Published On: Thu, Jan 10th, 2019

ಮಾನವ ಅಂತಕರಣವಿಲ್ಲದ ಕಾವ್ಯ ಒಪ್ಪಿಕೊಳ್ಳಲು ಕಷ್ಟಸಾಧ್ಯ: ಸುಮುಖಾನಂದ ಜಲವಳ್ಳಿ

ಮೂಡುಬಿದಿರೆ:`ಕವಿ ಕನಸುಗಾರನಾಗಿರಬೇಕು, ತನ್ನ ಮನಸ್ಸಿನಲ್ಲಿ ಏನು ಬರೆಯಬೇಕೆಂದೆನಿಸುತ್ತದೆಯೊ ಹಾಗೆ ಬರೆಯುತ್ತಾನೆ. ಆದರೆ ಆತನ ಕಾವ್ಯದಲ್ಲಿ ಮಾನವ ಅಂತಕರಣ ಇರಬೇಕು. ಅದಿಲ್ಲದಿದ್ದಲ್ಲಿ ಅದನ್ನು ಕಾವ್ಯವೆಂದು ಒಪ್ಪಿಕೊಳ್ಳಲು ಸಾದ್ಯವಿಲ್ಲ’ ಎಂದು ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಹೇಳಿದರು.

Kavana sankalana bidugade
ಇಲ್ಲಿನ ಸ್ವರ್ಣಮಂದಿರದಲ್ಲಿ ಶಿಕ್ಷಕ ಮಹಾದೇವ್ ಮೂಡುಕೊಣಾಜೆ ಅವರ ‘ಒಪ್ಪಿರುವೆ’ ಭಾವಗೀತೆ ಸಿ.ಡಿ ಮತ್ತು ‘ಎನ್ನ ಕೊಂದವರೆ’ ಕವನಸಂಕಲನ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚೆಗೆ `ನವ್ಯ ಕಾವ್ಯಗಳು ನಾಡ ಲಯಗಳಿಂದ ದೂರವಾಗುತ್ತಿದ್ದು ಜನ ಮತ್ತು ಕಾವ್ಯದ ಮಧ್ಯೆ ಕಂದಕ ಸೃಷ್ಟಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಹಾದೇವ ಅವರ ಕಾವ್ಯ ಓದುಗರಿಗೆ ಹತ್ತಿರವಾಗಬಲ್ಲದು ಎಂದು ಆಶಯ ವ್ಯಕ್ತಪಡಿಸಿದ ಅವರು ಈ ಕಾವ್ಯದಲ್ಲಿ ಮಗು ಮತ್ತು ಪ್ರಕೃತಿಯನ್ನು ಕಾಣುವ ಪ್ರಕ್ರಿಯೆ ನಡೆದಿದೆ’ ಎಂದರು. ಇದಕ್ಕು ಮೊದಲು ಅವರು ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ `ಜೀವನದಲ್ಲಿ ನಿರಾಶೆ, ನಿರುತ್ಸಾಹವನ್ನು ಮೆಟ್ಟಿ ನಿಲ್ಲುವ ಗಟ್ಟಿ ಮನಸ್ಸು ನಮ್ಮದಾಗಬೇಕು. ಸಮಾಜದಲ್ಲಿರುವ ಒಳ್ಳೆಯ ವಿಚಾರಗಳು ಇಂತಹ ಸಿಡಿ, ಕವನಸಂಕಲನಗಳ ಮೂಲಕ ಜನರಿಗೆ ತಲುಪಬೇಕು’ ಎಂದರು. ಅಧ್ಯಕ್ಷತೆ ವಹಿಸಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೈ.ಶಿವರಾಮಯ್ಯ ಸಿಡಿ ಬಿಡಗುಡೆಗೊಳಿಸಿದರು.
ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ, ಕನ್ನಡ ಭಾಷಾ ಪರಿವೀಕ್ಷಕ ಶಮಂತ್ ವಿ.ಎಂ., ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಅಳಿಯೂರು ಪ್ರೌಢಶಾಲಾ ಮುಖ್ಯೋಪಧ್ಯಾಯಿನಿ ರೋಸಾ ವಿ.ಜೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಬಿ. ಮತ್ತು ಶ್ವೇತಾ ಮಹಾದೇವ್, ಸಂಗೀತ ನಿರ್ದೇಶಕ ಪ್ರಮೋದ್ ಸಪ್ರೆ, ಗುರುರಾಜ್ ಎಂ.ಬಿ ಉಪಸ್ಥಿತರಿದ್ದರು.
ಮಹಾದೇವ್ ಅವರ ಭಾವಗೀತೆಗಳನ್ನು ರಮೇಶ್ಚಂದ್ರ, ಕೆ.ಎಸ್ ಸುರೇಖಾ, ಸುನೀತಾ ಮತ್ತು ಸದಾನಂದ ಎಂ. ಹಾಡಿದರು.
ಸಾಹಿತಿ ಮುನಿರಾಜ ರೆಂಜಾಳ ಕಾವ್ಯದ ವಿಮರ್ಶೆ ಮಾಡಿದರು. ಕೃತಿಕಾರ ಮಹಾದೇವ ಮೂಡುಕೊಣಾಜೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ರಾಮಕೃಷ್ಣ ಶಿರೂರು ಸ್ವಾಗತಿಸಿದರು. ನಿತೇಶ್ ಬಲ್ಲಾಳ್ ನಿರೂಪಿಸಿದರು. ವಿಶ್ವನಾಥ ಸಾಲ್ಯಾನ್ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter