Published On: Wed, Dec 12th, 2018

2.5 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಬಾರ್ದಿಲ ಶ್ರೀಸಾಂಬ ಸದಾಶಿವ ದೇವಸ್ಥಾನ

ಕೈಕಂಬ: ಮಂಗಳೂರು ತಾಲೂಕಿನ ಕುಪ್ಪೆಪದವು, ಕಿಲೆಂಜಾರು ಗ್ರಾಮದ ಬಾರ್ದಿಲ ಶ್ರೀಸಾಂಬ ಸದಾಶಿವ ದೇವಸ್ಥಾನವು ಪರಶುರಾಮ ಮುನಿಯಿಂದ ಸ್ಥಾಪಿತವಾದುದು ಎನ್ನುವ ಪ್ರತೀತಿ ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದೆ.IMG-20181212-WA0001
ಈ ದೇವಸ್ಥಾನವನ್ನು ಭಕ್ತರ ಸಹಕಾರದಿಂದ ಸುಮಾರು 2.5 ಕೋ.ರೂ. ವೆಚ್ಚದಲ್ಲಿ ಸಂಪೂರ್ಣ ಜೀರ್ಣೋದ್ಧಾರ ಮಾಡಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರುಗಳಾದ ಡಾ| ವೈ. ಭರತ್ ಶೆಟ್ಟಿ, ರಾಜೇಶ್ ನಾೈಕ್ ಉಳಿಪಾಡಿಗುತ್ತು, ಉಮನಾಥ್ ಕೋಟ್ಯಾನ್, ಮಾಜಿ ಸಚಿವರುಗಳಾದ ಬಿ. ರಮಾನಾಥ ರೈ, ಅಮರನಾಥ ಶೆಟ್ಟಿಯವರ ಗೌರವಾಧ್ಯಕ್ಷತೆಯಲ್ಲಿ. ಡಾ| ಎಂ. ಮೋಹನ್ ಆಳ್ವರ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿದೆ.
ದೇವಸ್ಥಾನದ ಆಡಳಿತ ಮೊಕ್ತೇಸರ ಉಳಿಪಾಡಿಗುತ್ತು ಸೋಮಶೇಖರ ಶೆಟ್ಟಿಯವರು ಈ ಬಗೆಗಿನ ವಿಜ್ಞಾಪನ ಪತ್ರ ಬಿಡುಗಡೆಗೊಂಡಿದೆ. ದೇರೆಬೈಲು ಹರಿಕೃಷ್ಣ ತಂತ್ರಿ ಮತ್ತು ಶಿವಪ್ರಸಾದ್ ತಂತ್ರಿಗಳ ಮಾರ್ಗದರ್ಶನದಲ್ಲಿ, ವಾಸ್ತು ಶಿಲ್ಪಿ ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ ಕಾರ್ಯದ ಜವಾಬ್ದಾರಿಯನ್ನು ಜಗದೀಶ್ ಕುಲಾಲ್ ಪಾಕಜೆ ವಹಿಸಿಕೊಂಡಿದ್ದಾರೆ.
ಛಾವಣಿಗೆ ತಾಮ್ರದ ಹೊದಿಕೆಯ ಶಿಲಾಮಯ ಗರ್ಭಗುಡಿಗೆ ಸುಮಾರು 38 ಲಕ್ಷ ರೂ. ವೆಚ್ಚವಾಗಲಿದ್ದು, ಶಿಲ್ಪಿಗಳಿಂದ ಕೆತ್ತಲ್ಪಟ್ಟ ಕಪ್ಪು ಕಲ್ಲುಗಳಿಂದ ನಿರ್ಮಾಣವಾಗಲಿರುವ ಗರ್ಭಗುಡಿಗೆ ದಾನಿಗಳು ಕೆತ್ತನೆ ಕಲ್ಲುಗಳನ್ನು ದಾನ ರೂಪದಲ್ಲಿ ನೀಡಬಹುದು.
ಒಂದು ಕೋ.ರೂ. ವೆಚ್ಚದಲ್ಲಿ ಮಹಾಗಣಪತಿ ಗುಡಿ, ಕೊಡಮಣಿತ್ತಾಯ ದೈವ ಚಾವಡಿ ಸಹಿತ ಸುತ್ತುಪೌಳಿ, ಗೋಪುರ ನಿರ್ಮಾಣವಾಗಲಿದೆ. ನಾಗಬನ, ರಕ್ತೇಶ್ವರಿ ಗುಡಿಯಲ್ಲದೆ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಭಕ್ತರ ಅನುಕೂಲಕ್ಕಾಗಿ ಅನ್ನಛತ್ರದ ನಿರ್ಮಾಭ ಕಾರ್ಯ ನಡೆಯಲಿದೆ. ಜೀರ್ಣೋದ್ಧಾರದ ಬಳಿಕ ಬ್ರಹ್ಮಕಲಶೋತ್ಸವ ಜರಗಲಿದ್ದು, ಭಕ್ತರು ಸಂಪೂರ್ಣವಾಗಿ ಸಹಕರಿಸುವಂತೆ ಕೋರಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter