Published On: Fri, Dec 21st, 2018

ಪೊಳಲಿ ಕೋಡಿಮರಪ್ರತಿಷ್ಠಾಪಿಸಲು ಭೂಮಿಪೂಜೆ,ಗುದ್ದಲಿಪೂಜೆ

ಪೊಳಲಿ : ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬಿಲ್ಲವ ಸಮಾಜ ಸೇವಾರೂಪವಾಗಿ ಅರ್ಪಿಸಿರುವ ನೂತನ ಕೊಡಿಮರ(ಧ್ವಜಸ್ತಂಭ) ಸ್ಥಾಪಿಸುವ ಜಾಗದಲ್ಲಿ ಶುಕ್ರವಾರ ಬೆಳಿಗ್ಗೆ ಸುಬ್ರಹ್ಮಣ್ಯ ತಂತ್ರಿ ನೇತೃತ್ವದ ನಾರಾಯಣ ಭಟ್, ಪರಮೇಶ್ವರ ಭಟ್, ಕೆ. ರಾಮ್ ಭಟ್ ಪೊಳಲಿ ಹಾಗೂ ವಿಷ್ಣುಮೂರ್ತಿ ಪೌರೋಹಿತ್ಯದಲ್ಲಿ ಭೂಮಿಪೂಜೆ-ಗುದ್ದಲಿ ಪೂಜೆ ನಡೆಯಿತು.21vpboomipooje

21vpbhoomipooje

21vpgudalipooje3

21vp02

21-01

21vpgudalipooje1

 

ಈ ಪೂಜಾ ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರ/ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಯು. ತಾರನಾಥ ಆಳ್ವ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ, ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಣಾಧಿಕಾರಿ ಪ್ರವೀಣ್, ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ, ಸುಭಾಷ್ ನಾಯ್ಕ ಉಳಿಪಾಡಿಗುತ್ತು , ಸುಬ್ರಾಯ ಕಾರಂತ ಪೊಳಲಿ, ಕೃಷ್ಣಕುಮಾರ್ ಪೂಂಜ, ನೂತನ ಧ್ವಜಸ್ತಂಭ ನಿರ್ಮಾಣ ಸಮಿತಿ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಗೌರವಾಧ್ಯಕ್ಷ ರಾಮ್‍ದಾಸ ಕೋಟ್ಯಾನ್, ಗಣೇಶ ಪೂಜಾರಿ, ಗೋಪಾಲಕೃಷ್ಣ ಕೈಕಂಬ, ಯಶವಂತ ಪೂಜಾರಿ ಪೊಳಲಿ,ಲೋಕೇಶ್ ಭರಣಿ, ರಾಜು ಕೋಟ್ಯಾನ್ ಪಲ್ಲಿಪಾಡಿ , ಜಯಾನಂದ ಪೂಜಾರಿ, ಉಮೇಶ್‍ಬಾರಿಂಜೆ, ಸದಾಶಿವ ಕರ್ಕೇರ ಕಾಜಿಲ, ಶತೀಶ್ಚಂದ್ರ ಪೂಜಾರಿ ಪಾನಿಲ ಇರುವೈಲು ಹಾಗೂ ರಾಮಪ್ಪ ಪೂಜಾರಿ ಮೊದಲಾದವರು ಇದ್ದರು.

21vp2

 

21vp-03

21vpguddalipooje2

21vpಪೊಳಲಿ ದೇವಸ್ಥಾನದಲ್ಲಿ ಮಾರ್ಚ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ಜರುಗಲಿದೆ. ಇಲ್ಲಿನ ಹಳೆ ಸಂಪ್ರದಾಯದಂತೆ ಈ ಬಾರಿಯೂ ಬಿಲ್ಲವ ಸಮಾಜ ಬಾಂಧವರು ದೇವಿಗೆ ಸ ನೂತನ ಕೊಡಿಮರ(ಧ್ವಜಸ್ತಂಭ)ವನ್ನು ಸಮರ್ಪಿಸಿ ಕೊಡಿಮರದ ಕೆತ್ತನೆ ಕೆಲಸವನ್ನು ಶಿಲ್ಪಿ ಹರೆಕಲ ಬಾಲಕೃಷ್ಣ ಆಚಾರ್ಯ ಪೂರ್ಣಗೊಳಿಸಿದ್ದಾರೆ. ಧ್ವಜಸ್ತಂಭದ ಪೀಠ, ಆಧಾರ ಶಿಲೆ, ಕೊಳವೆ ಕಲ್ಲು, ದಂಬೆಕಲ್ಲಿನ ಕೆತ್ತನೆಯು ಕಾರ್ಕಳದ ಶಿಲ್ಪಿ ಕೃಷ್ಣ ಆಚಾರ್ಯರ ನೇತೃತ್ವದಲ್ಲಿ ಬಹುತೇಕ ಪೂರ್ಣಗೊಂಡಿದೆ. ಐದಡಿ ಎತ್ತರ ಮತ್ತು ಮೂರಡಿ ಅಗಲದ ನವಿಲಿನ ಹುಬ್ಬು ಚಿತ್ರವಿರುವ ಬೆಳ್ಳಿಯ ಗರುಡಧ್ವಜದ ಕೆಲಸ ಅಂತಿಮ ಹಂತದಲ್ಲಿದೆ. ನೂತನ ಕೊಡಿಮರಕ್ಕೆ ಸುಮಾರು 2,500 ಕೇಜಿ ಕಂಚಿನ ಹೊದಿಕೆ ಕೆಲಸ, ಕೊಡಿಮರದ ಬುಡದಲ್ಲಿ ಕೂರ್ಮ, ಪದ್ಮ ಹಾಗೂ ಅಷ್ಟದಿಕ್ಪಾಲಕರ ವಿಗ್ರಹ, ತುದಿಯಲ್ಲಿ ಪಂಚಲೋಹದ ನವಿಲಿನ ಕೆಲಸ ಕೇರಳದ ಶಿಲ್ಪಿ ವಿ ಪಿ ಪ್ರಕಾಶರಿಂದ ನಡೆಯುತ್ತಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter