Published On: Fri, Dec 28th, 2018

ಮುಂಬಯಿ ನಗರಿಯ ಸನ್ಮಾನ ತುಳುನಾಡ ಕಲಶ ಶ್ರೀ ಜಿ ಎಸ್

ಕಲಾವಿದ ಕಲಾಜಗತ್ತಿಗೆ ಕಣ್ಣುಗಳಂತೆ. ಕಲೆಯೊಳಗೆ ಕಲಾಸಾರಥಿಯಾಗಿ ಕಲೆ ಎಂಬ ಬಂಡಿಯನ್ನು ಏರಿ ಸಾಗುವ ಹಾದಿಯಲ್ಲಿ, ಕಲಾಮಾತೆಯ ಪ್ರೀತಿಯ ತುತ್ತು, ಕಲೆಯೇ ಸೊತ್ತು ಎಂಬಂತೆ ಹಲವಾರು ದಾರಿಗಳು ಮುಂದಿದ್ದರು, ಇಲ್ಲಿರುವ ಪ್ರತಿಹೆಜ್ಜೆ ಪ್ರೀತಿಯಿಂದ ಇಟ್ಟ ದಿಟ್ಟ ಹೆಜ್ಜೆ, ಸಾಧನೆಯ ಹಾದಿಗೆ ಆಡಿಪಾಯವಾಗಿರುವುದು. ತುಳುನಾಡಿನ ಮಣ್ಣಿನ ಕಂಪಿನಲ್ಲಿ, ಗುರುಪುರ ಎಂಬ ಊರು ಎಲ್ಲರಿಗೂ ಚಿರಪರಿಚಿತ ಹೆಸರು. ಇವರು ಶ್ರೀನಿವಾಸ್ ಹಾಗೂ ವಸಂತಿ ಶ್ರೀನಿವಾಸ್ ದಂಪತಿಯ ಹೆಮ್ಮೆಯ ಪುತ್ರ *ಶ್ರೀ ಜಿ ಎಸ್ ಗುರುಪುರ* ಎಂದು ಪ್ರಖ್ಯಾತಿಯಾಗಿರುವ ಶ್ರೀಕಾಂತ್ ಜಿ ಎಸ್ ಗುರುಪುರ.

IMG-20181228-WA0015

ಚಿಕ್ಕ ವಯಸ್ಸಿನಲ್ಲಿಯೇ ಎಲ್ಲದರಲ್ಲೂ ಹೊಸತನ ಹುಡುಕುತ್ತಾ, ಅತೀ ಉತ್ಸುಕತೆಯಿಂದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿತಿದ್ದುದ್ದು , ಇದೇ ಇಂದು ಭಾನೆತ್ತರ ಬರಹದ ಮೂಲಕ ಅತ್ಯುತ್ತಮ ಸಾಹಿತಿಯಾಗಿ, ಹೊರಹೊಮ್ಮಲು ಹೊಂಗಿರಣವಾಯಿತು.ಮಣ್ಣಿನ ಮಾದರಿಯಿಂದ ವಿವಿಧ ಆಕೃತಿಯ ಚಿತ್ತಾರಗಳು, ಚಿತ್ರಕಲೆ ಹೀಗೆ ಬಾಲ್ಯದಲ್ಲಿ ಛಾಪು ಮೂಡಿಸಿದ ಮೊದಲ ಹೆಜ್ಜೆಯಾದರೆ, ಅರಂಭಿಕವಾಗಿ ಆರನೇ ತರಗತಿ ಅಂದರೆ ಎಳವೆಯ ದಿನಗಳಲ್ಲಿ ಬಣ್ಣದೊಂದಿಗೆ ನಾಟಕದಿಂದ ರಂಗಚಾವಡಿಗೆ ಪಾದಾರ್ಪಣೆ ಹೀಗೆ ಮುನ್ನುಡಿಯಾದ ಮೊದಲ ವೇದಿಕೆ, ರಂಗಭೂಮಿಯತ್ತಾ ಹೆಚ್ಚೆಚ್ಚು ಅಕರ್ಷಿಸಿತು. ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಪದವಿ ಪಡೆಯುತ್ತಿರುವಾಗ ನಾಟಕ ರಚನೆಗೂ ಮುನ್ನುಡಿ ಹಾಡಿದ ಇವರು ಸ್ವರಚಿತ ನಾಟಕದೊಂದಿಗೆ, ನಿರ್ದೆಶನದ ಜೊತೆಗೆ ಅಭಿನಯವೂ ಕೈಬೀಸಿ ಕರೆಯಿತು ವೇದಿಕೆಗೆ. ಅನಂತರದ ದಿನಗಳಲ್ಲಿ ಹವ್ಯಾಸಿ ಕಲಾವಿದರಾಗಿ ಉದ್ಯೋಗದೊಂದಿಗೆ ಕಲಾ ಜೀವನ ಕರಗತ ಮಾಡಿಕೊಂಡು ವೃತ್ತಿಪರ ಸಾಹಿತಿಯಾಗಿ *ಸಾಹಿತ್ಯ ರತ್ನ* ಎಂಬ ಹೆಮ್ಮೆಯ ಗರಿಮೆಯೊಂದಿಗೆ ಮನೆಮಾತಾದರು.

IMG-20181228-WA0013
ತುಳು ಭಾಷೆ ಮತ್ತು ಕನ್ನಡ ಭಾಷೆಯಲ್ಲಿ ಹಾಡುಗಳಿಗೆ ನೀಡಿದ ಸಾಹಿತ್ಯ ನೂರಾರು. ಅಲ್ಬಾಂ ಹಾಡುಗಳು, ನಾಟಕದ ರಂಗಗೀತೆ, (ಗೀತರಚನೆ) ಭಕ್ತಿಗೀತೆ, ಕವಿತೆಗಳು ಹೀಗೆ ಹತ್ತುಹಲವು ಅತ್ಯದ್ಭುತ ಗೀತೆಗಳು ಕೈಚಳಕದಿಂದ ಇಂದಿಗೂ ಮೂಡಿಬರುತ್ತಿದೆ. ಉದಯೋನ್ಮುಖ ಸಾಹಿತಿಯಾಗಿ ಮೊದಲಾಗಿ ಸೌಜನ್ಯ ಗೀತೆ ಎಲ್ಲರ ಮನ ಮುಟ್ಟಿ ತುಂಬ ಹೆಸರು ತಂದು ಕೊಟ್ಟಿತು. ನಂತರದಲ್ಲಿ ಧರ್ಮ ಸಾರಥಿ, ರಂಗ್ದಕಲಾವಿದೆರ್, ನಮ್ಮ ಜವನೆರೆ ಕಥೆ, ಕಡಲಬರಿ, ನಮೋ ಮೋದಿ, ಅಪ್ಪೆನ ಋಣ, ಏಳೇಳು ಜನ್ಮಕೂ, ತುಳುನಾಡ್ ಟ್ರೊಲ್ಸ್ ಕತ್ತಲೆಮಾಯೆ, ಕಣ್ಣ ನಿಲಿಕೆ ಅಲ್ಬಾಂ ಹಾಡುಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು ಮುಂಬರುವ ದಿನಗಳಲ್ಲಿ ಅರಗಿಣಿ, ಹಂಸರಾಗ, ಆತ್ಮಾವಲೋಕನ, ಸೋಜಿಗ, ಎಂಚಿಸಾವು ಮಾರೆ, ಮದಿರೆಂಗಿ, ಮೋಕೆದ ಪಚಿರೆಂಗಿ, ಲಕುಮಿ ಸಂಭ್ರಮ, ಗಾಣಿಗ ಸಂಗಮ ಬಿಡುಗಡೆಯ ಅಂಚಿನಲ್ಲಿ ಇದೆ ಅಲ್ಲದೆ ಕನ್ನಡ ಸಿನಿಮಾ ರೈಡರ್, ನಂದಿನಿ ನನ್ನವಳು ಸಾಹಿತ್ಯ ರಚನೆಗಾಗಿ ಸಾಲುಗಟ್ಟಿ ನಿಂತಿವೆ ಅಭಿಮಾನಿಗಳ ಮನಸಿನ ಕದ ತೆರೆಯಲು.

ಅಭಿಮಾನದ ಅಭಿಮಾನಿ ಬಳಗ ಅನಂತವಾಗುತ್ತಾ ಇದೆ. ಇಷ್ಟೇ ಅಲ್ಲಾ! ಯಕ್ಷರಂಗದತ್ತ ಹೆಜ್ಜೆ ಇಟ್ಟಿರುವುದು ಹೆಮ್ಮೆಯ ವಿಚಾರ. ಸುನಿಲ್ ಪಲ್ಲಮಜಲು ಇವರಿಂದ ಪ್ರೇರಣೆಯೊಂದಿಗೆ ಸಲಹೆ ಪಡೆದು ತಾಳಮದ್ದಲೆಗೆ ತಲೆಬಾಗಿ ಇದು ಒಂದು ಸ್ಪೂರ್ತಿಯಾಗಿ ಯಕ್ಷಗಾನ ಕಥಾ ಪ್ರಸಂಗ ರಚನೆಯ ಹಾದಿಯು ತನ್ನತ್ತ ಸೆಳೆಯುತ್ತಿದ್ದರು ಮುಂದಿನ ದಿನಗಳಲ್ಲಿ ಅದಕ್ಕೂ ಮುನ್ನುಡಿ ಬರೆಯಲು ಉತ್ಸುಕರಾಗಿದ್ದಾರೆ.

IMG-20181228-WA0016
*ಗುರುಭಕ್ತಿಪುರ* ಕೃತಿ ಪುಸ್ತಕ ರೂಪದಲ್ಲಿ ಅತೀ ಶೀಘ್ರದಲ್ಲಿ ಓದುಗರ ಮನೆಮನಗಳನ್ನು ತಲುಪಿ ಸಾಹಿತ್ಯದ ಕಂಪನ್ನು ಪಸರಿಸಲಿದ್ದಾರೆ. ಬೆಳ್ಳಿಪರದೆಯೂ ಕೂಡ ಪ್ರೀತಿಯಿಂದ ಬರಮಾಡಿಕೊಳ್ಳಲು ಅಣಿಯಾಗಿದೆ.
ರಂಗಭೂಮಿಗೆ ಪ್ರಥಮ ವಾಗಿ ಮಾಡಿದ್ದ ಪಾದಾರ್ಪಣೆ ಇಂದಿಗೂ ಜೋಪಾನ ಮಾಡಿಕೊಂಡು ಬಂದಿದ್ದು ಪ್ರಸ್ತುತವಾಗಿ ರಂಗ್ ದ ಕಲಾವಿದೆರ್ ಗುರುಪುರ ಮಂಗಳೂರು ತಂಡದಲ್ಲಿ ಕ್ರೀಯಾಶೀಲರಾಗಿ ಅದ್ಭುತ ಸಾಹಿತಿಯಾಗಿ, ಉತ್ತಮ ರಂಗಕರ್ಮಿಯಾಗಿ ಸಕ್ರಿಯರಾಗಿರುವರು.
ಸಾಧನೆಯ ಸರದಾರರು, ಗುರುಪುರದ ಮುತ್ತು *ಅಭಿಮಾನದಿಂದ ಸನ್ಮಾನದೆಡೆಗೆ* ತುಳುನಾಡಿನ ಕಂಪು ಪಸರಿಸಲು ನಾಡಿನ ಗಡಿ ದಾಟಿ ಮುಂಬೈಗೆ ಪಯಣ ಸಾಗಿತು.
*ತುಳುನಾಡ ಕಲಶ* ಇವರ ಮಡಿಲು ಸೇರಿತು. ಹೆಮ್ಮೆ ಅನಿಸುತ್ತದೆ, ಯಾಕೆಂದರೆ ಈ ಗ್ರಾಮೀಣ ಪ್ರತಿಭೆಯ ಬೆಳೆವಣಿಗೆಯನ್ನು ಕಂಡು ಜನ್ಮಭೂಮಿಯಿಂದ ಮುಂಬೈ ನಗರಿ ತನ್ನ ಪ್ರೀತಿಯ ಅಪ್ಪುಗೆಯಿಂದ ಬರಮಾಡಿಕೊಂಡಿತು.

IMG-20181228-WA0017

 

ಇದು ತುಳುನಾಡಿನ ಹೆಮ್ಮೆ ಅಲ್ಲದೆ ಮತ್ತೇನು!
*ಶ್ರೀ ದುರ್ಗಾಪರಮೇಶ್ವರಿ ಮತ್ತು ಬ್ರಹ್ಮಬೈದರ್ಕಳ ಸೇವಾ ಸಮಿತಿ* ಬೊರಿವಲಿ ಮುಂಬೈ ಇವರು
*ತುಳುನಾಡ ಕಲಶ* ಬಿರುದು ನೀಡಿ ಪ್ರೀತಿಯಿಂದ ಕೊಂಬುವಾದ್ಯಗಳ ಸ್ವರಮಿಲನದೊಂದಿಗೆ ಗಣ್ಯಾತಿ ಗಣ್ಯರು ಒಟ್ಟುಸೇರಿ ಸನ್ಮಾನಿಸಿದರು.
ಅಭಿಮಾನದ ಸನ್ಮಾನ ಎಷ್ಟು ಎತ್ತರದಲ್ಲೂ… ತನ್ನ ಕೀರ್ತಿ ಪತಾಕೆಯನ್ನು ಹಾರಿಸಬಹುದು. ಎಷ್ಟು ದೂರಕ್ಕೂ ಕೊಂಡೊಯ್ಯು ಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿರುವ ಶ್ರೀ ಜಿ ಎಸ್ ಅವರಿಗೆ ಸಾಧನೆಯತ್ತ ಸಾಗಲು ಇದು ಒಂದು ಮೆಟ್ಟಿಲು… ಇನ್ನಷ್ಟು ಸಾಧನೆಯ ಮೆಟ್ಟಿಲುಗಳು ಸಾಧನೆಯ ಶಿಖರ ತಲುಪಲು ಅನುವು ಮಾಡಿಕೊಡಲಿ… ದೈವ ದೇವರ ಅನುಗ್ರಹದೊಂದಿಗೆ ನಿಮ್ಮ ಬಾಳು ಬೆಳಗಲಿ. ಸಾಧಿಸಬೇಕೆನ್ನುವ ಛಲಗಾರರಿಗೆ ದಾರಿದೀಪವಾಗಲಿ ನಿಮ್ಮ ಈ ಪಯಣ ಸುಸೂತ್ರವಾಗಿ ಸಾಗಬೇಕೆನ್ನುವುದೇ ನಮ್ಮ ಆಶಯ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter