Published On: Tue, Oct 9th, 2018

ಹೆದ್ದಾರಿಯ ಗುಂಡಿ ಬಂದ್ ಮಾಡಿದ ಸ್ಥಳೀಯರು

ಕುಪ್ಪೆಪದವು: ಹೆದ್ದಾರಿಯಲ್ಲಿ ಉಂಟಾದ ಗುಂಡಿಯನ್ನು ಸ್ಥಳೀಯರೇ ಸೇರಿ ಮುಚ್ಚಿದ ಘಟನೆ ರಾಷ್ಟ್ರೀಯ ಹೆದ್ದಾರಿ -169ರ ಸೂರಲ್ಪಾಡಿಯಿಂದ ಕೈಕಂಬದವರೆಗೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅಲ್ಲಲ್ಲಿ ಗುಂಡಿ ಉಂಟಾಗಿದ್ದಲ್ಲದೆ, ಕೆಲವು ಭಾಗಗಳಲ್ಲಿ ಡಾಮರು ಕಿತ್ತುಹೋಗಿದೆ. ಇದನ್ನು ಸರಿಪಡಿಸುವ ಗೋಜಿಗೆ ಹೆದ್ದಾರಿ ಇಲಾಖೆ ಮುಂದಾಗಿಲ್ಲ. ಇದರಿಂದಾಗಿ ಸಂಚಾರ ದುಸ್ತರವಾಗಿದ್ದು, ಅನೇಕ ಅಪಘಾತ ಸಂಭವಿಸಿದೆ. ಆದ್ದರಿಂದ ಇದೀಗ ಸ್ಥಳೀಯರೇ ಸೇರಿ ಸೂರಲ್ಪಾಡಿಯಿಂದ ಕೈಕಂಬದವರೆಗೆ ರಸ್ತೆಯಲ್ಲಿ ಮೂಡಿದ್ದ ಗುಂಡಿಗಳನ್ನು ಮುಚ್ಚಿದ್ದಾರೆ.

gundi (2)
ಸೂರಲ್ಪಾಡಿ ಹೆಲ್ಪಿಂಗ್ ಹಾಂಡ್ಸ್ ಮತ್ತು ಚಾಲೆಂಜರ್ ಫ್ರೆಂಡ್ಸ್ ಸೂರಲ್ಪಾಡಿ ಇವರು ಜಂಟಿಯಾಗಿ ಭಾನುವಾರ ರಾತ್ರಿ ವಾಹನ ಸಂಚಾರ ವಿರಳವಾಗಿರುವ ಸಮಯದಲ್ಲಿ ಬುಲ್ಡೋಝರ್ ಸಹಾಯದಿಂದ ಅನೇಕ ಗುಂಡಿಗಳನ್ನು ಮುಚ್ಚಿದ್ದಾರೆ. ಕಲ್ಲು ಹಾಗೂ ಮಣ್ಣುಗಳನ್ನು ಉಪಯೋಗಿಸಿ ಅನೇಕ ಗುಂಡಿಗಳು ಮುಚ್ವಿದ್ದಾರೆ.

gundi (3)
ಈ ಶ್ರಮದಾನ ಕಾರ್ಯದಲ್ಲಿ ನೂರಾರು ಸ್ಥಳಿಯ ಉತ್ಸಾಹಿ ತರುಣರು ಭಾಗಿಯಾಗಿದ್ದರು. ಗಂಜಿಮಠ ಪಂಚಾಯತ್ ಉಪಾಧ್ಯಕ್ಷ ಝಾಕಿರ್ ಆರ್.ಎಸ್, ಮುಖಂಡರಾದ ನವಾಝ್, ಮೊಹಮ್ಮದ್ ಅಶ್ರಫ್, ಇಕ್ಬಾಲ್, ಕಲಂದರ್, ರಿಯಾಝ್, ಮೊಹಮ್ಮದ್ ಆತೀಶ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter