Published On: Mon, Nov 19th, 2018

ರಕ್ತದಾನ ಶ್ರೇಷ್ಠದಾನ : ಮಹಡಿ ಶಿವಕುಮಾರ್

ಮೂಡುಬಿದಿರೆ: ದಾನಗಳಲ್ಲಿ ಶ್ರೇಷ್ಠದಾನ ಎಂದರೆ ಅದು ರಕ್ತದಾನ, ತಾನ್ನಲಿರುವ ರಕ್ತವನ್ನು ಇತರರಿಗೆ ದಾನ ಮಾಡುವುದರಿಂದ ಲಕ್ಷಾಂತರ ಜನರ ಜೀವ ಉಳಿಸಬಹುದು ಎಂಬ ಸಮಾಜ ಸೇವೆಯ ಕಲ್ಪನೆಯಿಂದ ಸುಮಾರು 60 ವರ್ಷಗಳಿಂದ ರಕ್ತದಾನದದ ಬಗ್ಗೆ ಸ್ವ-ವೇಷ ತೊಟ್ಟು ಇದರ ಬಗ್ಗೆ ಅರಿವು ಮೂಡಿಸುತ್ತಾ ಇತರರಿಗೆ ಸ್ಪೂರ್ತಿಯೆನಿಸಿರುವ ಮಹಡಿ ಶಿವಕುಮಾರ್ ಮೂಲತಃ ದಾವಣಗೆರೆಯವರು. ವೃತ್ತಿಯಲ್ಲಿ ಕೂಲಿ ಕೆಲಸಗಾರರಾದ ಇವರು, ತನ್ನಲ್ಲಿ ಸಮಾಜಕ್ಕೆ ಏನಾದರು ಉಪಯೋಗ ಆಗಬೇಕು ಎಂಬ ಒಳ್ಳೆಯ ಉದ್ದೇಶದೊಂದಿಗೆ ರಕ್ತದಾನ ಮಾಡುವ ಮೂಲಕ ಸಮಾಜ ಸೇವೆಯನ್ನು ಮಾಡುತ್ತಿದ್ದರು. ಒಟ್ಟು 70 ಬಾರಿ ರಕ್ತದಾನ ಮಾಡಿದ ಇವರು ಯುವಜನಾಂಗಕ್ಕೆ ಒಂದು ಉತ್ತಮ ಮದರಿಯಾಗಿ ನಿಲ್ಲುತ್ತಾರೆ. ಇವರ ಈ ನಿರಂತರ ಸೇವೆಯನ್ನು ಗುರುತಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ, ಆಳ್ವಾಸ್ ನುಡಿಸಿರಿಯಲ್ಲಿ ಒಂದು ಉತ್ತಮ ವೇದಿಕೆ ಕಲ್ಪಿಸಿ ಕೊಟ್ಟರು. 6ನೇ ಬಾರಿ ಆಳ್ವಾಸ್ ನುಡಿಸಿರಿಯಲ್ಲಿ ಬಾಗಿಯಾಗಿರುವ ಮೂಲಕ ಮಹಡಿ ಶಿವಕುಮಾರ್ ತನ್ನ ದೇಹಕ್ಕೆ ಕೆಂಪು, ಬಿಳಿ ಬಣ್ಣದ ಮೂಲಕ ಜನರಿಗೆ ರಕ್ತದಾನದ ಜಾಗೃತಿ ಕಾರ್ಯವನ್ನು ಮಾಡುತ್ತಿದ್ದಾರೆ.

IMG_20181116_105342
ಪ್ರಸ್ತುತ ಸಮಾಜದಲ್ಲಿ ಹಲವಾರು ರಕ್ತ ಸಂಬಂಧಿ ರೋಗಗಳು, ಅಪಘಾತಗಳು ಹೆಚ್ಚಾಗುತ್ತಿದ್ದು ಇದಕ್ಕೆ ರಕ್ತದ ಶೇಖರಣೆ ತುಂಬಾ ಮುಖ್ಯವಾಗಿರುತ್ತದೆ. ಇಂದು ಸಮಾಜದಲ್ಲಿ ರಕ್ತದಾನ ಮಾಡುವ ಮನಸ್ಸುಗಳು ಕಡಿಮೆಯಾಗುತ್ತಿದೆ ಎಂದರು. ಪ್ರಸ್ತುತ ಕಾಲಘಟ್ಟದಲ್ಲಿ ರಕ್ತದಾನದ ಬಗ್ಗೆ ಜನರಲ್ಲಿ ಆತಂಕ, ಭಯ ಹೆಚ್ಚಾಗಿದ್ದು, ಇದರಿಂದ ನಮ್ಮ ದೇಹ ದುರ್ಬಲವಾಗುತ್ತಿದೆ ಅನ್ನೋ ಮನಸ್ಥಿತಿ ಯಿರುವವರು ಹೆಚ್ಚು ಆದರೆ ಅದು ತಪ್ಪು ಕಲ್ಪನೆ. ನಾನು ಸುಮಾರು 70 ಬಾರಿ ರಕ್ತದಾನಮಾಡಿ, ಇತರರು ತನ್ನಿಂದ ಪ್ರೇರಣೆಗೊಳ್ಳುತ್ತಿದ್ದಾರೆ. ಎಂದು ಅಭಿಪ್ರಾಯಪಟ್ಟರು. ರಕ್ತದಾನ ಮಾಡುವುದರಿಂದ ತಮ್ಮಲ್ಲಿರುವ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗಿ ಆರೋಗ್ಯಯುತ ದೇಹ ನಮ್ಮದಾಗಿರುತ್ತದೆ. ಮತ್ತು ಸದಾ ಲವಲವಿಕೆ, ಹುಮ್ಮಸ್ಸಿನಿಂದ ಕೂಡಿರುತ್ತೇವೆ, ಹಣದಿಂದ ಬರುವ ನೆಮ್ಮದಿಗಿಂತ ನಾವು ಸ್ವ ಇಚ್ಚೆಯಿಂದ ರಕ್ತದಾನ ಮಾಡಿದರೆ ಹೆಚ್ಚು ಖುಷಿ, ನೆಮ್ಮದಿ, ಶಾಂತಿ ನಮ್ಮ ಮನದಲ್ಲಿರುತ್ತದೆ. ಜೀವನದಲ್ಲಿ ಒಮ್ಮೆ ರಕ್ತದಾನ ಮಾಡಿ ಅದರಿಂದ ಇನ್ನೊಂದು ಜೀವ ಉಳಿಸಿದ ತೃಪ್ತಿ ತಮ್ಮದಾಗಿರುತ್ತದೆ.
ಕೇವಲ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿದರೆ, ತಾನು ಒಂದು ವೆಬ್‍ಸೈಟ್ ಆರಂಭ ಮಾಡುವ ಮೂಲಕ ಜನರಿಗೆ ಮತ್ತಷ್ಟು ಜಾಗೃತಿ ಮೂಡಿಸುವ ಕಾರ್ಯ ಮಾಡುತಿದ್ದೇನೆ ಎಂದರು. ಮುಂದೆ ಎನ್.ಜಿ.ಒ. ಸಂಸ್ಥೆಯನ್ನು ಆರಂಭಗೊಳಿಸುವ ಯೋಜನೆ ಹಮ್ಮಿಕೊಂಡಿದ್ದರೆ. ಈ ರೀತಿಯ ಸಮಾಜ ಸೇವೆ ಮಾಡುವವರಿಗೆ ಸರ್ಕಾರ ಹಾಗೂ ಇತರ ಸಂಘ ಸಂಸ್ಥೆಗಳಿಂದ ಅನುದಾನ, ಪ್ರೋತ್ಸಾಹ ಅವಶ್ಯಕವಾಗಿರುತ್ತದೆ. ನಮ್ಮ ಸರ್ಕಾರ ಬೇರೆ ಬೇರೆ ರೀತಿಯ ಕಾರ್ಯ ಯೋಜನೆ, ಅನುಷ್ಠಾನ ಎಲ್ಲವನ್ನು ಕೈಗೊಳ್ಳುತ್ತಿದೆ ಆದರೂ ಇಂತಹ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಗುರುತಿಸುವಲ್ಲಿ ವಿಫಲವಾಗುತ್ತಿದೆ ಎಂದು ಟೀಕಿಸಿದರು. ಆಳ್ವಾಸ್ ನುಡಿಸಿರಿಯ ರುವಾರಿ ಡಾ. ಎಂ. ಮೋಹನ್ ಆಳ್ವಾ ತುಂಬ ಒಳ್ಳೆಯ ವ್ಯಕ್ತಿತ್ವ ತನ್ನ ಈ ಸಮಾರಂಭಕ್ಕೆ ಆಮಂತ್ರಿಸಿ ನನ್ನ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದಾರೆ ಅಂದು ಅಭಿಪ್ರಯಪಟ್ಟರು.
ದಾಕ್ಷಿಣಿ ಆರ್.
ಮೂಡುಬಿದಿರೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter