Published On: Fri, Sep 14th, 2018

ವಿಟ್ಲ 37ನೇ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ

ವಿಟ್ಲ: ಇಲ್ಲಿನ ವಿಶ್ವ ಹಿಂದೂ ಪರಿಷದ್ ಇದರ ಆಶ್ರಯದಲ್ಲಿ ನಡೆಯುವ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆಯ ಮೂಲಕ ವಿಟ್ಲ ಮೇಗಿನಪೇಟೆ ಶ್ರೀ ಮಹಮ್ಮಾಯಿ ಮಂದಿರದಿಂದ ಅನಂತ ಸದನಕ್ಕೆ ಆಗಮಿಸಿತು. ಶ್ರೀ ಬಾಲಕೃಷ್ಣ ಕಾರಂತ ಎರುಂಬು ಇವರ ಪೌರೋಹಿತ್ಯದಲ್ಲಿ ಶ್ರೀ ಗಣಪತಿ ಪ್ರತಿಷ್ಠೆ ಶ್ರೀ ಮಹಾಗಣಪತಿ ಹವನ ನಡೆಯಿತು.

ganeshothsava VHP vittal (2)

ganeshothsava VHP vittal (1)
ಮೂರುಕಜೆ ಮೈತ್ರೇಯಿ ಗುರುಕುಲದ ಸೀತಾರಾಮ ಕೆದಿಲಾಯ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಟ್ಲ ದ ಕ ಜಿಲ್ಲಾ ಹಾಲು ಉತ್ಪಾದಕರ ಸಂಘ ವಿಟ್ಲ ಇದರ ಅಧ್ಯಕ್ಷ ಮೋಹನ ಕಾಯರ್‍ಮಾರ್ ಧ್ವಜಾರೋಹಣ ನೆರವೇರಿಸಿದರು.

ganeshothsava VHP vittal (4)

ಗಣೇಶೊತ್ಸವ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಗೌರವಾಧ್ಯಕ್ಷ ರಾಮದಾಸ ಶೆಣೈ, ಕಾರ್ಯದರ್ಶಿ ಶಶಿಕಾಂತ ಪ್ರಭು, ಕೋಶಾಧಿಕಾರಿ ಗೋವರ್ಧನ ಕುಮಾರ್ ಐ, ಕಟ್ಟೆ ವೀರಪ್ಪ ಮೂಲ್ಯ, ಹರೀಶ್ ಕೆ, ವಿಶ್ವನಾಥ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter