Published On: Sun, Sep 23rd, 2018

ಸಂಪದ್ಭರಿತ ಜಿಲ್ಲೆಯಾಗಲು ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು: ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

ಬಂಟ್ವಾಳ: ದ.ಕ.ಜಿಲ್ಲೆ ಸಂಪದ್ಭರಿತವಾಗಿ ಉಳಿಯಬೇಕಾದರೆ ಇಲ್ಲಿನ ಕೃಷಿ ಸಂಸ್ಕ್ರತಿ ಉಳಿಯಬೇಕು. ತೆಂಗು ಬೆಳೆಗಾರರು ಸೊಸೈಟಿ ಮೂಲಕ ತಂತ್ರಜ್ಞಾನ ದ ಕಂಪೆನಿಗಳನ್ನು ಸ್ಥಾಪನೆ ಮಾಡಿ ಎಂದು ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಹೇಳಿದರು.
ಸಿರಿತುಂಗ ಕರ್ಪೆಯ ಸಮಾಜ ಮಂದಿರದಲ್ಲಿ ಫಲ್ಗುಣಿ ತೆಂಗು ಉತ್ಪಾದಕರ ಸೊಸೈಟಿ ಕರ್ಪೆ ( ರಿ). ಇದರ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ಇಲ್ಲಿ ತೆಂಗಿನ ಪಾರ್ಕ್ ನಿರ್ಮಿಸಲು ಚಿಂತನೆ ನಡೆಸಿದ್ದು ಕೆಲವೊಂದು ತಾಂತ್ರಿಕ ಸಮಸ್ಯೆ ಗಳು ನಿವಾರಣೆಯಾದ ಕೂಡಲೇ ಪಾರ್ಕ್ ನಿರ್ಮಾಣ ಮಾಡುವ ಭರವಸೆ ನೀಡಿದರು.

falguni thegu uthpadane

ಕ್ರಷಿ ಲಾಭದಾಯಕ ವಾಗಿರುವ ಉದ್ಯಮ ಆದರೆ ಹೊಸ ತಂತ್ರಜ್ಞಾನದ ಅಳವಡಿಕೆಯ ಮೂಲಕ ಕ್ರಷಿಕರು ಬದಲಾವಣೆಯತ್ತ ಮುಂದುವರಿಯಬೇಕಾಗಿದೆ. ರೈತರು ಕೀಳರಿಮೆಯ ಮನೋಭಾವ ದಿಂದ ಹೊರಗೆ ಬಂದಾಗ ಮಾತ್ರ ಮುಂದಿನ ಪೀಳಿಗೆಗೆ ಕ್ರಷಿ ಉಳಿಯಬಹುದು. ಕ್ರಷಿ ಸಂಸ್ಕ್ರತಿಯ ನ್ನು ಉಳಿಸಿ ಮತ್ತು ಬೆಳೆಸದಿದ್ದರೆ ದ.ಕ.ಜಿಲ್ಲೆ ವ್ರದ್ದಾಶ್ರಮಗಳ ತಾಣವಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ. ಕ್ರಷಿಯನ್ನು ಹೊಸ ತಂತ್ರಜ್ಞಾನ ದ ಮೂಲಕ ಕಾರ್ಖಾನೆಯನ್ನಾಗಿ ಮಾಡಿದರೆ ಮಾತ್ರ ಕ್ರಷಿಯನ್ನು ಉಳಿಸಬಹುದು ಎಂದು ಹೇಳಿದರು.
ಕಾರ್ಯಕ್ರಮ ದ ಅದ್ಯಕ್ಷ ತೆಯನ್ನು ವಹಿಸಿ ದ್ದ ಮಾಜಿ ತಾ.ಪಂ.ಸದಸ್ಯ ಫಲ್ಗುಣಿ ತೆಂಗು ಉತ್ಪಾದಕರ ಸೊಸೈಟಿ ಯ ಅದ್ಯಕ್ಷ ಪ್ರಭಾಕರ ಪ್ರಭು ಮಾತನಾಡಿ, ಜಿಲ್ಲೆಯ ಲ್ಲಿ ಮಾದರಿಯಾಗಿ ಈ ಸೊಸೈಟಿ ಮುಂದುವರಿಯಲು ಈ ಭಾಗದ ಎಲ್ಲಾ ಕೃಷಿಕರ ಸಹಕಾರ ಬೇಕಾಗಿದೆ. ಈ ಸೊಸೈಟಿ ಯ ಮೂಲಕ ರೈತರ ಆರ್ಥಿಕ ಪರಿಸ್ಥಿತಿ ಯನ್ನು ಉತ್ತಮ ಬೆಳವಣಿಗೆಯ ಜೊತೆ ಸರಕಾರ ದ ಸವಲತ್ತುಗಳನ್ನು ನೇರವಾಗಿ ರೈತರಿಗೆ ನೀಡಲು , ಸಮಸ್ಯೆ ಗಳಿಗೆ ಸ್ಪಂದಿಸುವ ಕೆಲಸ ಮಾಡುವ ಚಿಂತನೆ ಯೊಂದಿಗೆ ಪ್ರಾರಂಬಿಸಲಾಗಿದೆ ಎಂದರು.

ಜಿ.ಪಂ.ತುಂಗಪ್ಪ ಬಂಗೇರ ಮಾತನಾಡಿ, ಕ್ರಷಿಕರು ಸೋಮಾರಿತನವನ್ನು ಬಿಟ್ಟು ಕೆಲಸ ಮಾಡಿದರೆ ಮಾತ್ರ ಕ್ರಷಿಯಲ್ಲಿ ಬದಲಾವಣೆ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಅದ್ಯಕ್ಷೆ ಗುಲಾಬಿ, ಪಿ.ಎಲ್.ಡಿ.ಬ್ಯಾಂಕ್ ಅದ್ಯಕ್ಷ ಸುದರ್ಶನ ಜೈನ್, ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಅದ್ಯಕ್ಷ ಪದ್ಮರಾಜ ಬಲ್ಲಾಳ್, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯದರ್ಶಿ ರವಿಕಿರಣ್ ಪುಣಚ, ಕಾಸರಗೋಡು ಸಿ.ಪಿ.ಸಿ.ಆರ್.ಐ ರವಿಭಟ್, ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರವೀಣ್, ಕರ್ಪೆ ಘಟಕ ರೈತ ಸಂಘದ ಅದ್ಯಕ್ಷ ಹರ್ಷಿತ್ ಮಹದಾಯಿ ಮತ್ತಿರರು ಉಪಸ್ಥಿತರಿದ್ದರು.
ಕಾರ್ಯಕ್ಮರವನ್ನು ಸೊಸೈಟಿ ಕಾರ್ಯದರ್ಶಿ ಗುಣಪಾಲ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಸೊಸೈಟಿ ಯ ನಿರ್ದೇಶಕ ರಿಚರ್ಡ್ ಮೊರಾಸ್ ಸ್ವಾಗತಿಸಿದರು. ನಿರ್ದೇಶಕ ರಾಮಕ್ರಷ್ಣ ವಂದಿಸಿದರು. ರವೀಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter