Published On: Tue, Oct 23rd, 2018

ಪ್ರಕೃತಿ ನ್ಯಾಷನಲ್ ಸ್ಕೂಲ್‍ನ ವಾರ್ಷಿಕ ಕ್ರೀಡಾದಿನ

ಕಾರ್ಕಳ: ಸಾಧನೆಗೆ ವಯಸ್ಸು ಮಾನದಂಡವಲ್ಲ. ಯಶಸ್ಸು ಬಂದಾಗ ಮೈಮರೆಯಬಾರದು, ಸೋತಾಗ ಪ್ರಯತ್ನ ನಿಲ್ಲಿಸಿ ಸಾಧ್ಯವಿಲ್ಲ ಎಂದು ಕೈಬಿಡಬಾರದು. ಸೋಲು – ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ ಮುನ್ನಡೆಯಿರಿ ಎಂದು ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಪವರ್ ಲಿಫ್ಟರ್, ಏಕಲವ್ಯ ಪ್ರಶಸ್ತಿ ಪುರಸ್ಕøತ ಕ್ರೀಡಾಪಟು ಕು. ಅಕ್ಷತಾ ಪೂಜಾರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Prakruti Sports Day (2)
ಕಾಂತಾವರ ಶಾರದಾ ನಗರದ ಪ್ರಕೃತಿ ನ್ಯಾಷನಲ್ ಸ್ಕೂಲ್‍ನ 2018-19ನೇಯ ಸಾಲಿನ ವಾರ್ಷಿಕ ಕ್ರೀಡಾದಿನವನ್ನು ಅ.16ರಂದು ಉದ್ಘಾಟಿಸಿ ಮಾತನಾಡಿದರು. ಕ್ರೀಡಾಜ್ಯೋತಿ ಬೆಳಗಲ್ಪಟ್ಟು ಸಂಸ್ಥೆಯ ಕ್ರೀಡಾಂಗಣದಲ್ಲಿ ನಾಲ್ಕು ಗುಂಪುಗಳಲ್ಲಿ ನಾಲ್ಕು ಬಣ್ಣಗಳ ಆಕರ್ಷಕ ಉಡುಗೆಗಳನ್ನು ಧರಿಸಿದ್ದ ವಿದ್ಯಾರ್ಥಿಗಳು ರಮಣೀಯ ನೃತ್ಯ, ಕವಾಯತು ಹಾಗೂ ಆಕರ್ಷಕ ಪಥಸಂಚಲನವನ್ನು ನಡೆಸಿಕೊಟ್ಟರು.

Prakruti Sports Day (3)

ಈ ಸಂದರ್ಭ ಅಕ್ಷತಾ ಪೂಜಾರಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನಿಸಿ ಮಾತನಾಡಿದ ಸಂಸ್ಥೆಯ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ಪ್ರೊ. ಬಿ. ಪದ್ಮನಾಭ ಗೌಡ, ಉತ್ತಮ ಆರೋಗ್ಯ ಮತ್ತು ಕ್ರೀಯಾಶೀಲ ವ್ಯಕ್ತಿತ್ವಕ್ಕಾಗಿ ಕ್ರೀಡೆಯನ್ನು ನಾವು ಪ್ರೋತ್ಸಾಹಿಸಿ ಗೌರವಿಸುವ ಅಗತ್ಯವಿದೆ ಎಂದರು.

Prakruti Sports Day (1)
ಪ್ರಕೃತಿ ನ್ಯಾಷನಲ್ ಶಾಲೆಯ ಪ್ರಾಂಶುಪಾಲ ಡಾ. ರಾಕಿ ಮಥಾಯಿ ಆಂಟನಿ, ಶಾಲಾ ಸಮನ್ವಯಾಧಿಕಾರಿಣಿಯಾದ ಪ್ರತಿಮಾ ಪೈ ಹಾಗೂ ಶಿರಿನ್ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter