Published On: Thu, Dec 6th, 2018

ಸಮಯ ಪ್ರಜ್ಞೆ, ಪ್ರಾಮಾಣಿಕತೆ ಒತ್ತಡ ರಹಿತ ಮನಸ್ಥಿತಿಗಳು ಉಜ್ವಲ ಭವಿಷ್ಯವನ್ನು ರೂಪಿಸುತ್ತದೆ : ಡಾ. ವಿವೇಕ್ ಮೋದಿ

ಮೂಡಬಿದಿರೆ: ಸಮಯ ಪ್ರಜ್ಞೆ, ಪ್ರಾಮಾಣಿಕತೆ, ನಡೆ- ನುಡಿಗಳಲ್ಲಿನ ಶುದ್ದತೆ ಹಾಗೂ ಒತ್ತಡ ರಹಿತ ಮನಸ್ಥಿತಿಗಳು ಉಜ್ವಲ ಭವಿಷ್ಯವನ್ನು ರೂಪಿಸುತ್ತದೆ. ಜೀವನದಲ್ಲಿ ಗುರಿಯನ್ನು ಸಾಧಿಸಲು ಕಠಿಣ ಪರಿಶ್ರಮ ಮತ್ತು ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಅತ್ಯವಶ್ಯಕ ಎಂದು ತರಬೇತುದಾರರಾದ ಡಾ. ವಿವೇಕ್ ಮೋದಿ ಹೇಳಿದರು.

ಆಳ್ವಾಸ್ ಕಾಲೇಜಿನ ನ್ಯಾಚುರೋಪತಿ ಕಾಲೇಜಿನ ಸೆಮಿನಾರ್ ಹಾಲಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಕ್ಲಬ್ ನಲ್ಲಿ ‘’ಪ್ರ್ಯಾಕ್ಟೀಕ್ಯಾಲಿಟಿ ಆಫ್ ಪ್ಯೂರಿಟಿ ಇನ್ ಮೊಡರ್ನ ಟೈಮ್ಸ್’’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

Guest lecture (3)

ಪ್ರಸ್ತುತ ಕಾಲಘಟ್ಟದಲ್ಲಿ ಯುವಕರು ಪರಿಕಲ್ಪನೆಯ ಕೊರತೆಯಿಂದಾಗಿ ಸೂಕ್ತ ಗುರಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವುತ್ತಿದ್ದಾರೆ. ತಮ್ಮ ವ್ಯಕ್ತಿತ್ವವನ್ನು ಪ್ರದರ್ಶನಗೊಳಿಸುವಲ್ಲಿ ಹೆಚ್ಚು ಗಮನಹರಿಸುತ್ತಿದ್ದು, ತಮ್ಮತನವನ್ನು ರೂಪಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಇಂತಹ ಸೂಕ್ಷ್ಮ ಮನಸ್ಥಿತಿಯಿಂದಾಗಿ ಭಯ ಹುಟ್ಟಿಕೊಳ್ಳುತ್ತದೆ. ಅಂತಹ ಅಂಜಿಕೆಯ ಬದುಕು ಬದುಕಲು ಅಸಾಧ್ಯ. ನಮ್ಮ ಯೋಚನೆ ಮತ್ತು ಕಲ್ಪನೆಗೆ ನಾವೇ ಅಧಿಕೃತರಾಗಿರುತ್ತೇವೆ. ಆದ್ದರಿಂದ ನಮ್ಮ ತನವನ್ನು ಅನುಸರಿಸಬೇಕು. ಜೀವನದಲ್ಲಿ ಯಾವುದಾದರೊಂದು ಕೌಶಲ್ಯವನ್ನು ಕರಗತ ಮಾಡಿಕೊಳ್ಳುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

Guest lecture (2)

ಪ್ರಾಮಾಣಿಕ ಪ್ರಾಯೋಗಿಕತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ತುಂಬಾ ಕಠಿಣ. ನಮ್ಮ ಯೋಚನೆ ಹಾಗೂ ವಿಶ್ಲೇಷಣೆಗನುಸಾರವಾಗಿ ನಮ್ಮ ಕ್ರಿಯೆಗಳಿರುವುದಿಲ್ಲ. ಪ್ರಾಮಾಣಿಕ ಪ್ರಯತ್ನವು ಮನುಷ್ಯನ ವೃತ್ತಿ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೇರ ಜೀವನವನ್ನು ನಡೆಸಲಾಗದ ಸಂದರ್ಭದಲ್ಲಿ ನಾವು ಒತ್ತಡವನ್ನು ಅನುಭವಿಸುತ್ತೇವೆ. ಮನಸ್ಸು ನಿಯಂತ್ರಣದಲ್ಲಿರುವುದು ಅವಶ್ಯ.

Guest lecture (1)

ಶುದ್ಧ ಮನಸ್ಥಿತಿಯಿಂದ ಹಾಗೂ ಯೋಗ್ಯ ಚಿಂತನೆಗಳಿಂದ ಏಕಾಗ್ರತೆಯನ್ನು ಬೆಳೆಸಿಕೊಳ್ಳಬಹುದು. ಎಲ್ಲರ ಜೀವನದಲ್ಲಿಯೂ ಒಳ್ಳೆಯ ಮತ್ತು ಕೆಟ್ಟ ವಿಚಾರಗಳು ಇದ್ದೇ ಇರುತ್ತವೆ. ಧನಾತ್ಮಕ ವಿಚಾರಗಳಿಗೆ ಗಮನಹರಿಸದಿದ್ದರೆ ಕಹಿ ಅನುಭವವನ್ನು ಅನುಭವಿಸುವುದು ಖಚಿತ. ಆದ್ದರಿಂದ ನಮ್ಮ ಅವಧಾನ ಉತ್ತಮ ವಿಚಾರಗಳಲ್ಲಿ ಕೇಂದ್ರಿಕೃತವಾಗಬೇಕು ಎಂದು ಹೇಳಿದರು.

Guest lecture (4)

ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಆಳ್ವಾಸ್ ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ದೀಪಕ್ ರಾಜ್ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter