Published On: Wed, Oct 10th, 2018

ಇತಿಹಾಸ ಅವಲೋಕನ -ವಿಚಾರ ಮಂಥನ ಕಾರ್ಯಕ್ರಮ

ಮೂಡುಬಿದಿರೆ: ಇತಿಹಾಸ ವಿಷಯವು ಎಲ್ಲ ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳಬೇಕಾದ ಸತ್ಯ ಸಂಗತಿಗಳು ಸಮ್ಮಿಶ್ರಣ. ಇತಿಹಾಸ ಓದುವ ವಿದ್ಯಾರ್ಥಿಗಳು ವಸ್ತು ನಿಷ್ಠೆಯನ್ನು ಕಾಯ್ದುಕೊಳ್ಳಬೇಕು. ಚರಿತ್ರೆಗಳನ್ನು ಮತ್ತು ಸತ್ಯದ ವಿಷಯಗಳನ್ನು ತಿಳಿಸುವಂತಹ ಕೆಲಸ ಇತಿಹಾಸಕಾರರಿಂದಾಗಬೇಕು. ಸತ್ಯದ ವಿಷಯಗಳನ್ನು ಇತಿಹಾಸಕಾರ ತಿಳಿಸದಿದ್ದರೆ ಮುಂದಿನ ಜನಾಂಗಕ್ಕೆ ತೊಂದರೆಯಾದೀತು ಮಂಗಳೂರು ವಿವಿಯ ನಿರ್ದೇಶಕ ಪ್ರೊ.ಬಿ.ಉದಯ ಬಾರ್ಕೂರು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ಸಹಯೋಗದಲ್ಲಿ ಮಂಗಳವಾರ ನಡೆದ ದಿ.ಡಾ.ಪಾದೂರು ಗುರುರಾಜ ಭಟ್ ಸ್ಮರಣಾರ್ಥ ಇತಿಹಾಸ ಅವಲೋಕನ ಮತ್ತು ವಿಚಾರ ಮಂಥನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

SMC Histrory programme
ಕಾರ್ಯಕ್ರಮವನ್ನು ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್. ಚಂದ್ರಶೇಖರ್ ದೀಕ್ಷಿತ್ ಅಧ್ಯಕ್ಷತೆಯನ್ನು ವಹಿಸಿದ್ದರು. ಇತಿಹಾಸ ತಜ್ಞ ಪುಂಡಿಕಾೈ ಗಣಪಯ್ಯ ಭಟ್ ಗುರುರಾಜ ಭಟ್ ಅವರ ಬಗ್ಗೆ ವಿಚಾರ ಮಂಡಿಸಿದರು.
ಇತಿಹಾಸ ವಿಭಾಗದ ಮುಖ್ಯಸ್ಥೆ ಜಯಲಕ್ಷ್ಮೀ, ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿವೇಕ್ ಭಟ್, ಕಾರ್ಯದರ್ಶಿ ಶ್ರೇಯಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರೊ.ಹರೀಶ್ ಸ್ವಾಗತಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರಭಾಕರ ನೀರ್‍ಮಾರ್ಗ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಂಥಪಾಲಕಿ ನಳಿನಿ ಕೆ. ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ತುಳು ಸಂಘದ ಸಂಯೋಜಕಿ ಡಾ.ರಾಧಾಕೃಷ್ಣ ಶೆಟ್ಟಿ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter