Published On: Thu, Jan 10th, 2019

ಮಲ್ಲಕಂಬ ಚಾಂಪಿಯನ್‍ಶಿಪ್: ರಾಷ್ಟ್ರಮಟ್ಟಕ್ಕೆ ಆಳ್ವಾಸ್‍ನ ಆರು ವಿದ್ಯಾರ್ಥಿಗಳು ಆಯ್ಕೆ

ಮೂಡುಬಿದಿರೆ: ಬಾಗಲಕೋಟೆಯ ತುಳಸಿಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಅಮೆಚ್ಯೂರ್ ಮಲ್ಲಕಂಬ ಅಸೋಶಿಯೇಶನ್ ನಡೆಸಿದ ರಾಜ್ಯಮಟ್ಟದ ಮಲ್ಲಕಂಬದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆರು ಮಂದಿ ವಿದ್ಯಾರ್ಥಿಗಳು ಸಾಧನೆ ಮಾಡಿ, ಜ.11ರಂದು ಗೋವಾದ ಪಾಂಡದಲ್ಲಿ ನಡೆಯುವ ರಾಷ್ಟ್ರಮಟ್ಟದ ಮಲ್ಲಕಂಬ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿದ್ದಾರೆ.

Mallakamba-Alvas Achivment

18 ವರ್ಷದೊಳಗಿನ ಹಾಗೂ ಮೇಲ್ಪಟ್ಟ ಹುಡುಗರ ವಿಭಾಗ, 16 ವರ್ಷದೊಳಗಿನ ಹಾಗೂ ಮೇಲ್ಪಟ್ಟ ಹುಡುಗರ ವಿಭಾಗದಲ್ಲಿ ಸ್ಪರ್ಧೆಗಳು ನಡೆದಿದ್ದು, ಆಳ್ವಾಸ್ ವಿದ್ಯಾರ್ಥಿಗಳಾದ ಶಶಿಧರ್ ಬಿ.ಪೂಜಾರ್, ವೀರಭದ್ರ ಎನ್.ಎಮ್, ದೀಪಕ್ ಗೌಳಿ, ಶಂಕರಪ್ಪ, ಶಶಿಧರ್ ಎಸ್. ಪಾಟೀಲ್, ಲಕ್ಷ್ಮವ್ವ ಟಿ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧನೆ ಮಾಡಿದ ಆರು ವಿದ್ಯಾರ್ಥಿಗಳು ಸಹಿತ ಒಟ್ಟು 75 ಮಂದಿ ವಿದ್ಯಾರ್ಥಿಗಳು ಮಲ್ಲಕಂಬ ವಿಭಾಗದಲ್ಲಿ ಆಳ್ವಾಸ್‍ನಲ್ಲಿ ಉಚಿತ ದತ್ತು ಸ್ವೀಕಾರ ಯೋಜನೆಯಡಿ ವ್ಯಾಸಂಗ ಮಾಡುತ್ತಿದ್ದಾರೆರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter