Published On: Fri, Sep 7th, 2018

`ರಿದಮಿಕ್ ಯೋಗ’ ಅತ್ಯದ್ಭುತ ಪ್ರತಿಭೆ ಶಿವಾನಿ-ಶಿಫಾಲಿ

ಸುದ್ದಿ9 .ಆಧುನಿಕ ಶೈಲಿಯ ನೃತ್ಯ ಪ್ರಕಾರಗಳಲ್ಲಿ ಹಾಗೂ ರಿದಮಿಕ್ ಯೋಗದಲ್ಲಿ(ಸಂಗೀತ ತಾಳಬದ್ಧ ಯೋಗ) ಅಪ್ರತಿಮ ಸಾಧನೆಗೈಯುತ್ತಿರುವ ಗುರುಪುರದ ವಿಶ್ವಾನಂದ ಬಡಕರೆ(ಕುಳವೂರು) ಮತ್ತು ಶಶಿಕಲಾ ದಂಪತಿ ಪುತ್ರಿಯರಾದ ಶಿವಾನಿ ಜಿ. ಮತ್ತು ಶಿಫಾಲಿ ಜಿ. ಬಾಲ್ಯದಲ್ಲೇ ನೃತ್ಯಕ್ಕೆ ಮಾರು ಹೋಗಿದ್ದು, ಸಾಕಷ್ಟು ಹೆಸರು ಮಾಡಿದ್ದಾರೆ.7vp sipali shivani

ಸುವರ್ಣ ಟೀವಿಯ `ಪುಟಾಣಿ ಪಂಟ್ರು’, ಝೀ ಕನ್ನಡದ `ಡಾನ್ಸ್ ಕರ್ನಾಟಕ ಡಾನ್ಸ್'(ಸೆಮಿ-ಫೈನಲ್), ಕಲರ್ ಕನ್ನಡದ `ಮಾಸ್ಟರ್ ಡಾನ್ಸರ್’, ಸುವರ್ಣದ `ಸೈ ಟು ಡಾನ್ಸ್’… ಹೀಗೆ ಟೀವಿ ಚಾನೆಲುಗಳ ಮೂಲಕ ಬಹುತೇಕ ಎಲ್ಲರಿಗೂ ಪರಿಚಿತರಾಗಿದ್ದಾರೆ. ಹಿರಿ ಸಹೋದರಿಗಿಂತ ತಂಗಿ ಶಿಫಾಲಿ ಡಾನ್ಸ್ ಹಾಗೂ ಶಾಲಾ ಕಲಿಕೆ ಎರಡರಲ್ಲೂ ಒಂದು ಹೆಜ್ಜೆ ಮುಂದು. ಈಕೆ ಸ್ಟಾರ್ ಪ್ಲಸ್ ಡಾನ್ಸ್ ಆಡಿಶನ್ ನೀಡಿದ್ದಾಳೆ. ಜೊತೆಗೆ `ನಮ್ಮ ಟೀವಿ’ ಡಾನ್ಸ್ ಟು ಡಾನ್ಸ್‍ಗೆ ಆಯ್ಕೆಯಾಗಿದ್ದಾಳೆ.03

ಮಂಗಳೂರು, ಬೆಂಗಳೂರು, ತುಮಕೂರು, ಕಲಬುರ್ಗಿ, ಧಾರವಾಡ, ಉಡುಪಿ, ಪುತ್ತೂರು, ಸುಳ್ಯ, ಭಟ್ಕಳ, ಅಂಕೋಲ, ಕಾಸರಗೋಡು, ಕುಂದಾಪುರ ಹೀಗೆ ರಾಜ್ಯದ ಉದ್ದಗಲಕ್ಕೂ ಸೋಲೊ(ವೈಯಕ್ತಿಕ) ಹಾಗೂ ಗ್ರೂಪ್ ಸ್ಪರ್ಧಾ ಪ್ರದರ್ಶನ ನೀಡಿರುವ ಇವರು ತಮ್ಮ ಪಾದರಸದಂತಹ ನೃತ್ಯ ಕೌಶಲ್ಯದಿಂದ ಪ್ರೇಕ್ಷಕರು ಮತ್ತು ತೀರ್ಪುಗಾರರ ಮೆಚ್ಚುಗೆ ಗಳಿಸಿ ನೂರಾರು ಪ್ರಶಸ್ತಿ ಮುಡಿಗೇರಿಕೊಂಡಿದ್ದಾರೆ. ಊರು ಹಾಗೂ ಪರವೂರ ಹಲವು ಸಂಘ ಸಂಸ್ಥೆಗಳು ಇವರ ಪ್ರತಿಭೆ ಗುರುತಿಸಿ ಸನ್ಮಾನಿಸಿವೆ.02

ಗುರುಪುರ ಕಿನ್ನಿಕಂಬಳದ ಬೆಥನಿ ಇಂಗ್ಲಿಷ್ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಶಿಫಾಲಿ, ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ತನ್ನ ಡಾನ್ಸ್ ಗುರು ಸುಧೀರ್ ಉಳ್ಳಾಲರ ಬೆಂಬಲ ಎಂದೂ ಮರೆತಿಲ್ಲ. ಡಾನ್ಸ್ ಪ್ರದರ್ಶನ ಅನಿವಾರ್ಯವಾಗಿದ್ದಾಗ ಈಕೆಗೆ ಶಾಲೆಯಲ್ಲಿ ಮುಂಗಡ ಪರೀಕ್ಷೆ ನಡೆದಿತ್ತು.

ಎಲ್‍ಕೆಜಿನಿಂದಲೂ ಡಾನ್ಸೆಂದರೆ ಇಬ್ಬರಿಗೂ ಅಚ್ಚುಮೆಚ್ಚು. ಮೊದಮೊಲಿಗೆ ಟೀವಿ ಕಾರ್ಯಕ್ರಮ ನೋಡಿಕೊಂಡು ಡಾನ್ಸ್ ಮಾಡಿದ್ದರೆ, ಬಳಿಕ ಸುಧೀರ್ ನೇತೃತ್ವದ `ಸಿಟಿ ಗೈಸ್’ ಗರಡಿಯಲ್ಲಿ ಆಧುನಿಕ ನೃತ್ಯ ಪ್ರಕಾರಗಳಲ್ಲಿ ಸೈ ಎನಿಸಿಕೊಂಡಿದ್ದಾರೆ.7vp sipali

ರಿದಮಿಕ್ ಯೋಗದಲ್ಲಿ ವಿಶಿಷ್ಟ ಸಾಧನೆಗೈದಿರುವ ಇವರ ಸಾಹಸ(ಸ್ಟಂಟ್), ಏರಿಯಲ್ ಆ್ಯಕ್ಟ್, ಸಮಕಾಲೀನ, ಯಕ್ಷಗಾನ, ಹಿಪ್‍ಹಾಪ್, ಸೆಮಿ ಕ್ಲಾಸಿಕಲ್, ಮತ್ತು ಫ್ರೀಸ್ಟೈಲ್ ಡಾನ್ಸ್ ಪ್ರೇಕ್ಷಕರ ಮೈ ನವಿರೇಳಿಸುವಂತಿರುತ್ತದೆ. ಕಲಬುರ್ಗಿ ಅಂಬೇಡ್ಕರ್ ಸಂಸ್ಥೆ, ಬೆಂಗಳೂರಿನ ಸುಧಾವಾಹಿನಿ ಕಲಾಕೇಂದ್ರ, ಕರ್ನಾಟಕ ನವಚೇತನ, ಶ್ರೀ ಅಯ್ಯಪ್ಪ ಫೌಂಡೇಶನ್ ಡಾನ್ಸ್ ಅಕಾಡೆಮಿ, ಸುಧಾವಾಹಿನಿ ಕಲಾ ಕೇಂದ್ರ(ಪುಟ್ಟಣ್ಣ ಕಣಗಲ್), ಕೇರಳ ಸಮಾಜಂ ಮಂಗಳೂರು ಹೀಗೆ ರಾಜ್ಯದ ಎಲ್ಲೆಡೆಯಿಂದಲೂ ಪ್ರಶಸ್ತಿ ಬಾಚಿಕೊಂಡಿದ್ದಾರೆ.01

ಕುಲಶೇಖರದ ಸೇಕ್ರೆಡ್ ಹಾರ್ಟ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಶಿವಾನಿ ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನಿಟ್ಟಿನಲ್ಲಿ ಈ ವರ್ಷ ಡಾನ್ಸಿಗೆ ತಾತ್ಕಾಲಿಕ ಬಿಡುವು ಕೊಟ್ಟಿದ್ದಾಳೆ. ತಾನೊಬ್ಬ ಡಾನ್ಸ್ ಕೋರಿಯೋಗ್ರಾಫರ್ ಆಗಬೇಕೆನ್ನುವ ಗುರಿ ಹೊಂದಿರುವ ಶಿಫಾಲಿ, ಶಾಲಾ ಡಾನ್ಸ್ ಕಾರ್ಯಕ್ರಮಗಳಿಗೆ ಸ್ವಯಂ ಕೋರಿಯೋಗ್ರಾಫರ್ ಆಗಿದ್ದಾಳೆ.04

ದಕ ಜಿಪಂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸುವ ತಾಪಂ ಮತ್ತು ಜಿಪಂ ಮಟ್ಟದ ರಿದಮಿಕ್ ಯೋಗ ಕಿರಿಯರ ವಿಭಾಗದಲ್ಲಿ ಶಿಫಾಲಿ ಹ್ಯಾಟ್ರಿಕ್ ಪ್ರಥಮ(2016, 17 ಮತ್ತು 2018) ಸಾಧನೆಗೈದಿದ್ದಾಳೆ. ಈ ಬಾರಿ ಬಂಟ್ವಾಳ ತಾಲೂಕಿನ ಕೈರಂಗಳದ ಶಾರದಾ ಗಣಪತಿ ವಿದ್ಯಾಕೇಂದ್ರ ಶಾಲೆಯಲ್ಲಿ ನಡೆದಿದ್ದ ಜಿಲ್ಲಾ ಮಟ್ಟದ ರಿದಮಿಕ್ ಯೋಗ ಸ್ಪರ್ಧೆಯಲ್ಲಿ ಶಿವಾನಿಯೂ ಪ್ರಥಮ ಬಹುಮಾನ ಗಳಿಸಿದ್ದು, ಇಬ್ಬರೂ ವಲಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮೈಸೂರು ಡಿವಿಜನಿನಲ್ಲಿ ಸ್ಪರ್ಧೆ ನಡೆಯಲಿದೆ. ಇಬ್ಬರೂ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಲೆಂದು ಹಾರೈಕೆ.

*ದನಂಜಯ ಗರುಪುರ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter