Published On: Wed, Sep 12th, 2018

ಗ್ಯಾಸ್ ಟ್ಯಾಂಕರ್ ಸ್ಪೋಟ: 6 ಸಾವು 3 ಮಂದಿ ನಾಪತ್ತೆ

ಲಖನೌ: ಉತ್ತರ ಪ್ರದೇಶ ಬಿಜ್ನೋರ್ ಜಿಲ್ಲೆಯಲ್ಲಿರುವ ಖಾಸಗಿ ಪೆಟ್ರೋಲ್ ಕೆಮಿಕಲ್ ಕಾರ್ಖಾನೆಯೊಂದರಲ್ಲಿ ಗ್ಯಾಸ್ ಟ್ಯಾಂಕರ್ ಸ್ಪೋಟಗೊಂಡ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, 8 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಪೋಲಿಸರು ತಿಳಿಸಿದ್ದಾರೆ. ಇನ್ನು ಈ ಘಟನೆಯಲ್ಲಿ ಮೂರು ಮಂದಿ ನಾಪತ್ತೆಯಾಗಿದ್ದಾರೆ.

tanker blast
ಇಲ್ಲಿನ ಕೊತ್ವಾಲಿ ನಗರದ ನಗೀನಾ ರಸ್ತೆಯಲ್ಲಿರುವ ಮೋಹಿತ್ ಪೆಟ್ರೋ ಕೆಮಿಕಲ್ ಕಾರ್ಖಾನೆಯಲ್ಲಿ ಕಾರ್ಮಿಕರು ಮೀಥೇನ್ ಗ್ಯಾಸ್ ಟ್ಯಾಂಕ್ ದುರಸ್ತಿ ಮಾಡಿಕೊಳ್ಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಈ ಸ್ಪೋಟದಿಂದ 6 ಮಂದಿ ಕಾರ್ಮಿಕರು ಘಟನಾ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಮೃತ ಕಾರ್ಮಿಕರನ್ನು ಕಮಲ್ವೀರ್, ಲೋಕೇಂದ್ರ, ರವಿ, ಚೆತ್ರಾಮ್, ವಿಕ್ರಾಂತ್ ಮತ್ತು ಬಲ್ ಗೋವಿಂದ್ ಎಂದು ಗುರುತಿಸಲಾಗಿದೆ.
ಕಪಿಲ್, ಪರ್ವೇಜ್ ಮತ್ತು ಅಭಯ್‍ರಾಮ್ ಎಂಬವರು ನಾಪತ್ತೆಯಾಗಿದ್ದಾರೆ. ಸ್ಪೋಟದ ತೀವ್ರತೆ ಎಷ್ಟಿತ್ತೆಂದರೆ ಕಾಮಿಕರ ಮೃತದೇಹ ಮೀಟರ್‍ನಷ್ಟು ದೂರ ಬಿದ್ದಿತ್ತು ಎಂದು ಪ್ರತ್ಯಕ್ಷರ್ದರ್ಶಿಗಳು ವಿವರಿಸಿದರು.
ಈಗಾಗಲೇ ರಕ್ಷಣಾ ಕಾರ್ಯಗಳು ನಡೆಯುತ್ತಿದ್ದು, ಘಟನಾ ಸ್ಥಳದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter