ಆಳ್ವಾಸ್ ಪದವಿಪೂರ್ವ ಕಾಲೇಜು ಎನ್ಎಸ್ಎಸ್ ಶಿಬಿರದ ಸಮಾರೋಪ
ಕಾರ್ಕಳ: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಿಯ್ಯಾರಿನಲ್ಲಿ ಒಂದು ವಾರದ ಕಾಲ ನಡೆದ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರವು ಅ.13ರಂದು ಮುಕ್ತಾಯಗೊಂಡಿತು.
ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ ಎಮ್.ಡಿ.ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿ ಮಿಯ್ಯಾರು ಚರ್ಚಿನ ಧರ್ಮಗುರುಗಳಾದ ಫಾದರ್ ಜೆರೋಮ್ ಮೊಂತೆರೊ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಬಿರದಲ್ಲಿ ಮೈಗೂಡಿಸಿಕೊಂಡ ಅಂಶಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತ್ ಸದಸ್ಯರುಗಳಾದ ಉದಯ್ ಕೋಟ್ಯಾನ್, ದಿವ್ಯಶ್ರೀ ಗಿರೀಶ್ ಅಮೀನ್, ಮಿಯ್ಯಾರು ಗ್ರಾಮಪಂಚಾಯತ್ ಸದಸ್ಯ ಪ್ರಕಾಶ ಬಲಿಪ, ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಮೇಶ ಹೆಗ್ಡೆ, ಶಾಲೆಯ ಮುಖ್ಯೋಪಾಧ್ಯಾಯರಾದ ಹರ್ಷವರ್ಧನ್,ಉದ್ಯಮಿ ಅರ್ಚ್ವಲ್ಡ್ ಡಿಸೋಜ, ಸತ್ಯೇಂದ್ರ ನಾಯಕ್, ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಸ್ಕೃತ ಉಪನ್ಯಾಸಕರಾದ ಅಂಬರೀಷ ಚಿಪಳೂಣಕರ್ ಸ್ವಾಗತಿಸಿದರು, ಓSS ಶಿಬಿರಾಧಿಕಾರಿ ದಾಮೋದರ್ ವರದಿ ವಾಚಿಸಿದರು,ಉಪನ್ಯಾಸಕಿ ಶೋಭಿತಾ ಬಹುಮಾನ ವಿತರಣೆ ನಿರ್ವಹಿಸಿದರು ಹಾಗೂ ಉಪನ್ಯಾಸಕರಾದ ರಾಮಕೃಷ್ಣ ಹೆಗಡೆ ನಿರೂಪಿಸಿದರು. ಉಪನ್ಯಾಸಕಿ ಶಲೆಟ್ ಮೊನಿಸ್ ವಂದಿಸಿದರು.