Published On: Sun, Sep 23rd, 2018

ಛಾಯಾಗ್ರಾಹಕರಲ್ಲಿ ಆರೋಗ್ಯಕರ ಪೈಪೋಟಿ ಉತ್ತಮ ಬೇಲವಣಿಗೆ: ಡಾ.ಪ್ರಭಾಕರ್ ಭಟ್

ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ (ರಿ). ದ.ಕ.ಉಡುಪಿ ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಶ್ರೀರಾಮ ವಿದ್ಯಾಕೇಂದ್ರ ಕ್ರೀಡಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮ ದ ಉದ್ಘಾಟನೆ ಯನ್ನು ಪುತ್ತೂರು ವಿವೇಕಾನಂದ ವಿದ್ಯಾಭಿವರ್ದಕ ಸಂಘ ದ ಅದ್ಯಕ್ಷ ಡಾ.ಪ್ರಭಾಕರ್ ಭಟ್ ಮಾಡಿದರು.
ಬಳಿಕ ಮಾತನಾಡಿದ ಅವರು ಛಾಯಾಚಿತ್ರ ಕಲೆ ಜೀವನದ ಒಂದು ಭಾಗವಾಗಿ ಸಂತೋಷ, ಭಾವನೆ, ಜೀವನ ರೂಪಿಸುವ ಹಾಗೂ ಶತಮಾನದ ನೆನಪುಗಳನ್ನು ಮೆಲುಕು ಹಾಕುವ ಉತ್ತಮ ಸ್ನೇಹಿತ. ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಉತ್ತಮ ಛಾಯಾಚಿತ್ರ ಗಳನ್ನು ತೆಗೆಯಲು ಸಮರ್ಥ ರಾದವನೇ ಉತ್ತಮ ಛಾಯಾಗ್ರಾಹಕ.ಆರೋಗ್ಯಕರ ಪೈಪೋಟಿಯ ಜೊತೆ ಛಾಯಾಚಿತ್ರ ಗ್ರಾಹಕರು ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆ . ಇದು ಕೇವಲ ಸ್ಥಳೀಯ ಮಟ್ಟದಲ್ಲಿ ಮಾತ್ರವಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಛಾಯಾಗ್ರಹಣ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು ಎಂದು ಹುರಿದುಂಬಿಸಿದರು.

south canara photographer

ಬಂಟ್ವಾಳ ವಲಯ ಅದ್ಯಕ್ಷ ಹರೀಶ್ ಮಾಣಿ ಕಾರ್ಯಕ್ರಮ ದ ಅದ್ಯಕ್ಷ ತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಎಸ್.ಕೆ.ಪಿ.ಎ.ಜಿಲ್ಲಾ ದ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್ ,ತಾ.ಪಂ.ಸದಸ್ಯ ನಾರಾಯಣ ಶೆಟ್ಟಿ ಕುಳ್ಯಾರು, ಬಂಟ್ವಾಳ ಕಬಡ್ಡಿ ಅಸೋಸಿಯೇಶನ್ ಕಾರ್ಯದ್ಯಕ್ಷ ಪುಷ್ಪರಾಜ ಚೌಟ, ಮಾಜಿ ಜಿ.ಪಂ.ಸದಸ್ಯ ಚೆನ್ನಪ್ಪ ಆರ್ ಕೋಟ್ಯಾನ್, ಅಕ್ರತಿ ಕೇಂದ್ರ ಕೊಳಕೀರು ಇದರ ಮಾಲಕ ನಾಗೇಶ್, ಬಿಸಿರೋಡ್ ಟುಲಿಪ್ ಟಯರ್ ಕೇರ್ ಮಾಲಕ ರಾಜ್ ಕುಂದರ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ತನುಂಜಯ ರಾವ್, ಕಲ್ಲಡ್ಕ ಉಪವಲಯ ಪ್ರತಿನಿಧಿ ಜಯರಾಮ ರೈ ಕಲ್ಲಡ್ಕ, ಬಂಟ್ವಾಳ ವಲಯ ಕ್ರೀಡಾ ಕಾರ್ಯದರ್ಶಿ ಶರತ್ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಚೆಸ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ಪಡೆದ ಕು.ಯಶಸ್ವಿ ಪೆರಮೊಗರು, ಯೋಗಾಶನದಲ್ಲಿ ಪ್ರಶಸ್ತಿ ವಿಜೇತೆ ಪ್ರಣಮ್ಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಮಾಜಿ ಅದ್ಯಕ್ಷ ಸುಕುಮಾರ್ ಬಂಟ್ವಾಳ ಸ್ವಾಗತಿಸಿ , ಜಯಕಲ್ಲಡ್ಕ ವಂದಿಸಿದರು. ಹೆಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter