Published On: Sun, Oct 14th, 2018

ಅ. 14ರಿಂದ 20ರವರೆಗೆ ನಡ್ಯೋಡಿ ಶಾಲೆಯಲ್ಲಿ ಎನ್‍ಎಸ್‍ಎಸ್ ಶಿಬಿರ

ಮೂಡುಬಿದಿರೆ: ಇಲ್ಲಿನ ಜೈನಪದವಿ ಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಅಕ್ಟೋಬರ್ 14ರಿಂದ 20ರವರೆಗೆ ನಡ್ಯೋಡಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಲಿದೆ.
ಶಾಸಕ ಉಮಾನಾಥ ಕೋಟ್ಯಾನ್ ವಾರ್ಷಿಕ ಶಿಬಿರವನ್ನು ಉದ್ಘಾಟಿಸುವರು.
ಜೈನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಧುಕರ ಸಾಲಿನ್ಸ್ ಅಧ್ಯಕ್ಷತೆ ವಹಿಸುವರು. ಪುರಸಭಾ ಸದಸ್ಯರಾದ ರಾಜೇಶ್ ಕೋಟೆಗಾರ್, ಸುಪ್ರಿಯಾ ಡಿ. ಶೆಟ್ಟಿ, ನಡ್ಯೋಡಿ ಶಾಲಾ ಮುಖ್ಯೋಪಧ್ಯಾಯಿನಿ ಜೆ. ವಿಶಾಲಾಕ್ಷಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಹರಿಣಾಕ್ಷಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಪ್ರತಿ ದಿನ ಅಪರಾಹ್ನ ನಡೆಯುವ ಶೈಕ್ಷಣಿಕ ಸಭಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ಶಿಬಿರಾಧಿಕಾರಿ ನವೀನ್ ಎಂ. ಹೆಗ್ಡೆ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter