Published On: Sun, Sep 30th, 2018

ಪೊಳಲಿಜನವರಿ 18ರಂದು ಶುಕ್ರವಾರ ಬ್ರಹ್ಮಕಲಶೋತ್ಸವ

ಪೊಳಲಿ : ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳದಲ್ಲಿ ಮುಂದಿನ ವರ್ಷ ಜನವರಿ 18ರಂದು ಶುಕ್ರವಾರ ಬ್ರಹ್ಮಕಲಶೋತ್ಸವ ನಡೆಯಲಿದೆ. ದೇವಸ್ಥಾನದಲ್ಲಿ ಶನಿವಾರ ನಡೆದ ತಾಂಬೂಲ ಪ್ರಶ್ನೆಯಲ್ಲಿ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಪಡಿಸಲಾಯಿತು.

30vp polali
ಕೇರಳದ ಪ್ರಸಿದ್ಧ ಪದ್ಮನಾಭ ಶರ್ಮಾರ ನೇತೃತ್ವದಲ್ಲಿ ನಡೆದ ತಾಂಬೂಲ ಪ್ರಶ್ನೆ ಕಾರ್ಯಕ್ರಮದ ವೇಳೆ ದೇವಸ್ಥಾನದ ಅರ್ಚಕರು, ತಂತ್ರಿಗಳು, ವಾಸ್ತುಶಿಲ್ಪಿ ಮಹೇಶ ಮುನಿಯಂಗಳ, ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ತಾರನಾಥ ಆಳ್ವ, ಶಾಸಕ ರಾಜೇಶ ನಾಯ್ಕ್, ರಮಾನಾಥ ರೈ, ನಾಗರಾಜ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮೊದಲಾದವರು ಇದ್ದರು.
ಜೀರ್ಣೋದ್ಧಾರ ಕೆಲಸ ಕಾರ್ಯಗಳು ಹಲವು ಸಂಘಸಂಸ್ಥೆಗಳ ನೆರವಿನಿಂದ ಮುಂದುವರಿಯುವುದು ಸುಮಾರು ಒಂದು ವರ್ಷದಿಂದ ಇಲ್ಲಿ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದರೂ, ಬ್ರಹ್ಮಕಲಸದ ವೇಳೆ ಪೂರ್ಣ ಕೆಳಸ ಕಾರ್ಯಗಳು ನೆರವೇರಲು ಇಂದಿನಿಂದಲೇ ಪಣತೊಡಬೇಕಾಗಿದ್ದು ಇನ್ನೂ ಬಹಳಷ್ಟು ಕೆಳಸ ಕಾರ್ಯಗಳು ಆಗಬೇಕಿದ್ದು ಊರಿನ ಭಕ್ತಾದಿಗಳು ಸಂಘ ಸಂಸ್ತೆಯವರು ಹೆಚ್ಚಿನ ಮುತುರ್ವಜಿವಹಿಸಬೇಕಾಗಿದೆ ಎಂದು ಜನರ ಅಭಿಪ್ರಾಯಗಳು ಕೇಳಿಬರುತ್ತಿದೆ. ಹೀಗೆಯೇ ಕೆಲಸ ಮುಂದುವರಿದರೆ ಜನವರಿಗೆ ಜೀರ್ಣೋದ್ಧಾರ ಕೆಲಸ ಪೂರ್ಣಗೊಳ್ಳುವುದು ತುಸು ಕಷ್ಟ ಎಂದಿರುವ ಭಕ್ತರು, “ ದೇವಳಕ್ಕೆ ಸಂಭಂದಪಟ್ಟ ಎಲ್ಲಾ ವರ್ಗದವರು ಏಕ ಮನಸ್ಸಿನಿಂದ ಮುಂದುವರಿದರೆ ಈ ಕೆಲಸ ಕಷ್ಟವೇನಲ್ಲ” ಎಂದಿದ್ದಾರೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter