Published On: Wed, Oct 10th, 2018

ಆಳ್ವಾಸ್ “ಛಾಯಾಚಿತ್ರ ಸಿರಿ” 2018

ಮೂಡುಬಿದಿರೆ: ಛಾಯಾಚಿತ್ರ ಕಲೆಗೂ ವಿಶೇಷಸ್ಥಾನಮಾನ ಕಲ್ಪಿಸಿಕೊಡುವ ಉz್ದÉೀಶದಿಂದ ಆಳ್ವಾಸ್ ನುಡಿಸಿರಿಯಲ್ಲಿ ಛಾಯಾಗ್ರಹಣ ಕಲೆಯಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಯನ್ನು ಆಯೋಜಿಸಿದೆ.

unnamed
ಮೊನೋಕ್ರೋಮ್, ವೈಲ್ಡ್ ಲೈಫ್, ರೂರಲ್ ಲೈಫ್ ಮತ್ತು ಮೈ ಕಲರ್‍ಫುಲ್ ಇಂಡಿಯಾ ನಾಲ್ಕು ಭಾಗಗಳಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿಲಾಗಿದೆ.
ಯಾವುದೇ ಪ್ರವೇಶ ಶುಲ್ಕವಿಲ್ಲರುವುದಿಲ್ಲ. ವಿಜೇತರಿಗೆ ನಗದು ಬಹುಮಾನವಿದೆ. ಪ್ರತಿ ವಿಭಾಗದಲ್ಲೂ ಪ್ರಥಮ ರೂ. 7 ಸಾವಿರ, ದ್ವಿತೀಯ ರೂ. 5 ಸಾವಿರ ಮತ್ತು ತೃತೀಯ ರೂ. 3 ಸಾವಿರ ನಗದು ಬಹುಮಾನವನ್ನು ಇರಿಸಲಾಗಿದೆ. ಪ್ರತಿ ವಿಭಾಗದಲ್ಲೂ ಸಮಾಧಾನಕರ ಬಹುಮಾನವಿದೆ
ಫೆಡರೇಶನ್ ಆಫ್ ಇಂಡಿಯನ್ ಫೆÇಟೋಗ್ರಾಫಿ ಸಂಸ್ಥೆಯಿಂದ ಈ ಬಾರಿ ಮಾನ್ಯತೆ ದೊರಕಿದೆ. ಹಾಗಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜಯಶಾಲಿಗಳಾಗುವವರಿಗೆ ಅಂಕಗಳೂ ದೊರಕಲಿದೆ. ನಾಲ್ಕು ಭಾಗಗಳಲ್ಲಿ ಜರಗುವ ಸ್ಪರ್ಧೆಯಲ್ಲಿ ವಿಜೇತರ ಹಾಗೂ ಆಯ್ಕೆಯಾದ ಒಟ್ಟು 100 ಚಿತ್ರಗಳನ್ನು ಆಳ್ವಾಸ್ ನುಡಿಸಿರಿ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು.
ಚಿತ್ರಗಳನ್ನು ಆನ್‍ಲೈನ್ ಮೂಲಕವೇ ಕಳುಹಿಸಬೇಕು. ಚಿತ್ರಗಳನ್ನು ಕಳುಹಿಸಲು ಅ. 23 ಕೊನೆಯ ದಿನಾಂಕವಾಗಿದೆ. ಅದಕ್ಕೆ ಬೇಕಾದ ಸಕಲ ಮಾಹಿತಿಯನ್ನು  www.photosiri.com ಲಭ್ಯವಿದೆ.
ಛಾಯಾಚಿತ್ರ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿನ ಬಿ. ಶ್ರೀನಿವಾಸ, ಸಿ.ಆರ್. ಸತ್ಯನಾರಾಯಣ್ ಹಾಗೂ ಎ.ಜಿ. ಲಕ್ಷ್ಮೀನಾರಾಯಣ್ ಅವರು ತೀರ್ಪುಗಾರರಾಗಿರುತ್ತಾರೆ. ಹಿರಿಯ ಛಾಯಾಚಿತ್ರ ಕಲಾವಿದರಾದ ಯಜ್ಞ ಮಂಗಳೂರು, ಜಿನೇಶ್ ಪ್ರಸಾದ್, ರವಿಪೆÇಸವಣಿಕೆ, ಜನಾರ್ದನ ಕೊಡವೂರು ಹಾಗೂ ಅಪುಲ್ ಇರಾ ಸಲಹೆಗಾರರಾಗಿದ್ದಾರೆ. ಛಾಯಾಚಿತ್ರ ಸಿರಿ ಸ್ಪರ್ಧೆಯಲ್ಲಿ ವಯೋಮಿತಿ ಇಲ್ಲದೆ ಹವ್ಯಾಸಿ ಹಾಗೂ ವೃತ್ತಿಪರರೂ ಭಾಗವಹಿಸಬಹುದಾಗಿದ್ದು ಉತ್ತಮ ಚಿತ್ರಗಳ ನಿರೀಕ್ಷೆಯಲ್ಲಿz್ದÉೀವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter