Published On: Wed, Oct 10th, 2018

ಪ್ರಾಂತ್ಯ ಪ್ರೌಢಶಾಲೆಯಲ್ಲಿ ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರ

ಮೂಡಬಿದಿರೆ: ನಾವು ನೆಡುವ ಗಿಡಗಳು ಹಸಿರಾಗಿ ಚಿಗುರಿ ನಮಗೆ ಹಣ್ಣು, ಹೂಗಳನ್ನು ಕೊಟ್ಟು ಶುದ್ಧ ಗಾಳಿ ನೀಡಿ ಉಸಿರಾಗುವುದರ ಜೊತೆಗೆ ಪಕ್ಷಿ ಲೋಕಕ್ಕೆ ಆವಾಸ ಸ್ಥಾನವನ್ನು ನೀಡುತ್ತವೆ. ಆದುದರಿಂದ ಎಲ್ಲರೂ ಮಳೆಗಾಲದಲ್ಲಿ ಒಂದೊಂದು ಗಿಡ ನೆಟ್ಟು ಪಕ್ಷಿ ಲೋಕವನ್ನು ಉಳಿಸುವ ತ್ತಾ ಹೆಜ್ಜೆ ಹಾಕಬೇಕು ಎಂದು ರಮ್ಯಾ ತಿಳಿಸಿದರು.

gubbachigoodu (2)
ಇಲ್ಲಿನ ಸರಕಾರಿ ಸಂಯುಕ್ತ ಪ್ರೌಢಶಾಲೆ ಪ್ರಾಂತ್ಯ, ನಡೆಸಿದ ಗುಬ್ಬಚ್ಚಿಗೂಡು ಅಳಿವಿನಂಚಿನಲ್ಲಿರುವ ಪಕ್ಷಿಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಗುಬ್ಬಚ್ಚಿಗೂಡು ಕಾರ್ಯಾಗಾರದ ರೂವಾರಿಯಾಗಿರುವ ನಿತ್ಯಾನಂದ ಶೆಟ್ಟಿ ಮಾತನಾಡಿ, ಪಕ್ಷಿಗಳ ಉಳಿವು ಬಹು ಮುಖ್ಯ.ಪಕ್ಷಿ ಪ್ರಪಂಚ ವಿಸ್ತಾರಗೊಳ್ಳಲು ನಮ್ಮ ಸಹಕಾರ ಅತ್ಯಗತ್ಯ. ಪಕ್ಷಿಗಳಿಗೆ ತೊಂದರೆ ಕೊಡುವುದರ ಬದಲು ಅವುಗಳ ಉಳಿವಿಗೆ ಅಳಿಲು ಸೇವೆ ಮಾಡೋಣ, ಬಾಯಾರಿ ಬರುವ ಹಕ್ಕಿಗಳಿಗೆ ನೀರಿಟ್ಟು ಪುಣ್ಯದ ಕೆಲಸ ಮಾಡುವ ಎಂದರು.

gubbachigoodu (1)
ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ರಾಜಶ್ರೀ.ಬಿ  ಸ್ವಾಗತಿಸಿದರು. ರೂಪ.ಎಸ್.ಕಿಣಿ ವಂದಿಸಿದರು.
ಬಳಿಕ ಪಕ್ಷಿಗಳಿಗೆ ನೀರು ಹಾಗೂ ಆಹಾರ ಇಡುವ ಪಾತ್ರೆಯನ್ನು ಉಚಿತವಾಗಿ ನೀಡಿ ಪ್ರಾತ್ಯಕ್ಷಿಕೆ ನಡೆಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter