂದರು.

 

ಕಿಡೋವೇಟರ್ಸ್ ಕುರಿತು

ಕಿಡೋವೇಟರ್ಸ್ (https://kidovators.com/) 21ನೇ ಶತಮಾನದ ಕೌಶಲ್ಯ ಹಾಗೂ ಸ್ಪರ್ಧಾತ್ಮಕ ಶೈಕ್ಷಣಿಕಸಂಸ್ಥೆಯಾಗಿದ್ದು, ಕೆ-12 ಷೇರುದಾರರೊಂದಿಗೆ ಕೆಲಸ ಮಾಡುತ್ತಿದೆ. ಇದು ವಿದ್ಯಾರ್ಥಿಗಳಲ್ಲಿ ಸಮಸ್ಯೆ ಪರಿಹಾರಕಂಡುಕೊಳ್ಳುವುದು, ಕ್ರಿಯಾಶೀಲತೆ, ಹಾಗೂ ಕ್ಷಿಪ್ರ ಆಲೋಚನೆಯ ಗುಣ ಹೆಚ್ಚಿಸಲು ಕೆಲಸ ಮಾಡುತ್ತಿದೆ.ಇದನ್ನು 2011ರಲ್ಲಿ ಪ್ರಿಯಾದೀಪ್ ಸಿನ್ಹ ಎಂಬುವರು ಸ್ಥಾಪಿಸಿದ್ದು, ಇಲ್ಲಿಯವರೆಗೆ 7 ರಾಷ್ಟ್ರಗಳ 1, 28,00ಮಕ್ಕಳಿಗೆ ಶಿಕ್ಷಣ ನೀಡಿದೆ. ಸದ್ಯ ಕಿಡೋವೇಟರ್ಸ್ 340ಕ್ಕೂ ಹೆಚ್ಚೂ ಶಾಲೆಗಳೊಂದಿಗೆ ನೇರವಾಗಿ ಹಾಗೂಒಟ್ಟಾರೆಯಾಗಿ 600 ಶಾಲೆಗಳೊಂದಿಗೆ ಕೆಲಸ ಮಾಡುತ್ತಿದೆ. ಗ್ರೇ ಮ್ಯಾಟರ್ಸ್ ಕ್ಯಾಪಿಟಲ್ (ಅಟ್ಲಾಂಟ, ಅಮೆರಿಕಮೂಲದ ಸಂಸ್ಥೆ), ಎಂ ಚಂದ್ರಶೇಖರನ್ (ಮಣಿಪಾಲ ಸಮೂಹ ಸಂಸ್ಥೆ), ಲೂಯಿಸ್ ಮಿರಾಂಡ (ಐಡಿಎಫ್ ಸಿಪಿಇ) ಸಂಸ್ಥೆಗಳು ಇದರ ಹೂಡಿಕೆದಾರರಾಗಿವೆ. ಕಿಡೋವೇಟರ್ಸ್ ಸಂಸ್ಥೆ ಏಷಿಯಾ, ಉತ್ತರ ಅಮೆರಿಕಾ, ದಕ್ಷಿಣಅಮೆರಿಕಾದ ಡೆಲ್, ಸಂಟಂಡರ್ ಬ್ಯಾಂಕ್, ಲೆನೋವೊ, ಟಿಐಇ, ಐಐಎಂ ಅಹಮದಾಬಾದ್ಗಳಲ್ಲಿ ಉತ್ತಮಹೆಸರು ಗಳಿಸಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter