Published On: Mon, Oct 15th, 2018

ಶ್ರೀ ಗೋಪಾಲಕ್ರಷ್ಣ ದೇವಸ್ಥಾನದಲ್ಲಿ ಕಲಾಕಾಣಿಕೆ ಅರ್ಗಂಟ್ ಮೂಹೂರ್ತ

ಬಂಟ್ವಾಳ: ನಾಟಕದ ಮೂಲಕ ಜನರಿಗೆ ನೀತಿಪಾಠವನ್ನು ತಲುಪಿಸುವ ಕಲಾವಿದರಿಗೆ ಶಾರದಾ ಮಾತೆಯ ಅನುಗ್ರಹ ಜೀವನದ ಕೊನೆಯವರೆಗೂ ಸಿಗುತ್ತದೆ ಎಂದು ಉದ್ಯಮಿ ಹರೀಂದ್ರ ಪೈ ಹೇಳಿದರು.
ಪುಂಜಾಲಕಟ್ಟೆಯ ಯವಕರ ತಂಡ ತಾಂಬೂಲ ಕಲಾವಿದೆರ್ ಅವರು ಅಭಿನಯಿಸುವ ರಾಘವೇಂದ್ರ ಕಾರಂತ್ ವಿರಚಿತ ಈ ವರ್ಷದ ನೂತನ ಕಲಾಕಾಣಿಕೆ ಅರ್ಗಂಟ್ ಇದರ ಮೂಹೂರ್ತ ಶ್ರೀ ಗೋಪಾಲಕ್ರಷ್ಣ ದೇವಸ್ಥಾನದಲ್ಲಿ ನಡೆದ ಬಳಿಕ ಮುರುಗೇಂದ್ರ ಮಿತ್ರಮಂಡಳಿಯ ಸಭಾಭವನದಲ್ಲಿ ನಡೆದ ಸಭಾಕಾರ್ಯಕ್ರಮವನ್ನು ದೀಪ ಬೆಳಗಿಸಿ ಅವರು ಮಾತನಾಡಿದರು.
ಒಬ್ಬ ಕಲಾವಿದ ತನ್ನೋಳಗಿನ ನೋವುಗಳನ್ನು ಮರೆಮಾಚಿ ರಂಗಭೂಮಿ ಯಲ್ಲಿ ಇತರರನ್ನು ನಗಿಸುವ ನಟನೆಗೆ ಸಲಾಮ್ ಕೊಡಲೇಬೇಕು.ತುಳುನಾಡಿನ ಜನರು ಕಲೆಗೆ ನೀಡುವ ಪ್ರೋತ್ಸಾಹ ನಿಜಕ್ಕೂ ಅದ್ಬುತ, ಹಾಗಾಗಿಯೇ ಈ ದೇಶ ವಿಶಿಷ್ಠವಾಗಿದೆ ಎಂದರು.

argant muhurtha
ಕಾರ್ಯಕ್ರಮ ದ ಅದ್ಯಕ್ಷ ತೆ ವಹಿಸಿದ ಜಿ.ಪಂ.ತುಂಗಪ್ಪ ಬಂಗೇರ ಮಾತನಾಡಿ, ನಾಟಕ ರಂಗದಲ್ಲಿ ಬದಲಾವಣೆ ಉತ್ತಮ ಬೆಳವಣಿಗೆ ಆದರೆ ನಟನೆಯಲ್ಲಿ ಪರಸ್ಪರ ಪ್ರೀತಿ ಸಹಕಾರ ಆದರ್ಶದ ವ್ಯಕ್ತಿತ್ವ ವಿಕಾಸ ವಾಗಲಿ.ತುಳುನಾಡಿನ ಸಂಸ್ಕೃತಿ, ಕಲೆ ಉಳಿಯಬೇಕಾದರೆ ಒಗ್ಗಟ್ಟು ಬೇಕಾಗಿದೆ , ಅದಕ್ಕೆ ಎಲ್ಲರ ಸಹಕಾರ ಬೇಕಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಚಲನಚಿತ್ರ ನಟ ಸುಂದರ ರೈ ಮಂದಾರ, ಕಲಾಸೇವೆಯಲ್ಲಿ ವ್ಯಕ್ತಿಯಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಿಗೆ ಅವಕಾಶ ನೀಡುವ ಹ್ರದಯವಂತಿಕೆಯ ಮನಸ್ಸು ಬೇಕಾಗಿದೆ. ಕಲೆಯ ಬಗ್ಗೆ ಕಲಾವಿದರಲ್ಲಿರುವ ತುಡಿತವನ್ನು ಗುರುತಿಸಿಕೊಂಡು ವೇದಿಕೆ ನೀಡುವ ಕೆಲಸ ಪೋಷಕರ ಕೈಯಿಂದ ನಡೆಯಬೇಕಾಗಿದೆ. ನಾಟಕ ತಂಡ ಶ್ರೇಷ್ಠ ವಾಗಿ ಬೆಳೆಯುವುದು ಕೇವಲ ಕಲಾವಿದರಿಂದ ಮಾತ್ರ ಎನ್ನುವುದು ಸರಿಯಲ್ಲ, ತಂಡದ ಪ್ರತಿ ವಿಭಾಗದ ವ್ಯಕ್ತಿಯ ಸಾಧನೆಯು ಗುರುತಿಸಲ್ಪಡುತ್ತದೆ ಎಂದರು.

ನಾಟಕ ರಚನೆಕಾರ ರಾಘವೇಂದ್ರ ಕಾರಂತ್ ಪ್ರಾಸ್ತಾವಿಕ ವಾಗಿ ಮಾತನಾಡಿ, ಗ್ರಾಮೀಣ ಪ್ರದೇಶವಾದ ಪುಂಜಾಲಕಟ್ಟೆ ಯ ಭಾಗದಲ್ಲಿ ಚಿಕ್ಕ ನಾಟಕ ತಂಡವಾಗಿ ಹೆಜ್ಜೆಹಾಕುತ್ತಿದೆ. ತಂಡ ಈ ಮಟ್ಟಿಗೆ ಬೆಳೆಯಲು ಈ ಭಾಗದ ಕಲಾಪೋಷಕರು ನೀಡಿದ ಪ್ರೋತ್ಸಾಹ ಕಾರಣವಾಯಿತು ಎಂದರು. ಈ ತಂಡದ ಮೂಲಕ ಪ್ರತಿ ವರ್ಷ ಹೊಸ ನಾಟಕವನ್ನು ರಚಿಸಿ ಕಲಾಭಿಮಾನಿಗಳಿಗೆ ಅರ್ಪಣೆ ಮಾಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕಲಾವಿದರಾದ ಕ್ರಷ್ಣ ಮಂಜೇಶ್ವರ, ಬಿ.ಎಸ್.ಬೋಳೂರ್, ಜೆ.ಪಿ.ತೂಮಿನಾಡು, ಪ್ರಕಾಶ್ ತೂಮಿನಾಡು, ರಾಜೇಶ್ ಮುಗುಳಿ, ಪಿಲಾತಬೆಟ್ಟು ಗ್ರಾ.ಪಂ.ಅದ್ಯಕ್ಷ ಚಂದ್ರಶೇಖರ ಶೆಟ್ಟಿ, ಜೇಸಿ ಜಯೇಶ್ ಬರೆಟ್ಟೋ, ವಿಕ್ಟರ್ ಡಿಸೋಜ, ಮುರುಗೇಂದ್ರ ಮಿತ್ರ ಮಂಡಳಿಯ ಕಾರ್ಯದರ್ಶಿ ಸಂತೋಷ್ ಮೂರ್ಜೆ, ಉದ್ಯಮಿ ಪ್ರಸಾದ್ ಶೆಟ್ಟಿ , ಮಡಂತ್ಯಾರು ಗ್ರಾ.ಪಂ. ಪಿ.ಡಿ.ಒ. ನಾಗೇಶ್ ಎಂ. ಚಂದ್ರ ಹಾಸ ಪುಚ್ಚೇರಿ, ಕಲಾವಿದರಾದ ಬಿ.ಕೆ.ರಾಜ್, ಹಿರಿಯ ನಿರ್ದೇಶಕರಾದ ಬಿ.ಆರ್.ಅಂಚನ್, ತಂಡದ ಸಹಸಂಚಾಲಕ ರಮಾ.ಬಿ.ಸಾಲಿಯಾನ್, ತಂಡದ ನಿರ್ವಾಹಕ ಆರ್.ಡಿ.ಎಸ್. ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರಕ್ಷಿತ್ ಶೆಟ್ಟಿ ಸ್ವಾಗತಿಸಿ, ಅಂಕಿತ್ ಕಾಮತ್ ವಂದಿಸಿದರು. ದೇವದಾಸ್ ಕಜೆಕಾರ್ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter