Published On: Wed, Sep 26th, 2018

ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರ ಸಂಚಾಲಕತ್ವದಲ್ಲಿ : ಡಿ. ೨ರಂದು ಕಟೀಲು ಮೇಳಗಳ ತಿರುಗಾಟ ಆರಂಭ

ಕೈಕಂಬ :ಕಟೀಲು  ಯಕ್ಷಗಾನ ಮೇಳಗಳ ಆಡಳಿತಾತ್ಮಕ  ವ್ಯವಸ್ಥೆಯಲ್ಲಿ  ಹಾಗೂ ಯಕ್ಷ ಧರ್ಮ ಭೋಧಿನಿ ಟ್ರಸ್ಟ್ನಲ್ಲಿ   ಅವ್ಯವಹಾರಗಳು ನಡೆದಿದೆ ಎಂದು ಕೆಲ ಮಾಧ್ಯಮಗಳಲ್ಲಿ ಕಟೀಲು ಯಕ್ಷಗಾನ ಮೇಳಗಳ ಬಗ್ಗೆ ಅಪಪ್ರಚಾರದ ಮಾಹಿತಿಗಳು ಬಂದಿವೆ. ಕಾನೂನು ಬಿಟ್ಟು ಯಾವುದೇ ಕಾರ‍್ಯವೆಸಗಿಲ್ಲ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆನುವಂಶಿಕ ಮೊಕ್ತೇಸರರಾದ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ ಹೇಳಿದ್ದಾರೆ. ಅವರು ಬುಧವಾರ ಸಂಜೆ ಕಟೀಲು ದೇಗುಲದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
* ಆಯುಕ್ತರಿಗೆ ವರದಿ
ದೇಗುಲದಲ್ಲಿರುವ ದಾಖಲೆಗಳ ಆಧಾರದಲ್ಲಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಯಕ್ಷಗಾನ ಮೇಳಗಳ ಬಗ್ಗೆ ವರದಿಯನ್ನು ಕಳುಹಿಸಲಾಗಿದೆ. ಕಟೀಲು ಮೇಳಗಳಿಂದ ಕಳೆದ ತಿರುಗಾಟದಲ್ಲಿ ೧ಕೋಟಿ ೪ಲಕ್ಷ ರೂ. ಬಂದಿದೆ. ಮೇಳದ ವೀಳ್ಯ ಹಾಗೂ ಇತರ ಖರ್ಚುಗಳನ್ನು ದೇಗುಲದ ಆಡಳಿತ ಮಂಡಳಿಯೇ ನಿರ್ಧರಿಸುತ್ತದೆಯೇ ಹೊರತು ಮೇಳದ ಸಂಚಾಲಕರು ಅಥವಾ ಯಕ್ಷಧರ್ಮಬೋಧಿನೀ ಟ್ರಸ್ಟ್ ನಿರ್ಧರಿಸುವುದಲ್ಲ ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಮೇಳಗಳು ಹಾಗೂ ಟ್ರಸ್ಟ್ ಬಗ್ಗೆ ಬಂದಿರುವ ದೂರುಗಳ ಹಿನ್ನಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಂದ ಮೇಳಗಳನ್ನು ಏಲಂ ಯಾಕೆ ನಡೆಸಬಾರದು. ದೇವಸ್ಥಾನದಿಂದ ಯಾಕೆ ನಡೆಸಬಾರದು. ಟ್ರಸ್ಟ್‌ನ ಆಸ್ತಿಗಳನ್ನು ಯಾಕೆ ಮುಟ್ಟುಗೋಲು ಹಾಕಬಾರದು ಎಂದು ವಿವರಣೆ ಕೇಳಿ೧೯೨ ಪುಟಗಳ ವರದಿ ಬಂದಿದ್ದು, ಇದಕ್ಕೆ ದೇವಸ್ಥಾನಗಳ ದಾಖಲೆಗಳ ಪ್ರಕಾರ ಉತ್ತರವನ್ನು ನೀಡಿದ್ದೇವೆ. ಅಲ್ಲಿಂದ ವಿವರಣೆ ಕೇಳಿ ಜಿಲ್ಲಾಧಿಕಾರಿಗಳಿಗೆ ಈ ವರದಿ ಬಂದಿದ್ದು, ಜಿಲ್ಲಾ ಆಯುಕ್ತರಿಗೆ ಬಂದಿದೆ. ಇನ್ನು ಅವರು ತನಿಖೆ ನಡೆಸಿ ವರದಿಯನ್ನು ನೀಡಬೇಕಾಗಿದೆ. ಹಾಗಾಗಿ ಇದು ಮೊದಲಿನ ಹಂತಕ್ಕೇ ಬಂದಿದೆ. ದೇಗುಲಕ್ಕೆ ಪರಿಶೀಲನೆಗೆ ಬಂದ ಅಧಿಕಾರಿಗಳಾಗಲೀ ಆಯುಕ್ತರಾಗಲೀ ಮೇಳಗಳ ವ್ಯವಸ್ಥೆಯಲ್ಲಿ ಯಾವುದೇ ಅವ್ಯವಹಾರ ನಡೆದಿರುವುದು ಕಂಡುಬಂದಿಲ್ಲ. ಮೇಳಗಳನ್ನು ಇನ್ನಷ್ಟು ಅಭಿವೃದ್ಧಿ ಮಾಡಬಹುದು. ಸೂಕ್ತ ಬದಲಾವಣೆಗಳನ್ನು ಮಾಡಬಹುದು ಎಂದು ವರದಿ ನೀಡಿದ್ದಾರೆ. ಹಾಗಾಗಿ ಮಾಧ್ಯಮಗಳಲ್ಲಿ ಬರುತ್ತಿರುವ ಮೇಳಗಳ ಏಲಂಗೆ ಕ್ಷಣಗಣನೆ, ಮುಟ್ಟುಗೋಲು ಎಂಬಂತಹ ಸುದ್ದಿಗಳು ಸುಳ್ಳಾಗಿವೆ.
ಮಂದಾರ್ತಿ ಮೇಳಗಳನ್ನೂ ಏಲಂ ನಡೆಸುವುದು ಸರಿ ಅಲ್ಲ ಎಂದು ನಿಲ್ಲಿಸಿದ್ದಾರೆ. ಕಟೀಲು ಮೇಳಗಳ ಏಲಂ ಕೂಡ ಸರಿಯಲ್ಲ ಎಂದು ಹಿಂದಿನ ಆಯುಕ್ತರೂ ತಿಳಿಸಿದ್ದಾರೆ. ಹಾಗಾಗಿ ಕಟೀಲು ಮೇಳಗಳ ಏಲಂ ಇಲ್ಲ. ಮೇಳಗಳ ವ್ಯವಸ್ಥೆ ಹಾಗೂ ಟ್ರಸ್ಟಿನ ಬಗ್ಗೆ ಇದುವರೆಗೂ ಯಾವ ಸೇವಾದಾರರೂ ಯಾವುದೇ ದೂರು ನೀಡಿಲ್ಲ. ದೂರು ನೀಡಿರುವವರು ಸೇವೆಯಾಟ ಆಡಿಸಿದವರಲ್ಲ ಎಂದು  ಕಟೀಲಿನ  ಶ್ರೀಹರಿ ಆಸ್ರಣ್ಣ ತಿಳಿಸಿದರು.IMG-20180926-WA0016
* ಯಾವುದೇ ತನಿಖೆಗೆ ಸಿದ್ದ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಧರ್ಮ ಬೋಧಿಸಿ ಚಾರಿಟೇಬಲ್ ಟ್ರಸ್ಟ್ ಕಲಾವಿದರ ಮತ್ತು ಸೇವಾದಾರರ ಹಿತದೃಷ್ಟಿಯಿಂದ ಸ್ಥಾಪಿಸಲಾಗಿದ್ದು, ಧಾರ್ಮಿಕ ದತ್ತಿ ಇಲಾಖಾಯುಕ್ತರೇ ೨೦೦೬ರಲ್ಲಿ ಧರ್ಮಾರ್ಥ ಸಂಸ್ಥೆ ಎಂದು ಪ್ರಮಾಣ ಪತ್ರ ನೀಡಿದ್ದು, ಯಾವುದೇ ಅವ್ಯವಹಾರ ನಡೆಸಿಲ್ಲ. ಟ್ರಸ್ಟ್‌ನ ಲೆಕ್ಕಪತ್ರಗಳು ಪಾರದರ್ಶಕವಾಗಿದ್ದು, ಯಾವುದೇ ತನಿಖೆಗೂ ಸಿದ್ಧರಿದ್ದೇವೆ ಎಂದು ಟ್ರಸ್ಟ್‌ನ ಸದಸ್ಯರಲ್ಲೊಬ್ಬರಾದ ಮೇಳದ ಕಲಾವಿದರೂ ಆಗಿರುವ ಸುಣ್ಣಂಬಳ ವಿಶ್ವೇಶ್ವರ ಭಟ್ ತಿಳಿಸಿದ್ದಾರೆ. ಟ್ರಸ್ಟ್ ಬಗ್ಗೆ ವರದಿಯಾಗಿರುವ ಆರೋಪಗಳಿಗೆ ಉತ್ತರಿಸಿ, ರಂಗಸ್ಥಳ, ಬಸ್ಸು, ತೊಟ್ಟಿಲು, ಲಾರಿ, ಜನರೇಟರ್ ಇವುಗಳಿಗೆ ದೇಗುಲದ ಆಡಳಿತ ಮಂಡಳಿ ನಿಗದಿಪಡಿಸಿದ ದರವನ್ನಷ್ಟೇ ನಿರ್ವಹಣಾ ವೆಚ್ಚವಾಗಿ ಪಡೆಯಲಾಗುತ್ತಿದ್ದು, ಟ್ರಸ್ಟ್ ಇಚ್ಚೆಯಂತಲ್ಲ. ಈವರೆಗೆ ಇಲಾಖೆಗೆ ದೂರುನೀಡಿರುವ ಕಲಾವಿದ ಮಾಧವ ಬಂಗೇರ ಸೇರಿದಂತೆ ಮೇಳದ ಕಲಾವಿದರು ೨೦೦೬ರಿಂದ ಈವರೆಗೆ ೨.೨೫ಕೋಟಿ ರಜೆಯ ಗೌರವಧನ ಸ್ವೀಕರಿಸಿದ್ದಾರೆ. ಟ್ರಸ್ಟ್‌ನ ಅಧ್ಯಕ್ಷ ರಾಘವೇಂದ್ರ ಆಚಾರ‍್ಯರು ವೈಂiiಕ್ತಿಯವಾಗಿ ವರ್ಷಂಪ್ರತಿ ರೂ ಎರಡು ಲಕ್ಷ ಗೌರವ ಧನಕ್ಕಾಗಿ ನೀಡಿದ್ದಲ್ಲದೆ, ಟ್ರಸ್ಟ್‌ನ ಸದಸ್ಯರೇ ಆರಂಭದಲ್ಲಿ ೨೫ಲಕ್ಷ ಹಾಗೂ ಕಳೆದ ವರ್ಷ ಹತ್ತು ಲಕ್ಷ ನೀಡಿದ್ದಾರೆ. ಹೊರತು ಯಾರಿಂದಲೂ ದೇಣಿಗೆ ಪಡೆದಿಲ್ಲ. ಸೇವಾದಾರರಿಗೆ ಈ ಹಿಂದೆ ಹೊರೆಯಾಗುತ್ತಿದ್ದ ರಂಗಸ್ಥಳ, ಲಾರಿ ಮತ್ತಿತರ ವ್ಯವಸ್ಥೆಗಳಲ್ಲಿ ಸುಧಾರಣೆಗಳನ್ನು ತಂದು ಸೇವಾದಾರರಿಗೆ ಅನುಕೂಲ ಮಾಡಲಾಗಿದೆ. ಅಕಾಲಮೃತ್ಯು ಆದ ಕಲಾವಿದರಿಗೆ ಸಹಾಯಧನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ಕಲಾವಿದರಿಗೆ ಮನೆ ನಿರ್ಮಾಣ, ಮದುವೆ ಇತ್ಯಾದಿ ಕಾರ‍್ಯಕ್ರಮಗಳಿಗೆ ಸಹಾಯ ನೀಡುವ ಯೋಚನೆ ಇದೆ.
*ಡಿಸೆಂಬರ್ ೨ಕ್ಕೆ ಮೇಳದ ತಿರುಗಾಟ, ಯಥಾ ಸ್ಥಿತಿ
ಡಿಸೆಂಬರ್ ೨ಕ್ಕೆ ಕಟೀಲು ಮೇಳಗಳ ಈ ವರುಷದ ತಿರುಗಾಟ ಆರಂಭವಾಗಲಿದ್ದು, ಮೇಳದ ಸಂಚಾಲಕರು ಕಲ್ಲಾಡಿ ದೇವೀಪ್ರಸಾದ ಶೆಟ್ಟರೇ ಆಗಿರುತ್ತಾರೆ. ಟ್ರಸ್ಟ್ ಈ ಹಿಂದಿನಂತೆಯೇ ಕಾರ‍್ಯವೆಸಗಲಿದೆ ಎಂದು ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು.
ಆರೂ ಮೇಳಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ಹಿಂದಿನಂತೆ ಈ ಬಾರಿಯೂ ಮೇಳಗಳಲ್ಲಿ ಕಲಾವಿದರ ವರ್ಗಾವಣೆ ಸಂಚಾಲಕರ ವಿವೇಚನೆಯಂತೆ ನಡೆಯಲಿದೆ ಎಂದವರು ತಿಳಿಸಿದರು.
ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಮೇಳಗಳ ಸಂಚಾಲಕರಾದ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಟ್ರಸ್ಟ್‌ನ ಅಧ್ಯಕ್ಷ ರಾಘವೇಂದ್ರ ಆಚಾರ‍್ಯ, ರವಿ ಆಚಾರ‍್ಯ, ಶಿವಾಜಿ ಶೆಟ್ಟಿ, ರಾಮಣ್ಣ ಶೆಟ್ಟಿ, ಭಜುಂಗ ಶೆಟ್ಟಿ, ಶ್ರೀನಿವಾಸ ಭಟ್, ವಾಸುದೇವ, ಕೊಡೆತ್ತೂರು ಗುತ್ತು ಬಿಪಿನ್ ಶೆಟ್ಟಿ, ಸುಧೀರ್ ಶೆಟ್ಟಿ ಮತ್ತಿತರರಿದ್ದರು.
Displaying 2 Comments
Have Your Say
  1. ಶ್ರೀ ಕ್ಷೇತ್ರ ಕಟೀಲು ದೇವಾಲಯದ ಯಕ್ಷಗಾನ ಮೇಳವು, ಕೇವಲ ಯಕ್ಷಗಾನ ಮೇಳವಾಗಿರುವುದಿಲ್ಲ. ಬದಲಾಗಿ ಯಕ್ಷಗಾನ ಬಯಲಾಟದಲ್ಲಿ ನಾವು ದೇವರನ್ನು ಕಾಣುತ್ತವೆ. ಮತ್ತು ಪಾವಿತ್ರ್ಯದ ಪ್ರತೀಕವಾಗಿದೆ. ಆದ್ದರಿಂದ ಮೇಲಿನ ತೀರ್ಮಾನವು ಅಸಂಖ್ಯ ಹಿಂದುಗಳ ಧಾರ್ಮಿಕ ನಂಬಿಕೆಗೆ ಸಂದ ಗೌರವ.

  2. ಇದು ನಿಜವಾದ ಯಕ್ಷಗಾನ ಪ್ರೇಮಿಗಳಿಗೆ, ಶ್ರೀ ಕ್ಷೇತ್ರದ ಯಕ್ಷಗಾನ ಬಯಲಾಟ ಸೇವಾದಾರರಿಗೆ ಸಂದ ಗೌರವ ಮತ್ತು ಪ್ರಶಸ್ತಿ ಎಂದು ನನ್ನ ಅನಿಸಿಕೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter