Published On: Tue, Oct 9th, 2018

“ಹಿ ಈಸ್ ಬ್ಯಾಕ್” ಮೂಲಕ ಹಾಲಿವುಡ್‍ಗೆ ಎಂಟ್ರಿ ಕೊಟ್ಟ ಕರಾವಳಿ ಚೀತಾ

ಮಂಗಳೂರು: ಯಾವುದೇ ಸಿನಿಮಾ ರಂಗಕ್ಕೂ ಸೈ ಎನ್ನುವಂತೆ ನಮ್ಮ ಕರಾವಳಿ ಜನ ಎಲ್ಲೆಂದಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಹಾಲಿವುಡ್‍ನಲ್ಲಿಯೂ ಕರಾವಳಿಯ ಹೆಸರು ಕೇಳಿ ಬರುತ್ತಿದೆ. ಮಂಗಳೂರು ಮೂಲದ ಯಜ್ಞೇಶ್ ಶೆಟ್ಟಿ ಇದೇ ಮೊದಲ ಬಾರಿಗೆ ಹಾಲಿವುಡ್ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ.

Chitah Yajnesh Shetty Press Note (5)
ಬಾಲಿವುಡ್‍ನ ಫೈಟ್ ಮಾಸ್ಟರ್ ಆಗಿರುವ ಇವರು ಮಂಗಳೂರಿನ ಚೀತಾ, ಮಾರ್ಷಲ್ ಆರ್ಟಿಸ್ಟ್ ಚೀತಾ ಎಂದೇ ಹೆಸರುವಾಸಿಯಾಗಿದ್ದಾರೆ. ಆದರೆ ಈಗ ಇವರು ಹಾಲಿವುಡ್‍ನಲ್ಲಿ ಸಿನಿಮಾ ನಿದೇರ್ಶಿಸಲು ತಯಾರಾಗುತ್ತಿದ್ದಾರೆ. ಈ ಹಿಂದೆ ಯಜ್ಞೇಶ್ ಬಾಲಿವುಡ್‍ನ ಅನೇಕ ದಿಗ್ಗಜರುಗಳೊಂದಿಗೆ ಫೈಟ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

Chitah Yajnesh Shetty Press Note (1)
ಹಾಲಿವುಡ್‍ನಲ್ಲಿ ಜನಮನ್ನಣೆ ಗಳಿಸಿದ್ದ “ದಿ ಲೈಫ್ ಆಫ್ ಪೈ” ಸಿನಿಮಾದಲ್ಲಿ ಇವರ ಶಿಷ್ಯ ಪ್ರಮುಖ ಪಾತ್ರ ವಹಿಸಿದ್ದಾರೆ. ಇದರ ಯಶಸ್ಸಿನ ನಂತರ ತಾವೇ ಹಾಲಿವುಡ್‍ಗೆ ನಿರ್ದೇಶನ ಮಾಡಲಿದ್ದಾರೆ.

Chitah Yajnesh Shetty Press Note (2)
ಶೋ ಟೈಮ್ ಸಿನಿಮಾ ಮತ್ತು ಎಸ್‍ಬಿಎಮ್ ಪ್ರೈ ಲಿ. ಪ್ರಸ್ತುತಪಡಿಸುವ “ಹಿ ಈಸ್ ಬ್ಯಾಕ್” ಎಂಬ ಹಾಲಿವುಡ್ ಚಿತ್ರಕ್ಕೆ ವಿಶ್ವ ವಿಖ್ಯಾತ ಅರ್ಮಾನಿ ದುಬೈನ ಬುರ್ಜಾ ಖಲಿಫಾದಲ್ಲಿ ಸೆ.19ರಂದು ಮುಹೂರ್ತ ಡಾ. ಬಿಎಮ್ ಶೆಟ್ಟಿ ನೇತೃತ್ವದಲ್ಲಿ ನಡೆಯಿತು.

Chitah Yajnesh Shetty Press Note (3)
ಈ ಚಿತ್ರದಲ್ಲಿ ಅಫ್ಘಾನಿಸ್ತಾನದ ಅಬ್ ಲೀ ನಾಯಕನಟನಾಗಿ ಹಾಗೂ ರಷ್ಯಾದ ಮಾಜಿ ಅಧ್ಯಕ್ಷರ ಪುತ್ರಿ ನಾಯಕಿಯಾಗಿ ತೆರೆ ಮೇಲೆ ಕಾಣಿಸಲಿದ್ದಾರೆ. ಈ ಚಿತ್ರವು ಸುಮಾರ್ 80ರಿಂದ 100 ಕೋಟಿ ವೆಚ್ಚದಲ್ಲಿ ನಡೆಯಲಿದ್ದು, ಸುರೆಶ್ ಶರ್ಮಾ, ಸುರೇಶ್ ಬಾಬು ಮಲ್ಗೆ ಮತ್ತು ಹಾಲಿವುಡ್ ಕಂಪೆನಿಯೊಂದು ನಿರ್ಮಾಣಕ್ಕೆ ಕೈಜೋಡಿಸಿದೆ. ಅಮರ್ ಜಿತ್ ಶೆಟ್ಟಿ ಕೋ ಪ್ರೋಡ್ಯೂಸರ್ ಆಗಿದ್ದಾರೆ.

Chitah Yajnesh Shetty Press Note (4)
ಮಾರ್ಷಲ್ ಆಟ್ರ್ಸ್ ದೊರೆ ಬ್ರುಸ್ ಲೀ ಗೌರವಾರ್ಥ ಈ ಹಾಲಿವುಡ್ ಚಿತ್ರದ ನಡೆಯಲಿದ್ದು, 2019ರಲ್ಲಿ ಚಿತ್ರೀಕರಣ ಆರಂಭವಾಗಿ ಅದೇ ವರ್ಷ ಬಿಡುಗಡೆಗೊಳಿಸುವ ಯೋಚನೆಯಲ್ಲಿದ್ದಾರೆ.

Chitah Yajnesh Shetty Press Note (6)
ಕಾರ್ಯಕ್ರಮದಲ್ಲಿ ನಿದೇರ್ಶಕ, ನಟ ರಾಕ್‍ಲೈನ್ ವೆಂಕಟೇಶ್, ಸಹನಿರ್ದೇಶಕ ಅಮೃತ್‍ಜಿ ಶೆಟ್ಟಿ, ಕಾರ್ಯಕಾರಿ ನಿರ್ಮಾಪಕ ಮುಂತಾದವರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter