Published On: Sat, Dec 8th, 2018

ಎಸ್ ಡಿ ಎಂ ಮಂಗಳಜ್ಯೋತಿಶಾಲೆಯಲ್ಲಿ ವಿಶೇಷ ಮಕ್ಕಳ ಕಲೋತ್ಸವ 2018

ವಾಮಂಜೂರು: ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇಲ್ಲಿ ದಿವಂಗತ ಮಾತೃಶ್ರೀ ರತ್ನಮ್ಮ ಹೆಗ್ಗದೆಯವರ ಸ್ಮರಣಾರ್ಥ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿಶೇಷ ಶಾಲೆಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಉತ್ಸವ ಕಲೋತ್ಸವ 2018 ಇಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ವೈ ಭರತ್ ಶೆಟ್ಟಿ ಅವರು ವಿಶೇಷ ಸಾಮರ್ಥ್ಯದ ಮಕ್ಕಳಲ್ಲಿಯೂ ಅಪಾರವಾದ ಪ್ರತಿಭೆಯಿದೆ , ಅವರ ಪ್ರತಿಭೆಯನ್ನು ಗುರುತಿಸುವ ಕೆಲಸ ಕಲೋತ್ಸವದಂತಹ ಕಾರ್ಯಕ್ರಮಗಳಿಂದ ಆಗಬೇಕಾಗಿದೆ ಎಂದರು.8vpmangalajhyothi

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯಮುನಾ ಡಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಇವರು ಮಾತನಾಡುತ್ತಾ ಎಲ್ಲಾ ವಿಕಲಚೇತನ ಮಕ್ಕಳಿಗೂ ಶಿಕ್ಷಣ ಅತೀ ಅಗತ್ಯ, ಅದರಲ್ಲೂ ಅವರಿಗೆ ಸಮನ್ವಯ ಶಿಕ್ಷಣವು ದೊರಕಿದಲ್ಲಿ ಅವರು ಸಮಾಜದ ಮುಖ್ಯವಾಹಿನಿಗೆ ಸೇರುವುದರಲ್ಲಿ ಸಂಶಯವಿಲ್ಲ ಎಂದರು. ಕಾರ್ಯಕ್ರಮದ ಇನ್ನೋರ್ವ ಅತಿಥಿ ಡಾ ದೇವರಾಜ್ ಅವರು ಮಾತನಾಡುತ್ತಾ ಮಂಗಳಜ್ಯೋತಿ ಶಾಲೆಯ ಅಭಿವೃದ್ಧಿಗೆ ದಿವಂಗತ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಕೊಡುಗೆಯನ್ನು ನೆನೆದರು. ಸಂಸ್ಥೆಯ ಕಾರ್ಯದರ್ಶಿಗಳಾದ  ಫ್ರೊ.  ಎ ರಾಜೇಂದ್ರ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಮಾರಿಯೆಟ್ ಮಸ್ಕರೇನಸ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಅಕ್ಷತಾ ಜನಾರ್ದನ್ ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಗಣೇಶ್ ಭಟ್ ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಹೈಸ್ಕೂಲ್ ವಿಭಾಗದ ಮುಖ್ಯಸ್ಥರಾದ ರಮೇಶ್ ಆಚಾರ್ ವಂದಿಸಿದರು. ಸಂಸ್ಥೆಯ ಶಿಕ್ಷಕರಾದ ಗುರುಪ್ರಸಾದ್ ಹಾಗೂ ರಮ್ಯ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.IMG_0311
ಉಭಯ ಜಿಲ್ಲೆಗಳ 12 ವಿಶೇಷ ಶಾಲೆಗಳಿಂದ 230 ವಿಶೇಷ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಕಲೋತ್ಸವ ದಲ್ಲಿ ಪಾಲ್ಗೊಂಡಿದ್ದರು. ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಚೇತನಾ ವಿಶೇಷ ಶಾಲೆ ಕಾರ್ಕಳ ಇಲ್ಲಿಯ ವಿದ್ಯಾರ್ಥಿ ಮಂಜುನಾಥ್ ಪ್ರಥಮ ಬಹುಮಾನ ಗಳಿಸಿದರೆ, ರೋಮನ್ ಕ್ಯಾಥರಿನ್ ಲೋಬೋ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿ ಆದಿತ್ಯ ದ್ವಿತೀಯ ಹಾಗೂ ವಿಜೇತ ವಿಶೇಷ ಶಾಲೆ ಕಾರ್ಕಳದ ಶಿವಾನಂದ ತೃತೀಯ ಸ್ಥಾನವನ್ನು ಗಳಿಸಿದರು.DSCF5493

DSCF5475
ಚಿತ್ರಕಲೆ ಸ್ಫರ್ಧೆಯಲ್ಲಿ ಚೇತನಾ ವಿಶೇಷ ಶಾಲೆ ಕಾರ್ಕಳ ಇಲ್ಲಿಯ ವಿದ್ಯಾರ್ಥಿ ಆಶ್ರಯ್, ವಿಜೇತ ವಿಶೇಷ ಶಾಲೆ ಕಾರ್ಕಳದ ವಿದ್ಯಾರ್ಥಿ ಅಕ್ಷಯ್ ದ್ವಿತೀಯ, ಲಯನ್ಸ್ ವಿಶೇಷ ಶಾಲೆ ಸುರತ್ಕಲ್ ಇಲ್ಲಿನ ವಿದ್ಯಾರ್ಥಿ ಲಿಖಿತ ತೃತೀಯ ಬಹುಮಾನವನ್ನು ಗಳಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter