Published On: Mon, Dec 3rd, 2018

ಗುರುಪುರ ಬಂಟರ ಮಾತೃ ಸಂಘ ಕ್ರೀಡಾಕೂಟ ಸಂಘಟನೆಯಲ್ಲಿ ಕ್ರೀಡೆಗೆ ಮಹತ್ವವಿದೆ : ಮಮತಾ ಶೆಟ್ಟಿ

ಕೈಕಂಬ : ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವಿಕೆ, ಸಂಘಟನೆಯ ಮಹತ್ವ ಮತ್ತು ತಮ್ಮ ಸಾಮಥ್ರ್ಯ ಪ್ರದರ್ಶಿಸುವುದು ಮುಖ್ಯ ಎಂದು ಗುರುಪುರ ಬಂಟರ ಮಾತೃ ಸಂಘದ ಯುವ ವಿಭಾಗ ಗಂಜಿಮಠದ ರಾಜ್ ಅಕಾಡೆಮಿ ಮೈದಾನದಲ್ಲಿ ಆಯೋಜಿಸಿದ ಎರಡನೇ ವರ್ಷದ ಬಂಟರ ಕ್ರೀಡಾಕೂಟ ಉದ್ಘಾಟಿಸಿದ ರಾಜ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ಸಂಚಾಲಕಿ ಮಮತಾ ಶೆಟ್ಟಿ ಹೇಳಿದರು.gur-dec-2-mamatha deepa belagu-1

ಅಧ್ಯಕ್ಷತೆ ವಹಿಸಿ ಮಾತಾಡಿದ ಶೆಡ್ಡೆ ಮಂಜುನಾಥ ಭಂಡಾರಿ, ಗುರುಪುರ ಬಂಟರ ಮಾತೃ ಸಂಘ ನಿರಂತರ ಸಮುದಾಯ ಸಂಘಟನೆಯ ಕೆಲಸ ಮಾಡುತ್ತ ಬಂದಿದ್ದು, ಎರಡನೇ ವರ್ಷದ ಈ ಕ್ರೀಡಾಕೂಟ ಯಶಸ್ವಿಯಾಗಲಿ ಮತ್ತು ಸಂಘಕ್ಕೆ ದೇವರ ಶ್ರೀರಕ್ಷೆ ಇರಲಿ ಎಂದರು.gur-dec-2-manjunath shetty-1

ಸಮುದಾಯ ಕಟ್ಟುವಲ್ಲಿ ಕ್ರೀಡೆ ಮಹತ್ವ ಪಡೆಯುತ್ತದೆ. ಈ ಕ್ರೀಡಾಕೂಟ ಬಂಟರ ಸಂಘಟನೆಗೆ ಪೂರಕವಾಗಲಿ ಎಂದು ತಾಲೂಕು ಪಂಚಾಯತಿನ ಮಾಜಿ ಅಧ್ಯಕ್ಷ ಗೋಕುಲದಾಸ ಶೆಟ್ಟಿ ಹೇಳಿದರು.

ವೇದಿಕೆಯಲ್ಲಿ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಸುನಿತಾ ಶೆಟ್ಟಿ, ಸದಾಶಿವ ಶೆಟ್ಟಿ ಏತಮೊಗರುಗುತ್ತು, ಚಂದ್ರಹಾಸ ರೈ ವಾಮಂಜೂರು, ಪ್ರಮೋದ್ ಕುಮಾರ್ ರೈ, ವಿನಯಕುಮಾರ್ ಶೆಟ್ಟಿ, ಸೋಮಶೇಖರ ಶೆಟ್ಟಿ, ಗಂಗಾಧರ ಶೆಟ್ಟಿ, ಶ್ರೀನಿವಾಸ ಮಾಣೈ, ಬಾಲಕೃಷ್ಣ ಭಂಡಾರಿ, ಸದಾನಂದ ಶೆಟ್ಟಿ, ಉಮೇಶ್ ಮುಂಡ, ಪ್ರವೀಣ್ ಆಳ್ವ ಮೊದಲಾವರಿದ್ದರು. ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಸ್ವಾಗತಿಸಿದರೆ, ರಾಜೀವ್ ಶೆಟ್ಟಿ ಸಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಂಚಾಲಕ ಸುದರ್ಶನ ಶೆಟ್ಟಿ ಪೆರ್ಮಂಕಿ ಪ್ರಾಸ್ತಾವಿಕ ಮಾತನಾಡಿದರು. ಉದಯ ಶೆಟ್ಟಿ ವಂದಿಸಿದರು.

ಪುಟಾಣಿಗಳ ಓಟದ ಸ್ಪರ್ಧೆಯೊಂದಿಗೆ ಆರಂಭಗೊಂಡ ಕ್ರೀಡಾಕೂಟದಲ್ಲಿ ಕಬ್ಬಡಿ, ತ್ರೋಬಾಲ್, ವಾಲಿಬಾಲ್ ಹಾಗೂ ವೈಯಕ್ತಿಕ ಕೆಟಗರಿಯ ಕ್ರೀಡೆಗಳು ಜರುಗಿತು. ತೀರ್ಪುಗಾರರಾಗಿ ಶಶಿಧರ ಹೆಗ್ಡೆ, ಪ್ರೇಮನಾಥ, ರವೀಂದ್ರ ಶೆಟ್ಟಿ, ಸಚಿನ್ ಶಕ್ತಿನಗರ, ಜಯಕರ ಶೆಟ್ಟಿ ಕೈಕಂಬ, ಕೇಶವ ಸುವರ್ಣ, ರತನ್ ಕುಮಾರ್, ಶುಭಕರ ಶೆಟ್ಟಿ ಕಾರ್ಯನಿರ್ವಹಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter