Published On: Tue, Oct 9th, 2018

ಪುಷ್ಪಾ ಜೋಗಿ ಅವರ “ನಮ್ಮೂರಿನ ಬೈಲಗುತ್ತು” ನಾಟಕ ಕೃತಿ ಬಿಡುಗಡೆ

ಮಂಗಳೂರು: ಲೇಖಕಿ ಪುಷ್ಪಾ ಜೋಗಿ ಅವರ “ನಮ್ಮೂರಿನ ಬೈಲಗುತ್ತು” ಎಂಬ ನಾಟಕ ಕೃತಿ ಮಂಗಳೂರು ಪತ್ರಿಕಾ ಭವನದಲ್ಲಿ ಅ.9 ಮಂಗಳವಾರದಂದು ಬಿಡುಗಡೆಗೊಳಿಸಲಾಯಿತು.
ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಅತ್ತಾವರ ಶಿವಾನಂದಕರ್ಕೇರಾ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಪುಷ್ಪಾ ಜೋಗಿ ಅವರು ಬರೆದ ನಾಟಕಗಳಲ್ಲಿ ಅವರ ಜೀವನಾನುಭವದ ಉಲ್ಲೇಖವಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಶಿಕ್ಷಕರಾಗಿದ್ದುಕೊಂಡು ಸಾಹಿತ್ಯ ಕೃಷಿ ನಡೆಸಿದ ಅನೇಕ ಮಂದಿ ಸಾಧಕರಿದ್ದಾರೆ. ಆದರೆ ಪುಷ್ಪಾ ಜೋಗಿ ಅವರೂ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ ನಂತರ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ. “ನಮ್ಮೂರಿನ ಬೈಲಗುತ್ತು” ನಾಟಕ ಕೃತಿಯು ಕುತೂಹಲ ಹೊಂದಿದ್ದು, ಆಸಕ್ತ ಓದುಗರು ಮತ್ತು ಪ್ರೇಕ್ಷಕರಿಗೆ ಉತ್ತಮ ಕೊಡುಗೆಯಾಗಿದೆ.

kruthi bidugade
ಹರೀಶ್ ರೈ ಮಾತನಾಡಿ, ಮಹಿಳೆಯೊಬ್ಬಳು ಸರಣಿ ಕೃತಿ ಬಿಡುಗಡೆ ನಡೆಸುತ್ತಿರುವುದು ಜಿಲ್ಲೆಗೆ ಮೊದಲ ಪ್ರಯತ್ನ ಎಂದು ಶುಭಹಾರೈಸಿದರು.
ಲೇಖಕಿ ಪುಷ್ಪಾ ಜೋಗಿ ಮಾತನಾಡಿ, ಈ ಹವ್ಯಾಸ ನನಗೆ ಬಾಲ್ಯದಿಂದಲೇ ಇದ್ದು, ಪುಸ್ತಕ ಓದುವ, ನಾಟಕ ನೋಡುವ ಹವ್ಯಾಸವಿತ್ತು.ಬಳಿಕ ನಾಟಕ ರಚನೆಯನ್ನು ನಡೆಸಿದ್ದೆ. ಶಾಲೆಯಲ್ಲಿ ಮಕ್ಕಳು ಈ ನಾಟಕಗಳನ್ನು ಅಭಿನಯಿಸಿ ಬಹುಮಾನ ಗೆದ್ದಾಗ ಸಂತಸಪಟ್ಟಿದೆ. ಇದೀಗ ಸಾಮಾಜಿಕ ನಾಟಕಗಳ ಸಂಕಲನ ಬಿಡುಗಡೆಗೊಂಡಿದೆ ಎಂದರು.
ಅಮೃತ ಪ್ರಕಾಶ ಪತ್ರಿಕೆ ಸಾರಥ್ಯದಲ್ಲಿ ನಡೆಯುವ ಸರಣಿ ಕಾರ್ಯಕ್ರಮದ ಅಂಗವಾಗಿ 6ನೇ ಕಾರ್ಯಕ್ರಮವಾಗಿ ಈ ಪುಸ್ತಕ ಬಿಡುಗಡೆಗೊಂಡಿತು.
ಕಾರ್ಯಕ್ರಮವನ್ನು ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಉಪಸಂಪಾದಕ ಕಾಸರಗೋಡು ಅಶೋಕ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಲೇಖಕಿ ಅರುಣಾ ನಾಗರಾಜ್ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter